ಜಿಲ್ಲೆ

ಮರಣ ಹೊಂದಿದ ಕೆಲವೇ ಗಂಟೆಗಳಲ್ಲಿ ಮಹಿಳೆ ಬ್ಯಾಂಕ್​ ಖಾತೆಯಿಂದ ಹಣ ಡ್ರಾ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ರಕ್ಷಣೆಯಲ್ಲಿದ್ದ ಮಹಿಳೆ.

Gadag - Shivanand Hiremath

ಶಿವಾನಂದ ಹಿರೇಮಠ ಗದಗ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುನೀತಾ ವೆಲ್​ ೇರ್​ ಅಸೋಸಿಯೇಷನ್​(ಎನ್​ಜಿಓ)ನಲ್ಲಿ ರಕ್ಷಣೆಯಲ್ಲಿದ್ದ ಮಾಣಸಿಕ ಅಸ್ವಸ್ಥೆ ಕಮಲಾ ಮೈಸೂರು ಎಂಬ ಮಹಿಳೆಯ ನಿಧನದ ನಂತರ ಮಹಿಳೆಯ ಬ್ಯಾಂಕ್​ ಖಾತೆಯಿಂದ ಹಣ ಲಪಟಾಯಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ನಿಧನಹೊಂದಿದ ಕೆಲವೇ ಂಟೆಗಳಲ್ಲಿ ಮಹಿಳೆಯ ಬ್ಯಾಂಕ್​ ಖಾತೆಯಿಂದ ಸುಮಾರು 70 ಸಾವಿರ ರೂ. ಹಣವನ್ನು ಎಟಿಎಂ ಬಳಸಿ ಡ್ರಾ ಮಾಡಿಕೊಂಡಿರುವ ಪ್ರಕರಣದಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಪ್ರಕರಣದಿಂದ ಇಲಾಖೆಗೆ ಮುಜುಗುರು ಉಂಟಾಗಿದೆ.
ಕಮಲಾ ಮೈಸೂರು ಮಾನಸಿಕ ಅಸ್ವಸ್ಥೆ ಆಗಿದ್ದರಿಂದ ಎಟಿಎಂ ಬಳಸುವ ಪ್ರಮೆಯವೇ ಇಲ್ಲ. ಹಾಗೂ ಬ್ಯಾಂಕ್​ ಖಾತೆಗಳ ಬಗ್ಗೆ ಜ್ಞಾನವು ಇರಲಿಲ್ಲ. ಹಾಗಾಗಿ, ಕಮಲಾ ಬಗ್ಗೆ ಎಲ್ಲ ತಿಳಿದುಕೊಂಡವರೇ ಈ ಕೃತ್ಯ ಎಸಗಿರುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅನುಮಾನಿಸಿದೆ. ಇಲಾಖಾ ಅಧಿಕಾರಿಗಳು ತಪ್ಪಿತಸ್ಥರನ್ನು ಸದ್ದಿಲ್ಲದೇ ವಿಚಾರಣೆ ನಡೆಸುತ್ತಿದ್ದು, ಸಂಬಂಧಪಟ್ಟವರೇ ಈ ಅಕ್ರಮ ಎಸಗಿದ್ದು ಮೇಲ್ನೋಟಕ್ಕೆ ಸಾಭಿತಾಗಿದೆ. ಇಲಾಖೆಯ ಹಿತದೃಷ್ಟಿ ಪ್ರಕರಣ ಹೊರ ಬಾರದಂತೆ ಮುಚ್ಚಿಹಾಕುವ ಯತ್ನವು ನಡೆದಿದೆ ಎನ್ನಲಾಗಿದೆ.

ಏನಿದು ಪ್ರಕರಣ?
ಕಮಲಾ ಮೈಸೂರು ಎಂಬ ಯುವತಿಯು 1993 ರಿಂದ 2022ರ ವರೆಗೆ ನಗರದ ಪೊಲೀಯೋ ಹೋಮ್​ ನಲ್ಲಿ ಆರೈಕೆಯಲ್ಲಿದ್ದರು. 2022ರಲ್ಲಿ ಮಾನಸಿಕ ಅಸ್ವಸ್ಥತೆ ಕಮಲಾ ಅವರಲ್ಲಿ ಕಾಣಿಸಿಕೊಂಡಿತು ಎಂದು ಜಿಲ್ಲಾಸ್ಪತ್ರೆ ವರದಿಗಳು ಧೃಡಪಡಿಸಿವೆ. ಈ ಹಿನ್ನೆಲೆ ಪೊಲೀಯೋ ಹೋಮ್​ ನೇತೃತ್ವ ವಹಿಸಿದ್ದ ರಜೀನಾ ಎಂಬುವರು ಜಿಲ್ಲಾ ಮಕ್ಕಳ ರಕ್ಷಣಾ ಟಕದ ಮೊರೆ ಹೋಗುತ್ತಾರೆ. ಅದರಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಸುನಿತಾ ವೆಲ್​ೇರ್​ ಅಸೋಸಿಯೇಷನ್​ ಸಂಸ್ಥೆಗೆ ಕಮಲಾ ಅವರನ್ನು ಹಸ್ತಾಂತರಿಸಲಾಗುತ್ತದೆ. ರಜಿನಾ ಆಸ್ಟ್ರಿಯಾ ದೇಶಕ್ಕೆ ಪ್ರಯಾಣ ಬೆಳೆಸುತ್ತಾರೆ. ಈ ಮಧ್ಯೆ ಅ.1, 2023ರಂದು ಕಮಲಾ ಅವರು ಜಿಲ್ಲಾಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಅವರ ನಿಧನ ಹೊಂದಿದ ಅಕ್ಟೋಬರ್​ 1 ಮತ್ತು ಅಕ್ಟೋಬರ್​ 2 ರಂದು ಕಮಲಾ ಅವರ ಬ್ಯಾಂಕ್​ ಖಾತೆಯಿಂದ (ಎಟಿಎಂ ಬಳಸಿ) 70 ಸಾವಿರ ಹಣ ಡ್ರಾ ಆಗಿದೆ. ಎರಡೂ ದಿನ ಎಟಿಎಂ ಮೂಲಕ ತಲಾ ಮೂರು ಹಣದ ವಹಿವಾಟು ನಡೆದಿದೆ.

