ಜಿಲ್ಲೆ

ಅಡವಿಸೋಮಾಪೂರದಲ್ಲಿ ಡೆಂಗ್ಯೂ ದಿನಾಚರಣೆ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ

ಈಡಿಸ್​ ಸೊಳ್ಳೆಗಳು ಕಚ್ಚುವುದರಿಂದ ಒಬ್ಬರಿಂದ ಮತ್ತೊಬ್ಬರಿಗೆ ಡೆಂಗ್ಯೂ ಚಿಕುನಗುನ್ಯ ರೋಗವು ಹರಡುತ್ತದೆ. ಆದ್ದರಿಂದ ನೀರಿನ ಪರಿಕರಗಳಲ್ಲಿ ಉತ್ಪತ್ತಿ ಆಗುತ್ತಿರುವ ಲಾರ್ವಾ ನಾಶಪಡಿಸುವುದರಿಂದ ಸೊಳ್ಳೆಗಳನ್ನು ನಿಯಂತ್ರಿಸಿ ರೋಗಗಳು ಹರಡದಂತೆ ತಡೆಗಟ್ಟಬಹುದು ಎಂದು ಆರೋಗ್ಯ ನಿರೀಣಾ-ಧಿಕಾರಿ ಸಿದ್ದಪ್ಪ ಲಿಂಗದಾಳ ಹೇಳಿದರು

ತಾಲೂಕಿನ ಲಕ್ಕುಂಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಆಶ್ರಯದಲ್ಲಿ ಅಡವಿಸೋಮಾಪೂರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಏರ್ಪಡಿಸಿದ್ದ ಡೆಂಗ್ಯೂ ದಿನಾಚರಣೆ ಮತ್ತು ಪರಿಸರ ಸ್ವಚ್ಛತೆ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶಾಲಾ ಮಕ್ಕಳು ಸಮುದಾಯದೊಂದಿಗೆ ಸೇರಿ ನಾಶಪಡಿಸಿ ಡೆಂಗ್ಯು ಜ್ವರ ಬಾರದಂತೆ ತಡೆಗಟ್ಟೋಣ ಎಂದರು.

ಯಾವುದೇ ಜ್ವರ ಇದ್ದರೂ ರಕ್ತ ಪರೀೆ ಮಾಡಿಸಿಕೊಳ್ಳುವುದು ಮುಖ್ಯವಾಗಿದೆ. ಬೇರೆ ಊರಿಗಳಿಗೆ ಹೊಗಿ ಬಂದಂತವರು ರಕ್ತ ಪರಿೆ ಮಾಡಿಸಿಕೊಳ್ಳಬೇಕು. ಡೆಂಗ್ಯೂ ಚಿಕುನಗುನ್ಯ ಮತ್ತು ಮಲೇರಿಯಾ ರೊಗಗಳನ್ನು ನಿಯಂತ್ರಣ ಮಾಡಲು ಸೊಳ್ಳೆಗಳ ಕಡಿತದಿಂದ ಪಾರಾಗಲು ಸೊಳ್ಳೆ ಪರದೆ, ಒಡಮಸ್​ ಲೇಪನ ಮತ್ತು ಸಂಜೆ ಮನೆಯಲ್ಲಿ ಬೇವಿನಸೊಪ್ಪಿನ ಧೂಮಿಕರಣ ಮಾಡುವುದು, ಗಟಾರದಲ್ಲಿ ಕಸಕಡ್ಡಿ ಹಾಕದೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ನೀರಿನ ಪರಿಕರಗಳಲ್ಲಿ ಲಾರ್ವಾ ಆಗದಂತೆ ನೋಡಿಕೊಳ್ಳುವುದು ಮುಖ್ಯವಾಗಿದೆ ಎಂದು ಹೇಳಿದರು.

