ಜಿಲ್ಲೆ

ದತ್ತು ಸ್ವೀಕಾರ ಕುರಿತು  ಜನರಲ್ಲಿ ಜಾಗೃತಿ ಅವಶ್ಯ: ಜಿಲ್ಲಾಧಿಕಾರಿ ಗೋವಿಂದರೆಡ್ಡಿ

ಗದಗ: ಅನಾಥ ಮಕ್ಕಳನ್ನು  ದತ್ತು ಸ್ವೀಕಾರ ಮಾಡಲು ಇಚ್ಛಿಸುವರು ದತ್ತು ಸ್ವೀಕಾರ ಕೇಂದ್ರದಲ್ಲಿ ನೊಂದಾಯಿಸಿಕೊಂಡು ಅನಾಥ ಮಕ್ಕಳನ್ನು ದತ್ತು ಪಡೆಯುವ ವ್ಯವಸ್ಥೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಹೇಳಿದರು.
ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಬುಧವಾರ ಮಕ್ಕಳ ರಕ್ಷಣಾ ನಿರ್ದೇಶನಾಲಯ ಬೆಂಗಳೂರು,ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಪೊಲೀಸ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ,ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ ಸಂಯುಕ್ತಾಶ್ರಯದಲ್ಲಿ ಅಂತರಾಷ್ಟ್ರೀಯ ದತ್ತು ಮಾಸಾಚರಣೆ ಅಂಗವಾಗಿ ಹಮ್ಮಿಕೊಂಡ ಜಾಥವನ್ನು ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಿ.ಎಸ್. ಶಿವನಗೌಡ್ರ ಚಾಲನೆ ನೀಡಿದರು.
 ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಮಾತನಾಡಿ ದತ್ತು ಮಾಸಾಚರಣೆಯನ್ನು ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ಆಚರಿಸುತ್ತಾರೆ, ಮಕ್ಕಳಿಲ್ಲದ ಪೋಷಕರು  ದತ್ತು ಸ್ವೀಕಾರ ಕೇಂದ್ರದಲ್ಲಿ ನೊಂದಾಯಿಸಿಕೊಂಡು ಅನಾಥ ಮಕ್ಕಳನ್ನು ಪಡೆಯಬಹುದು ಎಂಬ ಮಾಹಿತಿ ಇನ್ನೂ ಸಾಕಷ್ಟು ಜನಕ್ಕೆ ಗೊತ್ತಾಗಬೇಕು ಆ ನಿಟ್ಟಿನಲ್ಲಿ ಈ ಜಾಥದ ಮೂಲಕ  ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಿ.ಎಸ್.ಶಿವನಗೌಡ್ರ ಅವರು ಮಾತನಾಡಿ ದತ್ತು ಸ್ವೀಕಾರದ ಕುರಿತು ಜನರಿಗೆ ಮಾಹಿತಿ ನೀಡಿವ ಸಲುವಾಗಿ ನವೆಂಬರ್ ತಿಂಗಳಲ್ಲಿ ಅಂತರಾಷ್ಟ್ರೀಯ ದತ್ತು ಮಾಸಾಚಾರಣೆ ಎಂದು ಆಚರಿಸಲಾಗುತ್ತದೆ,ತಂದೆ ತಾಯಿ ಅವರು ಮಕ್ಕಳನ್ನು ಹೆತ್ತು ಬೀದಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಮಕ್ಕಳನ್ನು ಬಿಟ್ಟು ಹೋದಾಗ ಅಂತಹ ಮಕ್ಕಳು ಅನಾಥರಾಗುತ್ತಾರೆ.
