ವಿಜಯವಾಣಿ ಸುದ್ದಿಜಾಲ ಗದಗ
ಭಾರತೀಯ ಸೇನಾ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಲು, ದೇಶದ ಸುರಕ್ಷತೆಗಾಗಿ ಕೇಂದ್ರ ಸರ್ಕಾರದ ಪರ ನಿಲ್ಲಲು ಮತ್ತು ಯುದ್ಧ ಸಂದರ್ಭದಲ್ಲಿ ಜಿಲ್ಲೆಯ ಜನರು ಜಾಗೃತರಾಗಿರಲು ಪಕ್ಷಬೇದ ಮರೆತು ಜಿಲ್ಲೆಯ ಜನಪ್ರತಿನಿಧಿಗಳು ಜಿಲ್ಲಾಡಳಿತ ಭವನದಲ್ಲಿ ಸಭೆ ನಡೆಸಿದರು. ಸಭೆಯಲ್ಲಿ ಮಾಜಿ ಸೈನಿಕರು, ಸಿವಿಲ್ ಪೊಲೀಸ್ ಸೇರಿದಂತೆ ಇತರೆ ರಕ್ಷಕ ದಳದ ಸಿಬ್ಬಂದಿ ಭಾಗವಹಿಸಿದ್ದು, ದೇಶದ ಏಕತೆ ದೃಷ್ಟಿಯಿಂದ ಒಗ್ಗಟ್ಟಾಗಿರಲು ವಾಗ್ದಾನ ಮಾಡಲಾಯಿತು.
ಕಾನೂನು ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ಭಾರತದ ದ್ರೋಹಿ ಉಗ್ರರನ್ನು ನಿರ್ನಾಮ ಮಾಡುವಲ್ಲಿ ಶ್ರಮೀಸುತ್ತಿರುವ ವೀರ ಸೈನಿಕರ ಬೆಂಬಲಕ್ಕೆ ಆಡಳಿತ ಮತ್ತು ವಿರೋಧ ಪಕ್ಷಗಳು ಇವೆ. ಸೈನಿಕರಿಗೆ ನೈತಿಕ ಬಲ ಮತ್ತು ಬೆಂಬಲ ನೀಡಬೇಕಾಗಿದೆ. ಅವರ ಕಾರ್ಯಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಆಪರೇಷನ್ ಸಿಂದೂರು ಮೂಲಕ ಉಗ್ರರನ್ನು ಸೇನೆ ಸೆದೆಬಡಿದಿದೆ. ಈ ಸಾದನೆ ನಮ್ಮ ಗೌರವ ಹೆಚ್ಚಿಸುತ್ತಿದೆ. ಇನ್ನೂ ಪಾಕಿಸ್ತಾನದ ಸೊಕ್ಕು ಅಡಗಿಲ್ಲ. ಇನ್ನೂ ದ್ವೇಷದ ಮಾತುಗಳನ್ನು ಆಡುತ್ತಿದೆ ಎಂದರು.
ಭಾರತದ ಸೇನೆ ದಾಳಿ ಯಾವಾಗ ಮಾಡಬೇಕು. ಹೇಗೆ ಮಾಡಬೇಕು ಎಂಬುದನ್ನು ಕೇಂದ್ರ ಸರ್ಕಾರ, ಪ್ರಧಾನಿ ಮೋದಿ ಅರಿತಿದ್ದಾರೆ. ನಾವು ಚಾಣಾಕ್ಷತನದಿಂದ ಹೋರಾಟ ಮಾಡುತ್ತಿದ್ದೇವೆ. ಈ ಸಂದರ್ಭದಲ್ಲಿ ನಾಗರಿಕರಾಗಿ ಹಲವು ಜವಾಬ್ದಾರಿ ಕರ್ತವ್ಯ ಇವೆ. ಜನರನ್ನು ಜಾಗೃತಗೊಳಲಿಸಲು ಮಾಜಿ ಸೈನಿಕರು, ಸಿವಿಲ್ ಪೊಲೀಸ್, ಎನ್ಸಿಸಿ, ಎನ್ಎಸ್ ಎಸ್ ಸಂಘಟನೆಗಳು ಅಣಿಗೊಳಿಸಬೇಕು. ಸಂಘ ಸಮುದಾಯದ ಜನರನ್ನು ಜಾಗೃತಿ ಗೊಔಜಿಸಬೇಕು. ಮಾಕ್ ಡ್ರಿಲ್ ಮಾಡಲು ಜಿಲ್ಲೆಗೆ ಇನ್ನೂ ಆದೇಶ ಬಂದಿಲ್ಲ. ಯಾವಾಗ ಬೇಕಾದರು ಆದೇಶ ಬರಬಹುದು. ಅದಕ್ಕೆ ಸನ್ನದ್ಧ ಆಗಿರಬೇಕು ಎಂದರು.