ದೂರು ಸಲ್ಲಿಕೆ?
ಅಕ್ಟೋಬರ್​ 10, 2023 ರಂದು ಭಾರತಕ್ಕೆ ಮರಳಿ ಆಗಮಿಸಿದ ರಜೀನಾ ಅವರು ಎನ್​ಜಿಓ ಬಳಿ ಕಮಲಾ ಕುರಿತು ವಿಚಾರಿಸಿದಾಗ ಕಮಲಾ ಸಾವನ್ನಪ್ಪಿರುವುದು ವಿಷಯ ತಿಳಿಯುತ್ತದೆ. ಸಾವಿನ ಸುತ್ತ ಅನುಮಾನದ ಹೊಗೆಯಾಡಿದ ಹಿನ್ನೆಲೆ ಅವರ ಬ್ಯಾಂಕ್​ ಖಾತೆ ಪರಿಶೀಲಿಸಿದಾಗ ಹಣ ಡ್ರಾ ಆಗಿರುವ ವಿಷಯ ಬೆಳಕಿಗೆ ಬಂದು, ರಜೀನಾ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ದೂರು ಸಲ್ಲಿಸಿದ್ದಾರೆ. ಕಮಲಾ ಸಾವನ್ನಪಿದ ವಿಷಯ ನನ್ನಿಂದ ಮುಚ್ಚಿಡಲಾಗಿದೆ. ಸುನೀತಾ ವೆಲ್ಫೇರ್​ ಅಸೋಸಿಯೇಷನ್​ ಉಸ್ತುವಾರಿ ಶೀಲಾ ಎಂಬುವರು ಕಮಲಾ ಅವರ ಬ್ಯಾಂಕ್​ ಖಾತೆಯನ್ನು ನನ್ನಿಂದ ಪಡೆದಿದ್ದರು. ಈ ಹಿನ್ನೆಲೆ ಬ್ಯಾಂಕ್​ ನಿಂದ ಹಣ ಡ್ರಾ ಆಗಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ ಎಂದು ದೂರಿನಲ್ಲಿದೆ.

ವ್ಯವಸ್ಥಿತ ಜಾಲ?
ಈ ಪ್ರಕರಣದ ಹಿಂದೆ ವ್ಯವಸ್ಥಿಯ ಜಾಲ ಇದೆ ಎಂಬುದು ಸಾಭಿತಾಗುತ್ತಿದೆ ಮತ್ತು ಇಂತಹ ಹಲವು ಪ್ರಕಣಗಳು ತೆರೆಮರೆಯಲ್ಲಿ ಸರಿದಿವೆ ಎಂಬ ಮಾಹಿತಿಯನ್ನು ಇಲಾಖೆಯ ಮೂಲಗಳೇ ವಿಜಯವಾಣಿಗೆ ತಿಳಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಉಜ್ವಲ ಕೇಂದ್ರಗಳಿಗೆ(ಅಸೋಸಿಯೇಷನ್​) ಅನುದಾನ ಬಿಡುಗಡೆ ಆಗಿಲ್ಲ. ಹೀಗಿದ್ದರೂ ಕಮಲಾ ಅವರ ಖಾತೆಗೆ 70 ಸಾವಿರ ರೂ. ಹಣ ಜಮೆ ಆಗಿದ್ದು ಹೇಗೆ? ಕಮಲಾ ಅವರು ಡೆಬಿಟ್​ ಕಾರ್ಡ್​ ಮತ್ತು ಪಾಸವರ್ಡ್​ ಆರೋಪಿತರ ಕೈಗೆ ಸಿಕ್ಕಿದ್ದು ಹೇಗೆ? ಕಮಲಾ ಸಾವನ್ನಪ್ಪಿದ ವಿಷಯವನ್ನು ರಜೀನಾ ಅವರಿಗೆ ಅಸೋಸಿಯೇಷನ್​ ಅವರು ಏಕೆ ತಿಳಿಸಲಿಲ್ಲ? ಎಂಬ ಅನುಮಾನಗಳು ಇಲಾಖಾ ಅಧಿಕಾರಿಗಳನ್ನು ಕಾಡುತ್ತಿದೆ.

ಕೋಟ್​:
ಸಂಬಂಧಪಟ್ಟವರ ವಿಚಾರಣೆ ನಡೆಸಿದ್ದೇವೆ. ಅಸಮಂಜಸ ಉತ್ತರ ನೀಡುತ್ತಿದ್ದಾರೆ. ಇದು ಕ್ರಿಮಿನಲ್​ ಅೆನ್ಸ್​ ಆಗಿರುವುದರಿಂದ ಪೊಲೀಸ್​ ವಿಚಾರಣೆಯೇ ಸೂಕ್ತವಾಗಿದೆ. ದೂರು ಸಲ್ಲಿಸಿದ ರಜಿನಾ ಅವರಿಗೆ ಪೊಲೀಸ್​ ಠಾಣೆಗೆ ದೂರು ನೀಡಲು ಸಲಹೆ ನೀಡಿದ್ದೇನೆ
- ಪರಶುರಾಮ ಶೆಟ್ಟಪ್ಪನ್ನವರ, ಜಿಲ್ಲಾ ಅಧಿಕಾರಿ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