Q 
ಜಿಲ್ಲೆ

ಮಕ್ಕಳ ಕಲಿಕೆಯಲ್ಲಿ ಪೋಷಕರ ಪಾತ್ರ ಪ್ರಮುಖ : ಬೇಲೇರಿ

Gadag - Shivanand Hiremath

ಗದಗ: ಮಕ್ಕಳ ಕಲಿಕೆಯಲ್ಲಿ ಪೋಷಕರ ಪಾತ್ರ ಪ್ರಮುಖವಾಗಿದೆ. ಮಕ್ಕಳನ್ನು ಕಡ್ಡಾಯವಾಗಿ ಶಾಲೆಗಳಿಗೆ ಸೇರಿಸಬೇಕು. ಯಾವುದೇ ಮಗು ಶಿಣದಿಂದ ವಂಚಿತರಾಗದಂತೆ ನಾವೆಲ್ಲರೂ ಕಾಳಜಿ ವಹಿಸಬೇಕು. ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಪೋಷಕರು ಮುಂದಾಗಬೇಕು ಎಂದು ಸಂಪನ್ಮೂಲ ವ್ಯಕ್ತಿ ಕೆ.ಎಸ್​ ಬೇಲೇರಿ ಹೇಳಿದರು.

ಅವರು ಗುರುವಾರ ಗದಗ ಶಹರ ೇತ್ರ ಶಿಣಾಧಿಕರಿಗಳ ಕಾರ್ಯಾಲಯದಿಂದ ನಗರದ ಗಂಗಾಪೂರಪೇಟೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಂಯೋಗದಲ್ಲಿ ಜರುಗಿದ 1ನೇ ವರ್ಗಕ್ಕೆ ದಾಖಲಾತಿ ಪ್ರಕ್ರಿಯೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆರು ವರ್ಷ ಮೇಲ್ಪಟ್ಟ ಹೆಣ್ಣಿರಲಿ, ಗಂಡಿರಲಿ, ತಪ್ಪದೇ ಪಾಲಕರು ಸರ್ಕಾರಿ ಶಾಲೆಗಳಲ್ಲಿ ಮಕ್ಕಳನ್ನು ಸೇರಿಸಿ ಮಕ್ಕಳ ಶೈಣಿಕ ಪ್ರಗತಿಗೆ ಶ್ರಮಿಸಬೇಕು. ಗುಣಮಟ್ಟದ ಶಿಣ, ಸಮವಸ್ತ್ರ ಹಾಲು, ಪಠ್ಯಪುಸ್ತಕ, ಆರೋಗ್ಯ ರ್ಪೂಣ ಬೇಯಿಸಿದ ಮೊಟ್ಟೆ, ಬಾಳೆಹಣ್ಣು, ರಾಗಿ ಮಾಲ್ಟ್​ದೊಂದಿಗೆ ಬಿಸಿಯೂಟ, ಶೂ ಭಾಗ್ಯ, ವಿದ್ಯಾಥಿರ್ ವೇತನದಂತಹ ಮಹತ್ವರವಾದ ಯೋಜನೆಗಳನ್ನು ಸರ್ಕಾರ ಯಶಸ್ವಿಯಾಗಿ ಅನುಷ್ಠಾನಗೊಳಿಸಿ ಉಚಿತವಾಗಿ ವಿತರಣೆ ಮಾಡುತ್ತಿದೆ. ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿ ಶೈಣಿಕ ಅಭಿವೃದ್ಧಿಗೆ ಒತ್ತು ನೀಡಿ ಅವರ ಭಾವಿ ಭವಿಷ್ಯತ್ತನ್ನು ಉಜ್ವಲಗೊಳಿಸಬೇಕು ಎಂದರು.

ಮುಖ್ಯೋಪಾಧ್ಯಾಯ ಬಿ. ಎಸ್​.ಮೆಣಸಿನಕಾಯಿ ಮಾತನಾಡಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ಪಾಲಕರ ಸಹಕಾರ ಅತ್ಯವಶ್ಯ. ಉಚಿತ ಸರ್ಕಾರಿ ಸೌಲಭ್ಯದೊಂದಿಗೆ ದಾನಿಗಳ ಸಹಾಯವನ್ನು ಪಡೆಯಲಾಗುತ್ತಿದೆ. ಗುಣಮಟ್ಟದ ಶಿಣವನ್ನು ಸಹಿತ ನೀಡಲಾಗುತ್ತಿದೆ. ಮಕ್ಕಳನ್ನು ಶಾಲೆಗೆ ದಾಖಲಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಎಸ್​.ಸಿ.ಚಳಗೇರಿ, ಎಸ್​. ಸಿ. ಹಿರೇಮಠ, ಶಿಕಿ ಎಲ್​. ಎಚ್​. ಮಲ್ಲಾಪೂರ, ಜೆ. ಆರ್​.ನೀರಲಗಿ, ಎಸ್​. ಎಂ. ಬಸವನಗೌಡ್ರ, ಜೆ. ಎಸ್​. ಘೋರ್ಪಡೆ ಇತರರು ಇದ್ದರು.