AA 
ಜಿಲ್ಲೆ

ಧನ್ವಂತರಿ ಜಯಂತಿ, ಆಯುರ್ವೇದ ದಿನಾಚರಣೆ

Gadag - Shivanand Hiremath

ಗದಗ: ದೇಶೀಯ ಆಯುರ್ವೇದ ಪದ್ದತಿ ಅತ್ಯಂತ ಶ್ರೇಷ್ಠವಾಗಿದೆ. ಆದ್ದರಿಂದಲೇ ಪ್ರಪಂಚದ ವಿವಿಧ ವಿದೇಶಿಯರು ಭಾರತಕ್ಕೆ ಆಯುಷ ಚಿಕಿತ್ಸೆಯನ್ನು ಪಡೆಯಲು ಅರಸಿ ಬರುತ್ತಾರೆ ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಹೇಳಿದರು.

ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ ನಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಆಯುಷ ಇಲಾಖೆ ಸಹಯೋಗದಲ್ಲಿ ಜರುಗಿದ ಶ್ರೀ ಧನ್ವಂತರಿ ಜಯಂತಿ ಹಾಗೂ 9ನೇ  ಆಯುರ್ವೇದ ದಿನಾಚರಣೆ ಕಾರ್ಯಕ್ರಮದ ಚಟದಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯ ಆಯುಷ ಇಲಾಖೆಯಲ್ಲಿ ಉತ್ತಮವಾದ ಯೋಗ ಹಾಲ್, ಪಂಚಕರ್ಮ ಚಿಕಿತ್ಸಾ ವ್ಯವಸ್ಥೆ, ಲಭ್ಯವಿದ್ದು ಇದರ ಸೌಲಭ್ಯ ಪಡೆಯಲು ವಿವಿಧ ಜಿಲ್ಲೆಯಿಂದ ಸಾರ್ವಜನಿಕರು ಆಗಮಿಸುವುದು ಒಳ್ಳೆಯ ಸಂಗತಿ, ಪ್ರಸ್ತುತ ದಿನಮಾನದಲ್ಲಿ ಶಸ್ತçಚಿಕಿತ್ಸೆಗೆ ಒಳಪಡಬೇಕಾದ ರೋಗಿಗಳಿಗೆ ಆಯುರ್ವೇದ ಚಿಕಿತ್ಸೆ ಕಡೆ ಹೋಗುತ್ತಿದ್ದಾರೆ ಎಂದರು.

ವಿದೇಶದಿದ ಆಯುರ್ವೇದ ಚಿಕಿತ್ಸೆಯ ಮಹತ್ವ ಅರಿತುಕೊಂಡು ಭಾರತಕ್ಕೆ ಆಯುರ್ವೇದ ಚಿಕಿತ್ಸೆ ಪಡೆಯಲು ಬರುತ್ತಿದ್ದಾರೆ ಇದು ನಮಗೆ ಹೆಮ್ಮಯ ಸಂಗತಿ. ನಮ್ಮ ದೇಶೀಯ ಆಯುರ್ವೇದ ಪದ್ದತಿ ನಮ್ಮ ಹೆಮ್ಮೆ ಯಾಗಿದೆ ಎಂದರು.

ಜಿಲ್ಲಾ ಆಯುಷ ಅಧಿಕಾರಿ ಮಲ್ಲಿಕಾರ್ಜುನ ಉಪ್ಪಿನ ಮಾತನಾಡಿ, ಶ್ರೀ ಧನ್ವಂತರಿ ಜಯಂತಿಯನ್ನು ಹಬ್ಬದ ರೀತಿ ಎಲ್ಲರೂ ಸಂಭ್ರಮ ದಿಂದ ಆಚರಿಸಿದ್ದು ಖುಷಿ ವಿಚಾರ, ಈ ವರ್ಷ ಜಿಲ್ಲೆಯಾದ್ಯಂತ ಆಯುರ್ವೇದ ಸಪ್ತಾಹ ಆಚರಿಸಿ ಜನರಿಗೆ ಆಯುರ್ವೇದ ಬಗ್ಗೆ ತಿಳಿಮುಡಿಸಿದ್ದು ವಿಶೇಷ, ಜಿಲ್ಲೆಯ ನರ್ಸಿಂಗ್ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಸೇರಿದಂತೆ ಎಲ್ಲರೂ ಆಯುರ್ವೇದ ಕುರಿತು ಮಾಹಿತಿ ತಿಳಿದುಕೊಳ್ಳಬೇಕು ಎಂದು ಹೇಳಿದರು.

