ಜಿಲ್ಲೆ

ಹೆಚ್ಚುತ್ತಿರುವ ಡೆಂಗ್ಯೂ, ಮಲೇರಿಯಾ ರೋಗಗಳ ಬೀತಿ ನಿಯಂತ್ರಿಸಲು ಕೃಷ್ಣಾ ಹಡಪದ ಆಗ್ರಹ

ಗದಗ: ವಾರ್ಡ ನಂ 16 ರ ಹೊಂಬಳನಾಕಾ ಜನತಾ ಕಾಲೋನಿಯಲ್ಲಿ 40 ವರ್ಷಗಳಿಂದ ನಗರಸಭೆ ಹಾಗೂ ಜಿಲ್ಲಾಡಳಿತದ ನಿರ್ಲಕ್ಷಕ್ಕೊಳಗಾಗಿ  ಇಲ್ಲಿಯವರಿಗೆ ಸ್ವಚ್ಚ ಸುಂದರ ಹಾಗೂ ಯಾವುದೆ ರೀತಿಯ ಮೂಲಭೂತ ಸೌಲಭ್ಶಗಳಿಲ್ಲದೆ ಅಭಿವೃದ್ಧಿ ಶೂನ್ಶವಾಗಿರುವ ಈ ಸ್ಲಂ ಪ್ರದೇಶಕ್ಕೆ ಗದಗಿನ ನೂತನ ಜಿಲ್ಲಾಧೀಕಾರಿಗಳು  ನಗರಸಭೆಯ ಪೌರಾಯುಕ್ತರೊಂದಿಗೆ ಕೇವಲ ಒಂದು ಘಂಟೆಗಳ ಕಾಲ ಸಂಚಾರ ಕೈಗೊಳ್ಳಲು ಹೊಂಬಳನಾಕಾ ಜನತಾ ಕಾಲೋನಿ ಅಭಿವೃದ್ಧಿ ಪರ ಸೇವಾ ಸಂಘದ ಅಧ್ಶಕ್ಷರಾದ ಕೃಷ್ಣಾ ಎಚ್ ಹಡಪದ ಅವರು ಪ್ರಕಟಣೆ ಮೂಲಕ ಮನವಿ ಮಾಡಿ ಒತ್ತಾಯಿಸಿದ್ದಾರೆ

      ಪತ್ರಿಕಾ ಹೇಳಿಕೆ ನೀಡಿರುವ ಅವರು ಹೊಂಬಳನಕಾ ಜನತಾ ಕಾಲೋನಿಯಲ್ಲಿ ಡೆಂಗ್ಯೂ, ಮಲೇರಿಯಾ ರೋಗಗಳು ಹರಡದಂತೆ ಮುಂಜಾಗ್ರತೆ ಕ್ರಮವಹಿಸಿ ಚರಂಡಿ ನೀರನ್ನು ಸ್ವಚ್ಛಗೊಳಿಸಿ, ಸೊಳ್ಳೆಗಳು ಬಾರದಂತೆ ಫಾಗಿಂಗ್ ಮಾಡಿಸಬೇಕು ಮತ್ತು ಜನ ಜೀವನ ಮಾಡುವ ಮದ್ಶದಲ್ಲೆ ಅಡವಿ ಮಾದರಿಯಲ್ಲಿ ಮುಳ್ಳಿನ ಗೀಡಗಳು ಬೆಳೆದು ನಿಂತಿದ್ದು ಇವುಗಳಲ್ಲಿ ಹಾವು ಚೇಳು ಸೇರಿದಂತೆ ವಿಷ ಜಂತುಗಳು ಇರುವುದು ಕಣ್ಣಾರೆ ಕಂಡ ಅಜ್ಜಿ ಹೇಳಿ ತೊರಿಸುತ್ತಿರುವುದು ಕಂಡು ಯಾವುದೆ ಆಶ್ರಯ ವಿಲ್ಲದ ಈ ಭಾಗದ ಬಡ ಜನತೆಯು ಮುಂದೆ ನಮ್ಮ ಗತಿ ಹೆಂಗೆ ಎಂಬ ಚಿಂತೆಯಿಂದ ಬಯ ಬಿತರಾಗಿದ್ದಾರೆ ಅಲ್ಲದೆ  ನೀಜಕ್ಕೂ ಈ ಭಾಗದ ಬಡ ಜನರು ವಾಸಿಸುತ್ತಿರುವ ಪ್ರದೇಶ ಅಡವಿಯಂತಾಗಿ ಮಾರ್ಪಟ್ಟಿದ್ದು ವಿಪರ್ಯಾಸವೆ ಸರಿ

