ಜಿಲ್ಲೆ

ಋತುಚಕ್ರ ಶಾಪವಲ್ಲ, ನೈಸಗಿರ್ಕ ಪ್ರಕ್ರಿಯೆ. ಡಂಬಳದಲ್ಲಿ ಜಾಗೃತಿ ಕಾರ್ಯಕ್ರಮ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ

ಋತುಚಕ್ರ ಶಾಪವಲ್ಲ. ಅದು ನೈಸಗಿರ್ಕ ಪ್ರಕ್ರಿಯೆ ಎಂದು ಮಿಲಾನ್​ ಪೌಂಡೇಷನ್​ ಗರ್ಲ ಐಕಾನ್​ ಪ್ರಿಯಾ ದಶಿರ್ನಿ ಹೇಳಿದರು.
ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದಲ್ಲಿ ಸೋಮವಾರ ಜರುಗಿದ 12 ರಿಂದ 18 ವರ್ಷದ ಕಿಶೋರಿಯರಿಗೆ ಮಾಸಿಕ ಋತು ಚಕ್ರ ನೈರ್ಮಲ್ಯದ ಕುರಿತು ವಿಶೇಷ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಾತನಾಡಿ, ಮಕ್ಕಳು ಮತ್ತು ಪೋಷಕರು ಭಯ ಪಡುವ ಅಗತ್ಯವಿಲ್ಲ. ಇದು ಸಹಜ ಪ್ರಕ್ರಿಯೆ. ಈ ಪ್ರಕ್ರಿಯೆ ಜರುಗಿದಾ ಮೈಲಿಗೆ ಎಂದು ಭಾವಿಸದೇ ಶುಚಿತ್ವ ಕಾಪಾಡಿಕೊಳ್ಳಬೇಕು. ದೇವಸ್ಥಾನ ಮತ್ತಿತರೆ ಸ್ಥಳಗಳಿಗೂ ಹೋಗಬಹುದು ಎಂದು ಜಾಗೃತಿ ಮೂಡಿಸಿದರು.
ಆಧುನಿಕ ದಿನದಲ್ಲಿ ಈಗಲೂ ಮಹಿಳೆಯರು ಮಾಸಿಕ ಋತು ಚಕ್ರವಾದರೆ, ಅವರನ್ನು ಮನೆಯಿಂದ ಹೊರಗಡೆ ಇರಿಸುವುದು, ಪೂಜೆ, ಪುನಸ್ಕಾರ, ದೇವಸ್ಥಾನಗಳಿಗೆ ಹೋಗದಂತೆ ತಡೆಯುವ ಟನೆಗಳು ಬೆಳಕಿಗೆ ಬರುತ್ತವೆ. ಗ್ರಾಮೀಣ ಭಾಗದಲ್ಲಿ ಅಧಿಕವಾಗಿ ಕಂಡು ಬರುತ್ತಿವೆ. ಹೀಗೆ ಅನೇಕ ಮೂಡನಂಬಿಕೆಗೆ ಒಳಗಾಗುತ್ತಾರೆ. ಇದರಿಂದ ಮಹಿಳೆಯರು ಸಮಸ್ಯೆ ಎದುರಿಸುವಂತಾಗಿದೆ. ಇಂದತ ಮೂಢ ನಂಬಿಕೆ ತೊಲಗಬೇಕು ಎಂದು ಪ್ರೀಯಾ ದಶಿರ್ ನಿ ಹೇಳಿದರು.
ೌಂಡೇಷನ್​ ನಿವಾರ್ಹಕಿ ಪ್ರಿಯಾ ದಿಗ್ವಿಜಯಾ, ಕಾರ್ಯಕ್ರಮ ಸಂಯೋಜಕಿ ನಾಗವೇಣಿ ಪಟ್ಟಣಶೆಟ್ಟರ್​, ಪೂಜಾ ಗಡಗಿ, ರೂಪಾ ಮರಿಗೌಡ್ರ, ಸಕ್ಕುಬಾಯಿ, ಮೆಹಬೂಬಿ, ವಿದ್ಯಾಶ್ರೀ, ಕೀತಿರ್, ಲಕ್ಷಿ$್ಮ ಸೇರಿದಂತೆ ಕಾರ್ಯಕ್ರಮದಲ್ಲಿ ಸುಮಾರು 20 ಕ್ಕೂ ಜನ ಕಿಶೋರಿಯರು, ತಾಯಂದಿರು ಪಾಲ್ಗೊಂಡಿದ್ದರು.