ಜಿಲ್ಲೆ

ದಿನನಿತ್ಯ ಜೀವನದಲ್ಲಿ ವಚನಗಳ ಸಾರವನ್ನು ಅಳವಡಿಕೊಳ್ಳುವುದು ಅತಿ ಅಗತ್ಯ: ಮಾಜಿ ಶಾಸಕ ಡಿ. ಆರ್​. ಪಾಟೀಲ.

ವಿಜಯವಾಣಿ ಸುದ್ದಿಜಾಲ ಗದಗ

ಹನ್ನರಡನೇ ಶತಮಾನದ ಶರಣರು, ವಚನಕಾರರು ರಚಿಸಿದ ವಚನಗಳು ಕೇವಲ ಸಾಹಿತ್ಯವಾಗಿರದೆ ಅವುಗಳು ಸರ್ವಕಾಲಕ್ಕೂ ಸಲ್ಲುವ ಜೀವನದ ಅನುಭವಗಳನ್ನು ಸಮಾಜಕ್ಕೆ ತಿಳಿಸಿ ಕೊಡುವ ಸಾಮಾಜಿಕ, ನೈತಿಕ ಮೌಲ್ಯಗಳನ್ನು ಸರಳವಾಗಿ ತಿಳಿಸುವ ವಿಧಾನವಾಗಿದೆ ಎಂದು ಮಾಜಿ ಶಾಸಕ ಡಿ. ಆರ್​. ಪಾಟೀಲ ಹೇಳಿದರು.

ವಚನ ಸಂರಕ್ಷಣಾ ದಿನದ ಅಂಗವಾಗಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ, ಸ್ವಾಮಿ ವಿವೇಕಾನಂದ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯ ಆಶ್ರಯದಲ್ಲಿ ಹುಲಕೋಟಿಯ ಸ್ವಾಮಿ ವಿವೇಕಾನಂದ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಚನ ಪಿತಾಮಹ ಫ. ಗು ಹಳಕಟ್ಟಿಯವರ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಚನಗಳ ತತ್ವ ಸಾರವನ್ನು ಕೇವಲ ಬಾಯಿ ಮಾತಿನಲ್ಲಿ ಹೇಳದೆ ನಿಜ ಜೀವನದಲ್ಲಿ, ನಡೆ-ನುಡಿಯಲ್ಲಿ ಅಳವಡಿಸಿಕೊಳ್ಳುವ ತುರ್ತು ಅವಶ್ಯಕತೆ ಇದೆ. ನಮ್ಮ ನಾಡಿನ ಸಾಧು ಸಂತರು, ಶರಣರ ವಿಚಾರಗಳನ್ನು ನಾವೆಲ್ಲರೂ ಹೇಳುವುದು ಕೇಳುವುದನ್ನು ದಿನನಿತ್ಯ ಮಾಡುತ್ತೇವೆ. ಆದರೆ ಅವುಗಳನ್ನು ನಮ್ಮ ಜೀವನ ರ್ಪೂತಿ ಪ್ರತಿ ಹಂತದಲ್ಲೂ ಅಳವಡಿಸಿಕೊಂಡು ಅದರಂತೆ ನಡೆಯುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.

ಧಾರವಾಡ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಸಂಗಮೇಶ ಲೋಕಾಪುರ ಮಾತನಾಡಿ, ವಚನ ಸಾಹಿತ್ಯ ನೂರಾರು ವರ್ಷಗಳಿಂದ ಉಳಿದುಕೊಂಡು ಬಂದಿದೆ. ಇಂದು ಸುಲಭವಾಗಿ ಲಭ್ಯವಾಗಲು ಅವುಗಳನ್ನು ಪ್ರಕಟಿಸುವಲ್ಲಿ ಫ .ಗು ಹಳಕಟ್ಟಿಯವರು ತಮ್ಮ ಬದುಕನ್ನು ಮುಡುಪಾಗಿಟ್ಟವರು. ಹಾಳಾಗಿ ಹೋಗುತ್ತಿದ್ದ ವಚನಗಳನ್ನು ನಿಸ್ವಾರ್ಥ ಸೇವೆಯಿಂದ ಜನರ ಮನೆಮನೆಗೆ ತೆರಳಿ ಸಂಗ್ರಹಿಸಿ, ಪ್ರಕಟಿಸಿ ಜನಸಾಮಾನ್ಯರಿಗೆ ಮುಟ್ಟಿಸಿ ನೂರಾರು ವಚನಕಾರರನ್ನು ಈ ಸಮಾಜಕ್ಕೆ ಪರಿಚಯಿಸಿದ ಕೀತಿರ್ ಇವರಿಗೆ ಸಲ್ಲುತ್ತದೆ. ಅವರ ಜನ್ಮದಿನವನ್ನು ವಚನ ಸಂರಕ್ಷಣಾ ದಿನವೆಂದು ಸರ್ಕಾರ ಘೋಷಿಸಿರುವುದು ಅರ್ಥರ್ಪೂಣ ಎಂದರು.

ಜೆ. ಕೆ. ಜಮಾದಾರ ಮಾತನಾಡಿ, ನಮ್ಮ ಭಾಗದ ಶ್ರೇಷ್ಠ ವ್ಯಕ್ತಿಗಳಾದ ಫ. ಗು. ಹಳಕಟ್ಟಿ ಅವರು ಮಾಡಿದ ಕಾರ್ಯ ಇತಿಹಾಸದ ಪುಟದಲ್ಲಿ ಉಳಿಯುವ ಕಾರ್ಯವಾಗಿದೆ. ಅವರ ಕಾರ್ಯ ಸ್ಮರಣೀಯ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ. ಎ. ಬಳಿಗೇರ ಮಾತನಾಡಿ ಇಂದಿನ ಶಾಲಾ ಕಾಲೇಜುಗಳ ವಿದ್ಯಾಥಿರ್ಗಳಿಗೆ ವಚನಕಾರರ ತತ್ವ- ವಿಚಾರ, ವಚನಗಳು ಬಹಳಷ್ಟು ಉಪಯುಕ್ತವಾವೆ. ವಚನಗಳನ್ನು ಎಂದಿಗೂ ಅಚ್ಚಳಿಯದಂತೆ ಈ ಸಮಾಜಕ್ಕೆ ಸರ್ಮಪಿಸಿದ ಕೀತಿರ್ ಫ. ಗು. ಹಳಕಟ್ಟಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.

ನಿವೃತ್ತ ಉಪನಿರ್ದೇಶಕ ಎ. ಎನ್​. ನಾಗರಳ್ಳಿ, ಪ್ರೇಮಾ ಮೇಟಿ, ಎಂ. ಕೆ. ಲಮಾಣಿ, ಪ್ರಿಯಾ ಪಾಟೀಲ, ಸುಧಾ ಹುಚ್ಚಣ್ಣವರ, ಬೂದಪ್ಪ ಅಂಗಡಿ, ಎಸ್​. ಎಂ. ಮರಿಗೌಡರ ಇತರರು ಇದ್ದರು.