 ಮಕ್ಕಳನ್ನು ಹೊಂದಿಲ್ಲದವರು  ದತ್ತು ಸ್ವೀಕಾರ ಕೇಂದ್ರದಲ್ಲಿ ನೊಂದಾಯಿಸಿಕೊಂಡು ಈ ಅನಾಥ ಮಕ್ಕಳನ್ನು ಲಾಲನೆ ಪೋಷಣೆ ಮಾಡಬಹುದಾಗಿದೆ.ಇನ್ನೂ ಕೇಲವು ಸಂದರ್ಭಗಳಲ್ಲಿ ಕೆಲವು ಮಕ್ಕಳ ಪೋಷಕರು ಅನಾರೋಗ್ಯದಿಂದ ಅಥವಾ ನಾನಾ ಕಾರಣಗಳಿಂದಾಗಿ ಮಕ್ಕಳನ್ನು ಸಾಕುವುದಕ್ಕೆ ಆಗುತ್ತಿರುವುದಿಲ್ಲ ಅಂತಹ ಪ್ರಸಂಗಗಳಲ್ಲಿ  ತಾತ್ಕಾಲಿಕವಾಗಿ ಮಗುವನ್ನು ಫೋಷಕತ್ವದಲ್ಲಿ ಇಟ್ಟುಕೊಂಡು ಮೂಲ ಕುಟುಂಬದ ಪರಿಸ್ಥಿತಿ ಸುಧಾರಿಸಿದ ಮೇಲೆ ಮರಳಿ ಮಕ್ಕಳನ್ನು ಅಲ್ಲಿಗೆ ಕಳುಹಿಸುವ ವ್ಯವಸ್ಥೆ ಇರುತ್ತದೆ.ಎಷ್ಟೋ ಸಂದರ್ಭದಲ್ಲಿ ಮಗುವಿಗೆ ಕುಟುಂಬದ ಅವಶ್ಯಕತೆ ಇರುತ್ತದೆ,ಹಾಗೂ ಪೋಷಕರಿಗೆ ಮಗು ಬೇಕಾಗಿರುತ್ತದೆ ಹಾಗಾಗಿ ಈ ವ್ಯವಸ್ಥೆಯನ್ನು ವ್ಯಾಪಕವಾಗಿ ಪ್ರಚಾರ ಮಾಡಿ ಜನರಲ್ಲಿ ಜಾಗೃತಿ ಮೂಡಿಸಿದಾಗ ಅನಾಥ ಮಕ್ಕಳ ಹಾಗೂ ಮಕ್ಕಳಿಲ್ಲದವರಿಗೆ ಸಹಾಯಕವಾಗುತ್ತದೆ ಎಂದು ಹೇಳಿದರು.
 ಅಂತರಾಷ್ಟ್ರೀಯ ದತ್ತು ಮಾಸಾಚರಣೆ ಜಾಥಾ ಜಿಲ್ಲಾಡಳಿತ ಭವನದಿಂದ ಪ್ರಾರಂಭವಾಗಿ ಟಿಪ್ಪು ಸುಲ್ತಾನ್ ವೃತ್ತದವರೆಗೆ ಸಂಚರಿಸಿ    ಮಗು ತೊಟ್ಟಿಲಲ್ಲಿ ಬೆಳಗಬೇಕಾದ ಬೆಳಕು.ತೊಟ್ಟಿಯಲ್ಲಿ ಕೊನೆಯಾಗದಿರಲಿ ಅದರ ಬದುಕು,ಮಕ್ಕಳ ರಕ್ಷಣೆ ನಮ್ಮೆಲ್ಲರ ಹೊಣೆ,ಮಕ್ಕಳು ಹೊರೆಯಲ್ಲ ಮಾರುವುದು ಸರಿಯಲ್ಲ,ನೀನೊಂದು ಮಗುವಮ್ಮಾ ನಿನಗೊಂದು ಮಗುವೇ,ಇಂದಿನ ಮಕ್ಕಳ ಇಂದಿನ ಪ್ರಜೆಗಳು,ಕಾನೂನು ಬಾಹಿರ ದತ್ತು ಆಗುವುದಿಲ್ಲ ನಿಮ್ಮ ಸ್ವತ್ತು ಎಂದು ಪೋಷಣೆಗಳನ್ನು ಕೂಗಿ  ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ನಿರೂಪಣಾಧಿಕಾರಿ ಶ್ರಿಮತಿ  ರಾಧ ಮನ್ನೂರು,ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಫೀಕಾ ಹಳ್ಳೂರು,ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಶ್ರಿಮತಿ ಜಯದೇವಿ ಕವಲೂರು,ಸದಸ್ಯರಾದ ಬಸವರಾಜ ಸಂಶಿ,ಡಿ,ಐ ಈರಗಾರ,ಶ್ರೀಮತಿ ಎಸ್ ಆರ್ ಬ್ಯಾಹಟ್ಟಿ,ಬಾಲಕರ ಬಾಲಮಕದಿರ ಅಧೀಕ್ಷಕರಾದ ಗಿರೀಜಾ  ದೊಡ್ಡಮನಿ, ಹಾಜರಿದ್ದರು.