        ಅಡವಿಯಂತೆ ಬೆಳೆದು ನಿಂತ ಮುಳ್ಳಿನ ಗೀಡ ಗಂಟಿಗಳು ತೆರವು ಸೇರಿದಂತೆ ಎಲ್ಲಾ ಗಟಾರುಗಳು ಹಾಗೂ ರೋಡ ತುಂಭ ಹರಿಯುತ್ತಿರುವ ಒಳ ಚರಂಡಿಗಳ ನೀರು ಸ್ವಚ್ಚ ಮಾಡಿಸಲು ಕ್ರಮ ವಹಿಸಬೆಕಾಗಿದೆ

      ಇಗಾಗಲೇ ಬೇಜವಾಬ್ದಾರಿ ಆರೋಗ್ಯ ಇಲಾಖೆಯ ಆಡಳಿತದಿಂದಾಗಿ ಗದಗ ತಾಲೂಕಿನ ಶಿರುಂಜ ಗ್ರಾಮದ 5 ವರ್ಷದ ಕಂದ ಚಿರಾಯಿ ಹೊಸಮನಿ ಡೆಂಗ್ಯೂ ಜ್ವರಕ್ಕೆ ಬಲಿಯಾಗಿದ್ದಾನೆ. ಕಳೆದುಕೊಂಡ ಈ ಕಂದಮ್ಮನನ್ನು ನಾವೇಲ್ಲರು ಮರೆಯಲು ಸಾಧ್ಶವೇ ಇಲ್ಲ ಎಂದು ಡೆಂಗ್ಯೂ ಜ್ವರಕ್ಕೆ ಬಲಿಯಾದ ಕಂದಮ್ಮನನ್ನು ನೆನದು ನೊಂದು ಕೃಷ್ಣಾ ಎಚ್ ಹಡಪದ ಮಾತನಾಡಿ ಗದಗ ಸೇರಿದಂತೆ ರಾಜ್ಯದಾದ್ಯಂತ ಹೆಚ್ಚುತ್ತಿರುವ ಡೆಂಗ್ಯೂ, ಮಲೇರಿಯಾ ರೋಗಗಳಿಗೆ ಮಹಿಳೆಯರು, ಮಕ್ಕಳು, ವೃದ್ಧರು ಬಹು ಬೇಗನೆ ಈ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಅಲ್ಲದೆ ರೋಗಕ್ಕೆ ತುತ್ತಾದವರ ಸಾಕಷ್ಟು ಪ್ರಕರಣಗಳು ಗಣನೀಯವಾಗಿ ದಾಖಲಾಗುತ್ತಿವೆ, ಈಗ ಮಳೆಗಾಲವೂ ಆಗಿರುವುದರಿಂದ ನೀರು ಸಂಗ್ರಹ ವಾಗುವ ಸಾಧ್ಯತೆ ಹೆಚ್ಚು ಇರುವುದರಿಂದ ರೋಗಗಳು ಹರಡಲು ತುಂಬಾ ಅನುಕೂಲಕರವಾಗಿದೆ, ಹಾಗಾಗಿ ನಮ್ಮ ಹೊಂಬಳನಾಕಾ ಜನತಾ ಕಾಲೋನಿಯಲ್ಲಿ ಸೂಮಾರು 25 ವರ್ಷಗಳಿಂದ ಗಟಾರುಗಳು ಕೆಲ ರೋಡಗಳು