ಹಿರಿಯ ಆರೋಗ್ಯ ನಿರೀಣಾಧಿಕಾರಿ ವೈ. ಎನ್​. ಕಡೇಮನಿ ಮಾತನಾಡಿ, ಶುದ್ದ ನೀರು ಆಹಾರ ಸೇವನೆ ಮಾಡಬೇಕು. ಪರಿಸರ ಸ್ವಚ್ಛತೆಗೆ ಹೆಚ್ಚು ಗಮನ ನೀಡಬೇಕು. ನೀರಿನ ಪರಿಕರಗಳನ್ನು ಮುಚ್ಚಿಟ್ಟು ಸೊಳ್ಳೆಗಳನ್ನು ಮರಿ ಲಾರ್ವಾ ಆಗದಂತೆ ನೋಡಿಕೊಳ್ಳಬೇಕು. ಜೈವೀಕ ವಿಧಾನ ಗಂಬೂಸಿಯಾ ಮೀನುಗಳನ್ನು ಬೆಳಸಿ ಲಾರ್ವಾ ನಾಶ ಪಡಿಸಬೇಕು. ಅತೀಸಾರ, ವಾಕರಿಕೆ, ವಾಂತಿ, ನಿರ್ಜಲೀಕರಣ ಮತ್ತು ಸ್ನಾಯು ಸೆಳೆತದಂತಹ ಸಮಸ್ಯೆಗಳು ಇದ್ದರೆ ವೈದ್ಯರ ಬಳಿ ಚಿಕಿತ್ಸೆಯನ್ನು ಪಡೆಯಬೇಕು. ಕುದಿಸಿ, ಆರಿಸಿದ ನೀರನ್ನು ಸೇವಿಸಬೇಕು. ತಾಜಾ ಹಣ್ಣುಗಳು, ತರಕಾರಿಗಳನ್ನು ಮತ್ತು ಆಹಾರ ಪದಾರ್ಥಗಳನ್ನು ಉಪಯೋಗಿಸಬೇಕು ಎಂದರು.

ಶಾಲಾ ಮುಖ್ಯೋಪಾದ್ಯಾಯ ಚಿದಾನಂದ ಪತ್ತಾರ ಮಾತನಾಡಿ, ಊಟ ತಯಾರಿಸುವ ಮತ್ತು ಊಟ ಮಾಡುವ ಮುನ್ನ ಕೈಗಳನ್ನು ಸಾಬೂನು ಮತ್ತು ನೀರಿನಿಂದ ಸ್ವಚ್ಛಗೊಳಿಸುವುದು. ಶೌಚಾಲಯವನ್ನು ಉಪಯೋಗಿಸುವ ಮುಂಚೆ ಮತ್ತು ನಂತರ ಕೈಗಳನ್ನು ಸಾಬೂನಿನಿಂದ ಸ್ವಚ್ಛಗೊಳಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಸಿದ್ಧಪಡಿಸಿದ ಆಹಾರ ಪದಾರ್ಥಗಳ ಮೇಲೆ ಕ್ರಿಮಿ ಕೀಟಗಳು ಕುಳಿತುಕೊಳ್ಳುವಂತೆ ಸದಾ ಮುಚ್ಚಳದಿಂದ ಮುಚ್ಚಿಡಬೇಕು. ಮನೆಯ ಶುದ್ದ ನೀರಿನ ಪರಿಕರಗಳಲ್ಲಿ ಉತ್ಪತ್ತಿಯಾಗುವಂತಹ ಸೊಳ್ಳೆಮರಿ ಲಾರ್ವಾ ನಾಶಪಡಿಸವುದು ಮುಖ್ಯವಾಗಿದೆ ಎಂದು ಹೇಳಿದರು.

ನಿರೀಣಾಧಿಕಾರಿ ಎಸ್​. ಬಿ. ಗಡಾದ, ಮುತ್ತಪ್ಪ ಹಟ್ಟಿಮನಿ, ಸವಿತಾ ಪವಾರ, ಮಾಲಾ ಮೇವುಂಡಿ, ಉಮಾದೇವಿ ಖಾನಾಪೂರ, ಮಂಜುಳಾ ಆರಿ, ಲಲಿತಾ ಅಂಗಡಿ ಇದ್ದರು.