ಜಿಲ್ಲೆ

ಸಕಲರಿಗೂ ಸ್ಪೂರ್ತಿಯ ಸಿಂಚನ ಅಂಬೇಡ್ಕರ್: ಮಹೇಶ ಪೋತೆದಾರ

Gadag - Shivanand Hiremath
ವಿಜಯವಾಣಿ ಸುದ್ದಿಜಾಲ ಗದಗ
ಹಲವರು ಮನುಷ್ಯರನ್ನು  ಗುಲಾಮರನ್ನಾಗಿ ಮಾಡಿದವರನ್ನು ನಾವು ನೊಡಿದ್ದೇವೆ, ಆದರೆ ಗುಲಾಮರನ್ನು ರಾಜ ಮಹಾ ರಾಜರನ್ನಾಗಿಸಿದವರು ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ್ ಪೋತದಾರ್ ಅವರು ಹೇಳಿದರು.
ಗದಗ ನಗರದ ಆದರ್ಶ ಶಿಕ್ಷಣ ಸಂಸ್ಥೆಯಲ್ಲಿ ಬುಧವಾರ ಏರ್ಪಡಿಸಿದ್ದ ಭಾರತ ರತ್ನ ಡಾ. ಬಿ ಆರ್ ಅಂಬೇಡ್ಕರ್ ಅವರ ಓದು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತಕ್ಕೆ ಶ್ರೇಷ್ಠ ಸಂವಿಧಾನ ನೀಡುವಲ್ಲಿ ಹಾಗೂ ಪ್ರಭುದ್ಧ ರಾಷ್ಟ್ರ ನಿರ್ಮಾಣದಲ್ಲಿ ಅಂಬೇಡ್ಕರ್ ಅವರ ಪಾತ್ರ ಅಭಿಸ್ಮರಣೀಯ. ತಮ್ಮೆಲ್ಲರಿಗೂ ವಿದ್ಯಾಭ್ಯಾಸ ಶಿಕ್ಷಣ ಓದು ಎಷ್ಟು ಮುಖ್ಯ ಎಂಬುದನ್ನು ಡಾ. ಅಂಬೇಡ್ಕರ್ ನೋಡಿ ಅರಿಯಬೇಕಿದೆ. ಓದಬೇಕು ಓದಿದ್ದುದನ್ನು ಅರ್ಥ ಮಾಡಿಕೊಳ್ಳುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ನಮ್ಮಲ್ಲಿ ಸಾಧನೆ ಮಾಡಲು ಇಚ್ಛಾಶಕ್ತಿ ಬೇಕು, ಇಚ್ಛಾಶಕ್ತಿ ಇದ್ದಲ್ಲಿ ಸಾಧನೆ ಸಾಧ್ಯ ಎಂದು ಹೇಳಿದರು.
ಶೋಷಿತ ವರ್ಗದ ಧ್ವನಿಯಾಗಿ ಬಡವರ ಕಣ್ಮಣಿಯಾಗಿ ಡಾ. ಬಿ ಆರ್ ಅಂಬೇಡ್ಕರ್ ಅವರು ಅಗಾಧ ಸಾಧನೆ ಮಾಡುವ ಮೂಲಕ ನಮ್ಮೆಲ್ಲರಿಗೂ ಸ್ಪೂರ್ತಿಯಾಗಿದ್ದಾರೆ. ಸಕಲರಿಗೂ ಸ್ಪೂರ್ತಿ ಸಿಂಚನ ಡಾ. ಬಿಆರ್ ಅಂಬೇಡ್ಕರ್ ಎಂದು ಅಂಬೇಡ್ಕರ್ ಅವರನ್ನು ಅವರ ಸಾಧನೆಗಳನ್ನು ಬಣ್ಣಿಸಿದರು.
