ಜಿಲ್ಲೆ

ತೊಟ್ಟಿಲು ತೂಗುವ ಕೈ ಜಗತ್ತನ್ನೇ ತೂಗಬಲ್ಲದು: ವೈಶಾಲಿ ಎಂ.ಎಲ್​.

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ
ನಗರದ ವಿಠಲರೂಢ ಸಮುದಾಯ ಭವನದಲ್ಲಿ ಮಹಿಳೆಯರಿಗೆ ಸ್ವಯಂ ಉದ್ಯೋಗ ಮಾಡುವ ಕುರಿತು ಸೋಮವಾರ ಏರ್ಪಡಿಸಿದ್ದ ಉಡಾನ್​ ಟ್ರೇಡ್​ ೇರ್​ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ವೈಶಾಲಿ ಎಂ. ಎಲ್​. ಉದ್ಘಾಟಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಾಚಿನ ಕಾಲದಲ್ಲಿ ಮಹಿಳೆಗೆ ಸ್ವಾತಂತ್ರ್ಯ ಇರಲಿಲ್ಲ. ಆಧುನಿಕ ಯುಗದಲ್ಲಿ ಮಹಿಳೆಯರಿಗೆ ಸ್ವಾತಂತ್ರ್ಯ ಇದೆ. ಸ್ಪರ್ಧಾತ್ಮಕ ಯುಗದಲ್ಲಿ ಮಹಿಳೆಯರು ಸಾರ್ವಜನಿಕ ವಲಯಗಳಲ್ಲಿ ಮುಂಚೂಣಿಯಲ್ಲಿ ಇದ್ದಾರೆ. ಜೈನ ಸಮುದಾಯದ ಮಹಿಳೆಯರು ಸ್ಟಾಲ್​ಗಳನ್ನು ತೆರೆಯುವ ಮೂಲಕ ಸ್ವಾವಲಂಬಿ ಮತ್ತು ಆಥಿರ್ಕವಾಗಿ ಶಕ್ತರಾಗಬೇಕು ಎಂಬ ಸಂದೇಶವನ್ನು ಮಹಿಳಾ ಸಮುದಾಯಕ್ಕೆ ನೀಡಿದ್ದಾರೆ. ಜೈನ ಸಮಾಜದ ಮಹಿಳೆಯರ ಈ ಕಾರ್ಯ ವೈಖರಿ ಮಹಿಳಾ ಸಮುದಾಯಕ್ಕೆ ಮಾದರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಆಹಾರ ಪದಾರ್ಥಗಳ ಅಂಗಡಿಗಳ ಪ್ರದರ್ಶನ, ಸೀರೆಗಳು, ಪಾಶ್ಚಿಮಾತ್ಯ ಮನೆಯ ಅಲಂಕಾರ ವಸ್ತುಗಳು, ಬೇಕರಿ ಆಹಾರಗಳು ಸೇರಿದಂತೆ 35 ಅಂಗಡಿಗಳು ಪ್ರದರ್ಶನ ಗೊಂಡವು.
ಇಂದಿರಾ ಬಾಗಮಾರ, ಪ್ರವಿಣ ಚೌಧರಿ, ರೂಪಚಂದ ಪಾಲರೇಚಾ, ಪಂಕಜ ಬಾಣ, ಮನೀಶ ಬನ್ಸಾಲಿ, ಸುರೇಶ ಓಸ್ವಾಲ್​, ಅನಿಲ ಜೈನ, ಇಂದಿರಾ ಬಾಗಮಾರ, ಸುರೇಶ ಕೊಠಾರಿ ಇತರರು ಇದ್ದರು.