ವಿಜಯವಾಣಿ ವಿಶೇಷ, ಗದಗ
ಜಿಲ್ಲೆಯಲ್ಲೆ ಆಗಸ್ಟ ತಿಂಗಳು ಡೆಂಘಿ ನಿಯಂತ್ರಣಕ್ಕೆ ಬಂದಿದೆ. ಕಳೆದೊಂದು ವಾರದಿಂದ ಡೆಂಘಿ ಪ್ರಕರಣಗಳ ಸಂಖ್ಯೆ ತೀವ್ರಗತಿಯಲ್ಲಿ ಕುಸಿದ್ದಿದ್ದು, ಜಿಲ್ಲಾ ಆರೋಗ್ಯ ಇಲಾಖೆ ನಿಟ್ಟುಸಿರು ಬಿಡುವಂತಾಗಿದೆ.
ಜೂನ್ ತಿಂಗಳ ಆರಂಭದಲ್ಲಿ ಡೆಂಘಿ ಪ್ರಕರಣಗಳು ದಾಖಲಾಗಲು ಆರಂಭಿಸಿದ್ದವು. ಜುಲೈ ತಿಂಗಳ ಆರಂಭಕ್ಕೆ ಏರುಗತಿಯಲ್ಲಿ ಸಾಗಿದ್ದ ಪ್ರಕರಣಗಳಿಂದ ಆಸ್ಪತ್ರೆಗಳಲ್ಲಿ ಹೊರ ರೋಗಿ ಮತ್ತು ಒಳ ರೋಗಿಗಳ ವಿಭಾಗ ತುಂಬಿ ತುಳುಕುತ್ತಿದ್ದವು. ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆಗಳಲ್ಲಿ ತೀವ್ರ ಜ್ವರ, ತಲೆನೋವು ಪ್ರಕರಣಗಳೇ ಸದ್ದು ಮಾಡುತ್ತಿದ್ದವು. ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಜಿಲ್ಲಾಸ್ಪತ್ರೆ ವೈದ್ಯರೂ ಕೂಡ ಶಂಕಿತ ಪರೀೆಗಳನ್ನು ಹೆಚ್ಚಿಸಿದ್ದರು. ಏಕಾಏಕಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಆಸ್ಪತ್ರೆಗಳಲ್ಲಿ ಚಿಕಿತ್ಸಾ ಸೌಲಭ್ಯದ ಕೊರತೆ ಎದುರಾಗಿತ್ತು. ಆದರೆ, ದಿನ ಕಳೆದಂತೆ ಸೂಕ್ತ ಚಿಕಿತ್ಸಾ ಸೌಲಭ್ಯ ಮತ್ತು ಮಳೆ ಕಡಿಮೆಯಾದ ಹಿನ್ನೆಲೆ ಪ್ರಕರಣಗಳ ಸಂಖ್ಯೆ ಹಿಡಿತಕ್ಕೆ ಬಂದಿದೆ.
ಡೆಂಘಿ ಪ್ರಕರಣ:
2024ರ ಜನವರಿಯಿಂದ ಈವರೆಗೆ ಜಿಲ್ಲೆಯಲ್ಲಿ 2499 ಪ್ರಕರಣಗಳನ್ನು ಪರೀಸಲಾಗಿದೆ. 204 ಪ್ರಕರಣ ದಾಖಲಾಗಿದೆ ಒಂದು ಸಾವಾಗಿದೆ. ಮೂವರು ಶಂಕಿತರು ಸಾವನ್ನಪ್ಪಿದ್ದು, ಅಧಿಕೃತವಾಗಿ ಡೆಂಘಿ ಎಂದು ಸಾಭಿತಾಗಿಲ್ಲ. ಜುಲೈ ತಿಂಗಳಿನಿಂದಲೂ ಪ್ರತಿನಿತ್ಯ ಪ್ರತಿ ದಿನ 20 ರಿಂದ 30 ಶಂಕಿತ ಪ್ರಕರಣಗಳನ್ನು ಪರೀಸಲಾಗುತ್ತಿದೆ. ಜುಲೈ ತಿಂಗಳಲ್ಲಿ 1020 ಪ್ರಕರಣ ಪರೀಸಲಾಗಿತ್ತು. 107 ಪ್ರಕರಣ ಧೃಢವಾಗಿವೆ. ಆಗಸ್ಟ್ ನಲ್ಲಿ 561 ಪರೀೆ ನಡೆಸಲಾಗಿದೆ. ಅದರಲ್ಲಿ 41 ಪ್ರಕರಣ ದೃಢವಾಗಿವೆ. ಆ. 22 ರಂದು ಡೆಂಘಿ ಪ್ರಕರಣಗಳು ದಾಖಲಾಗಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಶಿರಹಟ್ಟಿಯಲ್ಲಿ ಅಧಿಕ:
ಆರೋಗ್ಯ ಇಲಾಖೆ ಸಿಬ್ಬಂದಿ, ಆರೋಗ್ಯಾಧಿಕಾರಿಗಳು, ವೈದ್ಯರು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೌಕರ್ಯಗಳ ಕೊರತೆಯಿಂದಾಗಿ ಜಿಲ್ಲೆಯಲ್ಲೇ ಶಿರಹಟ್ಟಿ ಭಾಗದಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಲೆ$್ಮಶ್ವರ, ಸುರಣಗಿ, ಹೆಬ್ಬಾಳ, ಪುಟಗಾವ ಬಡ್ನಿ, ಯಳವತ್ತಿ, ಕಲ್ಲಾಪುರ ಭಾಗದಲ್ಲಿ ಪ್ರಕರಣಗಳು ಅಧಿಕವಾಗಿ ದಾಖಲಾಗುತ್ತಿದ್ದವು. ಹಾಗಾಗಿ, ಆರೋಗ್ಯ ಇಲಾಖೆಯಿಂದ ಮೂರು ವಿಶೇಷ ತಂಡಗಳನ್ನು ರಚಿಸಿ ನಿತಂತ್ರಣ ಕಾರ್ಯಕ್ಕೆ ಮುನ್ನುಡೆ ಬರೆಯಲಾಗಿತ್ತು. ಗ್ರಾಮಗಳ ಸ್ವಚ್ಚತೆ ಕಾರ್ಯಕ್ರಮ, ಜಾಗೃತಿ ಕಾರ್ಯಕ್ರಮ ಮತ್ತು ಚಿಕಿತ್ಸಾ ಸೌಲಭ್ಯ ಒದಗಿಸಿದ್ದರಿಂದ ಈ ಗ್ರಾಮಗಳಲ್ಲಿ ಡೆಂಘಿ ನಿಯಂತ್ರಣಕ್ಕೆ ಬಂದಿತು.
ಆರೋಗ್ಯ ಸಲಹೆ:
ಈಡೀಸ್ ಹೊಳ್ಳೆ ಹಗಲು ಹೊತ್ತಿನಲ್ಲಿ ಕಡಿಯುತ್ತದೆ. ರಾತ್ರಿ ಕಚ್ಚುವುದಿಲ್ಲ.
ಮಕ್ಕಳಿಗೆ ಪೂರ್ಣ ತೋಳಿನ ಬಟ್ಟೆ ಧರಿಸುವುದು.
ಬೇವಿನ ಎಣ್ಣೆಯಲ್ಲಿ ಕೊಬ್ಬರಿ ಎಣ್ಣೆ ಮಿಶ್ರಣ ಮಾಡಿ ಕೈಕಾಲುಗಳಿಗೆ ಲೇಪನ ಮಾಡಿಕೊಳ್ಳುವುದು.
ಮನೆ ಕಿಟಕಿಗೆ ಸೊಳ್ಳೆ ಪರೆದೆ.
ಸ್ವಚ್ಚ ವಾತಾವರಣ
ಕೋಟ್:
ಆಶಾ ಕಾರ್ಯಕರ್ತರ ಸೇವೆ ಶ್ಲಾನಿಯ. ತಳ ಮಟ್ಟದಲ್ಲಿ ನೇರವಾಗಿ ಸಮೀೆ ನಡೆವರು ಆಶಾ ಕಾರ್ಯಕರ್ತರೆ ಆಗಿದ್ದಾರೆ. ಸ್ಥಳದಲ್ಲಿ ಪ್ರಾಯೋಗಿಕ ಟೆಸ್ಟ್ ನಡೆಸಿದ ನಂತರ ಜಿಲ್ಲಾಸ್ಪತ್ರೆಯಲ್ಲಿ ಪರೀಸುವಂತೆ ಸಲಹೆ ನೀಡತ್ತಾರೆ. ಇಲಾಖೆಗೆ ಮಾಹಿತಿ ನೀಡಿ ಡೆಂಘಿ ನಿಯಂತ್ರಣ ಪ್ರಕ್ರಿಯೆಯಲ್ಲಿ ನೇರವಾಗಿ ಭಾಗವಹಿಸುತ್ತಾರೆ.
ಡಾ. ವೆಂಕಟೇಶ ರಾಥೋಡ, ಜಿಲ್ಲಾ ಡೆಂಘಿ ನಿಯಂತ್ರಣಾಧಿಕಾರಿ
ಕೋಟ್:
ಜಿಲ್ಲೆಯಲ್ಲಿ ಪರೀಾ ಕಿಟ್ಗಳ ಸಮಸ್ಯೆ ಇಲ್ಲ. ಜನರಲ್ಲಿ ಜಾಗೃತಿ ಮೂಡಬೇಕಾದ ಅನಿವಾರ್ಯತೆ ಇದೆ. ಪ್ರಸ್ತವಾಘಿ ಜಿಲ್ಲೆಯಲ್ಲಿ ಡೆಂಘಿ ನಿಯಂತ್ರಣದಲ್ಲಿ ಇದೆ. ಹಾಗಂತ ನಿರ್ಲಕ್ಷ$್ಯ ವಹಿಸದೇ ಆರೋಗ್ಯ ಇಲಾಖೆ ನೀಡಿದ ಸಲಹೆಯನ್ನು ಪಾಲಿಸಬೇಕು
ಡಾ. ಎಸ್. ಎಸ್. ನೀಲಗುಂದ, ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