ಹುಲಕೋಟಿ ಜಿಸಿಟಿಎಂ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಅರ್ಜುನ್ ಗೋಳಸಂಗಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಸಮತಾ ಭಾರತ ನಿರ್ಮಾಣ ಆಗಬೇಕಿದೆ ಎಂದರು. ಅಂಬೇಡ್ಕರ್  ಅವರ ಬಾಲ್ಯ, ಶಿಕ್ಷಣದ ಕುರಿತು ಅವರು ಅನುಭವಿಸಿದ ಶೋಷಣೆಯ ಬಗ್ಗೆ, ಸಮಾಜದಲ್ಲಿ ಮೇಲು-ಕೀಳು ಬಡವ ಬಲ್ಲಿದ ಕುರಿತ ಶೋಷಣೆಗಳ ಬಗ್ಗೆ ವಿವರವಾಗಿ ತಿಳಿಸುವ ಮೂಲಕ, ಶೋಷಣೆ ಮುಕ್ತ ಸಮಾಜ ನಿರ್ಮಿಸಲು ಎಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದರು
ಸಮ ಸಮಾಜ ನಿರ್ಮಾಣಕ್ಕೆ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರ ವಿಚಾರಧಾರೆ, ಜೀವನ ತತ್ವ, ಸಿದ್ಧಾಂತ ಓದು, ಪ್ರೇರಕ ಶಕ್ತಿಯಾಗಿದೆ ಎಂದು ಅಭಿಪ್ರಾಯಪಟ್ಟರು. ಸಂವಿಧಾನವು ಸರ್ವರಿಗೂ ಸಂಬಂಧಿಸಿದಾಗಿದ್ದು ಅದೇ ತರಹ ಡಾ. ಬಿಆರ್ ಅಂಬೇಡ್ಕರ್ ಅವರು ಸಹ ಸರ್ವರಿಗೂ ಸಂಬಂಧಿಸಿದವರು ಎಂಬುದನ್ನು ನಾವೆಲ್ಲರೂ ಅರಿಯಬೇಕಿದೆ. ಸಂವಿಧಾನದ ಆಶಯಗಳ ಈಡೇರಿಕೆಗಾಗಿ ನಾವೆಲ್ಲ ಪಣತೊಡೋಣ ಎಂದು ಕರೆ ನೀಡಿದರು.
ಜಿಲ್ಲಾ ವಾರ್ತಾಧಿಕಾರಿ ವಸಂತ ಮಡ್ಲೂರ ಮಾತನಾಡಿ, ಸ್ವಾಭಿಮಾನ ನಮ್ಮತನ ಜೀವನದಲ್ಲಿ ಅಳವಡಿಕೊಳ್ಳುವ ಮೂಲಕ ಶೋಷಣೆ ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗೋಣ. ಧ್ಯಾನದ ಬಲದಿಂದ ಅಧ್ಯಯನ ಕೇಡಾಗುವಂತೆ, ಜ್ಯೋತಿಯ ಬಲದಿಂದ ತಬಂದದ ಕೇಡಾಗುತ್ತದೆ. ಅದೇ ತರ ಶಿಕ್ಷಣ ಜೀವನದಲ್ಲಿ ಎಂತಹ ಬದಲಾವಣೆಯನ್ನು ತರಲು ಸಾಧ್ಯ ಎಂಬುದನ್ನು ತಿಳಿಸಿದರು. ಸಂವಿಧಾನ ಓದು ಕಾರ್ಯಕ್ರಮವು ಸಂವಿಧಾನದ ಕುರಿತು ಜನಸಾಮಾನ್ಯರಿಗೆ ಅರಿವು ಮೂಡಿಸುವುದಾಗಿದೆ ಸಂವಿಧಾನ ನಮ್ಮೆಲ್ಲರಿಗೂ ಶ್ರೇಷ್ಠ ಎಂಬುದನ್ನು ಅರಿತು‌ ಸಮಸಮಾಜ ನಿರ್ಮಿಸಲು ಮುಂದಾಗೋಣ ಎಂದು‌ ಹೇಳಿದರು.
ಪ್ರಾಚಾರ್ಯ ಕೆ. ವಿ. ಕುಷ್ಟಗಿ, ಉಪ ಪ್ರಾಚಾರ್ಯ,  ಡಾ. ವಿ ಟಿ ನಾಯ್ಕರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಬಿ ಇತರರು ಇದ್ದರು.