ಜಿಲ್ಲೆ

ರಾಷ್ಟ್ರೀಯ ಡೆಂಗೀ ದಿನದ ಅಂಗವಾಗಿ ಜಿಲ್ಲಾ ಮಟ್ಟದ ಜಾಥಾ ಮತ್ತು ಮಾನವ ಸರಪಳಿ ಪ್ರದರ್ಶನ ಜನಜಾಗೃತಿ ಕಾರ್ಯಕ್ರಮ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ

ಜಿಲ್ಲಾಡಳಿತ ಮತ್ತು ರಾಷ್ಟ್ರೀಯ ಆರೋಗ್ಯ ಅಭಿಯಾನ ವತಿಯಿಂದ ಶನಿವಾರ ನಗರದ ಗಂಗಾಪೂರ ಪೇಟೆ ಸಮೀಪದಲ್ಲಿ ಜಿಲ್ಲಾ ಮಟ್ಟದ ಜಾಥಾ ಮತ್ತು ಮಾನವ ಸರಪಳಿ ಪ್ರದರ್ಶನ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಜಿಲ್ಲಾಕಾರಿ ಸಿ. ಎನ್​. ಶ್ರೀಧರ್​ ಅವರು ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಜಿಲ್ಲೆಯಲ್ಲಿ ಡೆಂಗೀ ನಿಯಂತ್ರಣ ಮಾಡಲು ಗುಣಮಟ್ಟದ ಲಾರ್ವಾ ಸಮೀೆ ಹಾಗೂ ಜ್ವರ ಸಮೀೆ ಮಾಡಿ ಖಚಿತ ಪ್ರಕರಣಗಳು ಕಂಡು ಬಂದಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ. ಸೂಕ್ತ ಆರೈಕೆ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗು ಸಿಬ್ಬಂದಿ ವರ್ಗದವರು ಕಾರ್ಯಕ್ರಮ ರೂಪಿಸಬೇಕು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಸ್​. ಎಸ್​. ನೀಲಗುಂದ ಮಾತನಾಡಿ ಜಿಲ್ಲೆಯಲ್ಲಿ ಕ್ರಿಯಾ ಯೋಜನೆ ತಯಾರಿಸಿ ಗುಣಮಟ್ಟದ ಲಾರ್ವಾ ಸಮೀೆ ಮಾಡಲು ಗ್ರಾಮೀಣ, ಶಹರ ಮಟ್ಟದಲ್ಲಿ ಹೆಚ್ಚಿನ ಕಾರ್ಯ ನಿರ್ವಹಿಸಿ ಜಿಲ್ಲೆಯಲ್ಲಿ ಸ್ಥಳಿಯವಾಗಿ ಯಾವುದೇ ಡೆಂಗೀ ಪ್ರಕರಣಗಳು ಕಂಡು ಬರದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣ ಅ-ಧಿಕಾರಿ ಡಾ. ಎಚ್​.ಎಲ್​ ಗಿರಡ್ಡಿ ಮಾತನಾಡಿ, ಡೆಂಗೀ ನಿವಾರಣೆ ನಿಟ್ಟಿನಲ್ಲಿ ಸಮುದಾಯ ಪಾತ್ರವು ಮಹತ್ವದಾಗಿದೆ. ಈ ನಿಟ್ಟಿನಲ್ಲಿ ಅಗ್ಯತ ಸಾರ್ವಜನಿಕರ ಸಹಕಾರವು ದೊರೆತಾಗ ಮಾತ್ರವೇ ಗುರಿ ಸಾಧನೆಯು ಸುಲಭ ಸಾಧ್ಯವಾಗುತ್ತದೆ ಎಂದರು.

ಡಾ. ಪ್ರೀತ್​ ಖೊನಾ, ಅನ್ನರ್ಪೂಣ ಶೆಟ್ಟರ, ಡಾ. ಸ್ಪರ್ಷಾ, ಪುಷ್ಪಾ ಪಾಟೀಲ, ಇಬ್ರಾಹಿಂ ಮಕಾಂದಾರ, ಆನಂದ ಬದಿ ಹಲವರು ಇದ್ದರು.