ವಚನ ಸ್ಪರ್ಧೆ, ಭಾಷಣ ಸ್ಪರ್ಧೆ ಹಾಗೂ ನಿಬಂಧ ಸ್ಪರ್ಧೆ ಕಾರ್ಯಕ್ರಮ
ಗದಗ: ದೇವರ ದಾಸಿಮಯ್ಯ ಜಯಂತಿ ನಗರದಲ್ಲಿ ಜಿಲ್ಲಾ ದೇವಾಂಗ ಸಂದ ವತಿಯಿಂದ ಹಳೆ ಬನಶಂಕರಿ ದೇವಸ್ಥಾನದಲ್ಲಿ ಮಾ. 30 ರಂದು ದೇವರ ದಾಸಿಮಯ್ಯನವರ ಕುರಿತು ವಚನ ಸ್ಪರ್ಧೆ, ಭಾಷಣ ಸ್ಪರ್ಧೆ ಮತ್ತು ನಿಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು.
ನಗರಸಭೆ ಸದಸ್ಯ ರಾವೇಂದ್ರ ಯಳವತ್ತಿ ದೇವರ ದಾಸಿಮಯ್ಯನವರ ಭಾವಚಿತ್ರಕ್ಕೆ ಪುಷ್ಪವನ್ನು ಸಮರ್ಪಣೆ ಮಾಡುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜ ಬಾಂಧವರಲ್ಲಿ ಮತ್ತು ಮಕ್ಕಳಲ್ಲಿ ಇಂತಹ ಸ್ಪರ್ಧೆಗಳು ಇಂದಿನ ಸಮಯದಲ್ಲಿ ಅತೀ ಅವಶ್ಯವಾಗಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಇಂತಹ ಸ್ಪರ್ಧೆಗಳು ಜರುಗಬೇಕು. ದಾಸಿಮಯ್ಯನವರ ಕುರಿತು ಇನ್ನೂ ಹೆಚ್ಚಿನ ಪ್ರಚಾರ ಆಗಬೇಕಿದೆ. ದಾಸಿಮಯ್ಯನವರ ವಚನಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಅನಿಲಕುಮಾರ ಗಡ್ಡಿ ಮಾತನಾಡಿ. ದೇವರ ದಾಸಿಮಯ್ಯನವರ ಮೂತಿರ್ಯನ್ನು ಪ್ರತಿಷ್ಟಾಪಿಸಿದ್ದು ಹೆಮ್ಮೆಯ ವಿಷಯವಾಗಿದೆ. ಪ್ರತಿ ವರ್ಷ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ದಾಸಿಮಯ್ಯನವರ ಮೂತಿರ್ಯ ಮುಂಭಾಗದಲ್ಲಿ ಆಚರಿಸಲಾಗುತ್ತಿದೆ. ಎಲ್ಲಾ ಸಮಾಜಬಾಂದವರು ತಪ್ಪದೆ ಆಗಮಿಸಬೇಕು ಎಂದರು.
ಕುರುಹಿನ ಶೆಟ್ಟಿ ನೇಕಾರ ಸಂಗದ ಅಧ್ಯಕ್ಷ ದೇವೆಂದ್ರಪ್ಪ ಗೋಟೂರ ಮಾತನಾಡಿ, ನೇಕಾರಿಕೆಯನ್ನೇ ಮೂಲ ಕಸುಬನ್ನಾಗಿ ಮಾಡಿಕೊಂಡು ನಮಗೆಲ್ಲಾ ಮಾರ್ಗದರ್ಶನ ನೀಡಿದ ಮಹಾನ ಸಂತರು ದಾಸಿಮಯ್ಯನವರು. ಇವರ ಜಯಂತಿ ಅಂಗವಾಗಿ ಈ ಸ್ಪರ್ಧಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಶಂಕ್ರಮ್ಮ ಕಂಪ್ಲಿ, ಅಂಬರೀಶ ಚಾಗಿ, ಸುಜಾತಾ ಕಾಕಂಡ್ಕಿ, ವಸಂತ ಇಂಜನಿ, ಲಣ ನೀಲಗುಂದ, ಅರವಿಂದ ಗಂಜಿ, ದೊಡ್ಡಪ್ಪ ಮೂಲಿಮನಿ, ಗೀತಾ ದೇವಾಂಗಮಠ, ಶಕುಂತಲಾ ಬಿಜಲಿ, ವೀಣಾ ನೀಲಗುಂದ ಇತರರು ಇದ್ದರು.