ಜಿಲ್ಲೆ

ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ

ಜಿಲ್ಲಾ ಆಡಳಿತ ವತಿಯಿಂದ ನಗರದ ಬಸವೇಶ್ವರ ಕಲಾ ವಾಣಿಜ್ಯ ಹಾಗೂ ವಿಾನ ಮಹಾವಿದ್ಯಾಲಯ ಸಭಾಂಗಣದಲ್ಲಿ ಶುಕ್ರವಾರ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮ ಜರುಗಿತು.

ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಗಂಗಾಧರ ಸಿ. ಎಂ. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಒತ್ತಡ, ಆತಂಕ, ನಿರಿೆ, ಇತ್ಯಾದಿಗಳು ನಿತ್ಯದ ಬದುಕಿನಲ್ಲಿ ಒಳಗೊಂಡಿವೆ. ದೈಹಿಕ ಆರೋಗ್ಯದಷ್ಟೆ ಮಾನಸಿಕವಾಗಿ ಸದೃಢ ಆಗಿರಬೇಕು. ಮಾನಸಿಕ ಅಸ್ವಸ್ಥರಿಗೆ ಮಾನಸಿಕ ಆರೋಗ್ಯ ರಣೆಯನ್ನು ಪಡೆಯುವ ಹಕ್ಕು, ಸಮೂದಾಯದಲ್ಲಿ ಜೀವಿಸುವ ಹಕ್ಕು, ನತೆಯಿಂದ ಬದುಕುವ ಹಕ್ಕು, ವೈದ್ಯಕಿಯ ದಾಖಲೆಗಳನ್ನು ಪಡೆಯುವ ಹಕ್ಕು ಇದೆ ಎಂದರು.

ಮಾನಸಿಕ ಆರೋಗ್ಯವು ಮಾನವನ ಮೂಲಭೂತ ಹಕ್ಕುಗಳಾಗಿವೆ ವಿದ್ಯಾಥಿರ್ಗಳಿಗೆ ವಿದ್ಯಾಥಿರ್ ಜೀವನವು ಅತ್ಯುತ್ತಮ ಸಮಯವಾಗಿದ್ದು ಇದರೊಂದಿಗೆ ನಿರಾಶೆ, ಹೊಲಿಕೆ, ಒಂಟಿತನ, ಭಾವನೆಗಳಲ್ಲಿ ತೊಳಲಾಟ ಸಾಮಾನ್ಯವಾಗಿರುತ್ತದೆ. ಮಾನಸಿಕ ಅನಾರೋಗ್ಯ ಎಲ್ಲರನ್ನು ಬಾಧಿಸುವಂತಾಗಿದೆ. ಅದು ಮಕ್ಕಳಿಂದ ಹಿಡಿದು ಮುಪ್ಪಿನವರೆಗು ಬಾಧಿಸಬಹುದು, ಮಾನಸಿಕ ಆರೋಗ್ಯದ ಕುರಿತು ಹೆಚ್ಚಿನ ಕಾಳಜಿ ವಹಿಸುವುದು ಸೂಕ್ತ ಎಂದು ತಿಳಿಸಿದರು.

ಮಾನಸಿಕ ಆರೋಗ್ಯವನ್ನು ಬಲಪಡಿಸಿಕೊಳ್ಳಲು ಅತ್ಯುತ್ತಮವಾದ ಸಂಸ್ಕಾರ, ನೀತಿ, ನೈತಿಕ ಮೌಲ್ಯ, ಒಳ್ಳೆ ಸ್ನೇಹಿತರ ಸಹವಾಸ ಹಾಗೂ ಸಾಮಾಜಿಕ ಮಾಧ್ಯಮಗಳ ಕಡಿಮೆ ಬಳಕೆ ಒಳಿತು ಎಂದು ತಿಳಿಸಿದರು.

ಹಿರಿಯ ದಿವಾನಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದಶಿರ್ ಸಿ.ಎಸ್​. ಶಿವನಗೌಡ್ರ ಮಾತನಾಡಿ, ಅಸಹಜ ನಡುವಳಿಕೆ, ಗುರಿ ಇಲ್ಲದೆ ಅಲೆದಾಡುವುದು, ಗೊಣಗುವುದು ಅಥವಾ ಸ್ವಯಂ ನಗುವುದು ಮಧ್ಯ ಮಾದಕ ವಸ್ತು ಅವಲಂಬನೆ, ಅತಿಯಾದ ಚಿಂತೆ, ಚಡಪಡಿಕೆ ಹೀಗೆ ಮೊದಲಾದ ಲಣಗಳು ಮಾನಸಿಕ ಲಣಗಳು. ಮಾನಸಿಕ ಆರೋಗ್ಯವು ಪ್ರತಿಯೊಬ್ಬರಿಗೆ ಅವಶ್ಯಕವಾಗಿದೆ. ಮಾನಸಿಕ ಆರೋಗ್ಯ ಸಂಭಅದಿತ ಸಮಸ್ಯೆಗಳಿದ್ದರೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಾಯ ಪಡೆಯಲು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ವೈದ್ಯಕಿಯ ವಿಜ್ಞಾನ ಸಂಸ್ಥೆಯ ಮನೋವೈದ್ಯ ಡಾ. ಸೋಮಶೇಖರ ಬಿಜ್ಜಳ ಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಸ್​.ಎಸ್​.ನೀಲಗುಂದ, ಗುರುರಾಜ ಬಿ., ಆರ್​. ಎಚ್​. ಪಾಟೀಲ, ರೂಪಸೇನ ಚೌವಾಣ ಇತರರು ಇದ್ದರು.