ಜಿಲ್ಲೆಯ ಆಯುಷ ಇಲಾಖೆಯ ಅಧಿಕಾರಿಗಳು ಆಯುರ್ವೇದ ರಂಗದಲ್ಲಿ ರಾಜ್ಯ ಮತ್ತು ರಾಷ್ಟç ಮಟ್ಟದಲ್ಲಿ ಪ್ರಶಸ್ತಿಯನ್ನು ತೆಗೆದುಕೊಂಡಿದ್ದು ಹೆಮ್ಮಯ ಸಂಗತಿ,ಆಯುರ್ವೇದವು ಜಗತ್ತು ಸೃಷ್ಟಿ ಆದಾಗಿನಿಂದ ನಿರ್ಮಾಣವಾಗಿದೆ ಎಂದು ತಿಳಿಸಿದರು.

ಈ ವರ್ಷದ ಘೋಷ ವಾಕ್ಯ “ಜಾಗತೀಕ ಆರೋಗ್ಯಕ್ಕಾಗಿ ಆಯುರ್ವೇದ ನಾವಿನ್ಯತೆಯೊಂದಿಗೆ ಮಹಿಳಾ ಸಬಲೀಕರಣಕ್ಕಾಗಿ ಆಯುರ್ವೇದ” ಎಂಬುದಾಗಿದ್ದು ಅದರಂತೆ ಜಿಲ್ಲೆಯಲ್ಲಿನ ಎಲ್ಲ ಆಸ್ಪತ್ರೆ ಹಾಗೂ ಆಯುಷ್ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ಅಕ್ಟೋಬರ್ 21 ರಿಂದ ಅಕ್ಟೋಬರ್ 25 ರವರೆಗೆ ಆಯುರ್ವೇದ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಂಡು 12 ರಿಂದ 21 ವಯಸ್ಸಿನ ಹದಿಹರೆಯದ ಹೆಣ್ಣು ಮಕ್ಕಳ ಯೋಗಕ್ಷೇಮದಲ್ಲಿ ಆಯುರ್ವೇದದ ಪಾತ್ರ, ಪರಿಸರ ರಕ್ಷಣೆ ಹಾಗೂ ಸಸ್ಯ ಹಾಗೂ ಪ್ರಾಣಿಗಳ ಯೋಗಕ್ಷೇಮದಲ್ಲಿ ಆಯುರ್ವೇದದ ಪಾತ್ರ. ಮಾನವನ ಸ್ವಾಸ್ಥö್ಯ ರಕ್ಷಣೆ ಹಾಗೂ ಯೋಗಕ್ಷೇಮದಲ್ಲಿ ಆಯುರ್ವೇದದ ಪಾತ್ರ, 45 ವರ್ಷ ಮೇಲ್ಪಟ್ಟ ಮಹಿಳೆಯರ ಯೋಗಕ್ಷೇಮದಲ್ಲಿ ಆಯುರ್ವೇದ ಪಾತ್ರ, ದಿನಾಚರಣೆ ಮಹತ್ವ ಹಾಗೂ ಜಾಗತೀತ ಆರೋಗ್ಯಕ್ಕಾಗಿ ಆಯುರ್ವೇದ ನಾವಿನ್ಯತೆ ಕುರಿತು ಸಾರ್ವಜನಿಕರಿಗೆ/ಜನಸಾಮಾನ್ಯರಿಗೆ ಅರಿವು ಮೂಡಿಸುವುದು. ಎಂಬುದರ ಕುರಿತಾಗಿ ಆಚರಿಸಲಾಗಿರುವ ಬಗ್ಗೆ ತಿಳಿಸಿದರು.

ಈ ವರ್ಷದ ಆರ್ಯುವೇದ ದಿನಾಚರಣೆಯ ಘೋಷವಾಕ್ಯವಾದ ಜಾಗತಿಕ ಆರೋಗ್ಯಕ್ಕಾಗಿ ಆಯುರ್ವೇದ ನಾವಿನ್ಯತೆಯೊಂದಿಗೆ ಮಹಿಳಾ ಸಬಲೀಕಣಕ್ಕಾಗಿ ಆಯುರ್ವೇದ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಡಾ.ಆಶಾ ನಾಯ್ಕ ಅವರು ಧನ್ವಂತರಿ ಜಯಂತಿ ಕುರಿತು ಸುಧೀರ್ಘ ವಾಗಿ ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್ ಶಿವನಗೌಡರ, ಜಿಲ್ಲಾ ಪಂಚಾಯತ ಸಿಇಓ ಭರತ್ ಎಸ್, ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಬಿ.ಎಸ್.ನೇಮಗೌಡ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ,ಡಾ. ಪಿ.ಎಸ್.ಪಲ್ಲೇದ,ಡಾ.ಕಮಲಾಕರ,ಸಂಜೀವ ನಾರಾಪ್ಪನವರ ಸೇರಿದಂತೆ ಆಯುಷ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.

ಕಾರ್ಯಕ್ರಮವನ್ನು ಪ್ರಕಾಶ ಮಡಿವಾಳರ,ನಿರೂಪಣೆ ಮಾಡಿದರು