ವಿಶ್ವದ ಭಾಗಶಃ ರಾಷ್ಟ್ರಗಳು ಭಾರತವನ್ನು ಬೆಂಬಲಿಸಿವೆ. ಬಾಂಗ್ಲಾದೇಶ ಸ್ವತಂತ್ರಗೊಳಿಸಲು ಭಾರತದ ಸೇನೆ ಶ್ರಮಿಸಿದೆ. ಭಾರತದ ಸ್ವಾಭಿಮಾನ, ರಾಷ್ಟ್ರಭಕ್ತಿ, ಜಾಗೃತಿ ಕಡಿಮೆ ಆಗಬಾರದು ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ಭಾರತದ ಎದಿರೇಟಿಗೆ ಪಾಕಿಸ್ತಾನ 50 ವರ್ಷ ಸೊಲ್ಲೆತ್ತುವುದಿಲ್ಲ. ಮಕ್ಕಳ, ಪತ್ನಿಯರ ಮುಂದೆ ಗುಂಡಿಟ್ಟು ಹೊಡೆದು ಅವರ ಪತಿಯರನ್ನು ಸಾಯಿಸುತ್ತಾರೆ ಎಂದರೆ ಉಗ್ರರು ಎಂತಹ ಮನಸ್ಥಿತಿ ಹೊಂದಿರುತ್ತಾರೆ ಎಂಬುದು ಊಹೆಗೂ ನಿಲುಕದು. ಉಗ್ರರನ್ನಷ್ಟೇ ಗುರಿಯಾಗಿಸಿ ಮಾಡಿದ ಸೇನಾ ಕಾರ್ಯಾಚರಣೆಗೆ ಪೂರ್ವ ತಯಾರಿ ಬಹಳಷ್ಟಿತ್ತು. ಅದಕ್ಕಾಗಿ ಅಜಿತ ದೊವಲ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸುರಕ್ಷತಾ ದೃಷ್ಟಿಯಿಂದ ಜಿಲ್ಲೆಯಲ್ಲಿ ಎಲ್ಲರೂ ಕಾರ್ಯಪ್ರವೃತ್ತರಾಗಬೇಕು ಎಂದು ಸಿ.ಸಿ. ಪಾಟೀಲ ತಿಳಿಸಿದರು.
ಜಿ.ಎಸ್. ಪಾಟೀಲ ಮಾತನಾಡಿ, ದೇಶದ ರಕ್ಷಣೆಗೆ ರಾಷ್ಟ್ರದ ಪ್ರಧಾನಿ ತೆಗೆದುಕೊಂಡು ನಿರ್ಧಾರ ಹೆಮ್ಮೆ ತರುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಕಾರ್ಯವನ್ನು ಅಭಿನಂದಿಸುತ್ತೇನೆ. ಯಾವುದೇ ಸಣ್ಣ ವೈರಿಗಳನ್ನು ನಿರ್ಲಕ್ಷ$್ಯ ಮಾಡಬಾರದು. ಭಾರತ ಶಾಂತಿ ಮತ್ತು ಸಹಿಷ್ಣು ದೇಶ. ಆದರೆ ನಮ್ಮ ಶಾಂತಿಗೆ ಭಂಗ ತಂದವರಿಗೆ ತಕ್ಕ ಉತ್ತರ ಕೊಡದೇ ಬಿಡುವುದಿಲ್ಲ. ಸೈನಿಕರಿಂದ ದೇಶಭಕ್ತಿ ಮತ್ತು ದೇಶದ ರಕ್ಷಣೆ ಕಾರ್ಯವನ್ನು ಎಲ್ಲರೂ ಅನುಕರಣೆ ಮಾಡಬೇಕು ಎಂದರು
ವಿಧಾನ ಪರಿಷತ್ ಶಾಸಕ ಎಸ್. ವಿ. ಸಂಕನೂರು ಮಾತನಾಡಿ, ಉಗ್ರರಿಗೆ, ಪಾಕಿಸ್ತಾನಕ್ಕೆ ಪ್ರಧಾನಿ ನರೇಂದ್ರ ಮೋದಿ ತಕ್ಕಪಾಠ ಕಲಿಸಿದ್ದಾರೆ. ಆಪರೇಷನ್ ಸಿಂದೂರು ಎರಡನೇ ಹಂತದ ದಾಳಿಗೂ ಭಾರತ ಸಿದ್ಧವಿದೆ. ಈ ಹಿನ್ನೆಲೆಯಲ್ಲಿ ನಮ್ಮಜಿಲ್ಲೆಯಲ್ಲೂ ಸುರಕ್ಷತಾ ದೃಷ್ಟಿಯಿಂದ ಎಲ್ಲರೂ ಸನ್ನದ್ಧರಾಗಬೇಕು ಎನ್ನುವ ದೃಷ್ಟಿಯಿಂದ ಈ ಸಭೆ ಕರೆಯಲಾಗಿದೆ ಎಂದು ತಿಳಿಸಿದರು.