ನಿರ್ಮಾಣ ವಿಲ್ಲದ ಕಾರಣ  ಕುಸಿದು ಬಿದ್ದ ಗಟಾರುಗಳಲ್ಲಿ ತೆಗ್ಗುಳಿರುವ ರೋಡಿನಲ್ಲಿ ಮತ್ತು ಅರ್ದಮುರ್ದ ಕಾಮಗಾರಿಯಾಗಿ ಈ ಭಾಗದ ಜನರಿಗೆ ಯಮನಂತೆ ಕಾಡುತ್ತಿರುವ ರಾಜಾ ಕಾಲುವೆಯಲ್ಲಿ ಹಿಡಿ ಗದಗಿನಿಂದ ಹರಿದು ಬರುತ್ತಿರುವ ಕೊಳಚೆ ನೀರು ವಲಸು ಕಸ ಕಡ್ಡಿ  ಸಂಗ್ರಹವಾಗುತ್ತಿದ್ದು ಈ ಪ್ರದೇಶದಲ್ಲಿ ಬಾರಿ ಪ್ರಮಾಣದಲ್ಲಿ ಆತಂಕ ಸೃಸ್ಟಿಸಿದೆ

       ಈ ರೋಗಗಳಿಗೆ ಕಾರಣವಾದ ಕೊಳಚೆ ನೀರು ನಿಲ್ಲುವ ಸ್ಥಳ, ಚರಂಡಿಗಳನ್ನು ನಿಯಮಿತವಾಗಿ ಸ್ವಚ್ಚಗೊಳಿಸಬೆಕಾಗಿದ್ದು ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ಮಾಡಿಸೋದು ಸೇರಿದಂತೆ ಸ್ವಚ್ಚ ಸುಂದರ ಹಾಗೂ ಎಲ್ಲ ರೀತಿಯಲ್ಲಿ ಮೂಲಭೂತ ಸೌಲಭ್ಶಗಳು ವದಗಿಸಿ ಕಾಲೋನಿಯನ್ನು ಅಭಿವೃದ್ಧಿ ಪಡಿಸುವ ಅಗತ್ಶವಾಗಿದೆ ಕಾರಣ ಈ ಸ್ಲಂ ಪ್ರದೇಶಕ್ಕೆ ಕುದ್ದಾಗಿ ಗದಗಿನ ನೂತನ ಜಿಲ್ಲಾಧೀಕಾರಿಗಳು  ನಗರಸಭೆಯ ಪೌರಾಯುಕ್ತರೊಂದಿಗೆ ಕೇವಲ ಒಂದು ಘಂಟೆಗಳ ಕಾಲ ಸಂಚಾರ ಕೈಗೊಂಡು ಈ ಎಲ್ಲ ಸಮಸ್ಶಗಳು ಬಗೆಹರಿಸಿ ಸರಿ ಮಾಡಿಕೊಡಲು ಜಿಲ್ಲಾಡಳಿತಕ್ಕೆ ನಗರಸಭೆಗೆ ಹಾಗೂ ಆರೋಗ್ಯ ಇಲಾಖೆಯ ಆಡಳಿತಕ್ಕೆ ಹೊಂಬಳನಕಾ ಜನತಾ ಕಾಲೋನಿ ಅಭಿವೃದ್ಧಿ ಪರ ಸೇವಾ ಸಂಘದ ಅಧ್ಶಕ್ಷರಾದ ಕೃಷ್ಣಾ ಎಚ್ ಹಡಪದ ಹಾಗೂ ಸಂಘದ ಪದಾಧೀಕಾರಿಗಳು ಒತ್ತಾಯಿಸಿ ಆಗ್ರಹಿಸಿದರು