ಸಿ.ಎನ್. ಶ್ರೀಧರ, ಬಿ. ಎಸ್. ನೇಮಗೌಡ, ಭರತ್ ಎಸ್, ಬಿ. ಬಿ. ಅಸೂಟಿ, ಶಾಸಕ ಚಂದ್ರು ಲಮಾಣಿ ಇತರರು ಇದ್ದರು.
ಕೋಟ್:
ಚುನಾವಣಾ ಪ್ರಸಂಗಗಳಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಇರುವುದು ಸಹಜ. ಆದರೆ ಇನ್ನೂಳಿದ ಪ್ರಸಂಗಗಳಲ್ಲಿ ದೇಶ ರಕ್ಷಣೆಗೆ ಎಲ್ಲರೂ ಒಂದಾಗಬೇಕು.
ಡಿ.ಆರ್. ಪಾಟೀಲ, ಮಾಜಿ ಶಾಸಕ
ಕೋಟ್:
ಉಗ್ರರ ಮೇಲಿನ ಕಾರ್ಯಾಚರಣೆಯಲ್ಲಿ ಭಾರತೀಯ ಮಹಿಳಾ ಶಕ್ತಿ ಜಗತ್ತಿಗೆ ಗೊತ್ತಾಗಿದೆ. ಭೂ ಸೇನೆಯ ಸೌಪೀಕಾ ಖುರೇಷಿ ಮತ್ತು ವಾಯು ಸೇನೆಯ ವೈದಿಕಾ ಸಿಂಗ್ ಉಗ್ರರ ಕಾರ್ಯಾಚರಣೆಯಲ್ಲಿ ಮೂಂಚೂಣಿಯಲ್ಲಿ ಇದ್ದರು. ಇವರು ಭಾರತದ ಹೆಮ್ಮೆಯ ಪುತ್ರಿಯರು
ಎಚ್.ಕೆ. ಪಾಟೀಲ, ಕಾನೂನು ಸಚಿವ
ಕೋಟ್:
ಪಾಕಿಸ್ತಾನದ ಸೈನಿಕರು ಮತ್ತು ಉಗ್ರರು ಸೇರಿ ಸತ್ತ ಉಗ್ರರ ಶವಸಂಸ್ಕಾರ ಮಾಡುತ್ತಿದ್ದಾರೆ. ಉಗ್ರರಿಗೆ ಪಾಕಿಸ್ತಾನದ ಸರ್ಕಾರ, ಸೈನಿಕರು ಬೆಂಬಲ ನೀಡುತ್ತಿರುವುದು ಜಗತ್ತಿಗೆ ಗೋಚರಿಸಿದೆ.
ಸಿ.ಸಿ. ಪಾಟೀಲ, ಶಾಸಕ
ಕೋಟ್:
ಪ್ರತಿ ಯೋಧನ ಕಾರ್ಯವು ಭಾರತದ ಮಣ್ಣಿಗೆ ವರದಾನವಾಗಿದೆ. ಗಡಿಯಲ್ಇ ಸೈನಿಕರು ಸನ್ನದ್ಧರಾಗಿರುವಂತೆ ದೇಶದ ಒಳಗಡೆ ಎಲ್ಲರೂ ಸನ್ನದ್ಧರಾಗಿ ದೇಶದ ಸುರಕ್ಷತೆಗೆ ಆಧ್ಯತೆ ನೀಡಬೇಕು.
ಚಂದ್ರು ಲಮಾಣಿ, ಶಾಸಕ