ವಿಜಯವಾಣಿ ಸುದ್ದಿಜಾಲ ಗದಗ
ಬಸವೇಶ್ವರ ನಗರದಲ್ಲಿ ಶನಿವಾರ ರಾತ್ರಿ ಕನ್ನಡ ನುಡಿ ಸಂಭ್ರಮ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ. ಸುಭಾಷ್ ಶಿವನಗೌಡರ, ಸಂಸತೀಯತಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಆಲಿಸುವುದರಿಂದ ನಮ್ಮ ದೇಹದಲ್ಲಿ ಮಾನಸಿಕವಾಗಿ ಖಿನ್ನತೆ ದೂರವಾಗಿ ಆರೋಗ್ಯ ವೃದ್ಧಿಸುತ್ತದೆ. ನಗರದಲ್ಲಿ ಇಂತಹ ಕಾರ್ಯಕ್ರಮಗಳು ನಿರಂತರ ಜರಗುತ್ತಿರಬೇಕು. ಸಂಗೀತದಿಂದ ಮನೋವಿಕಾಸ ಆಗುತ್ತದೆ. ಇದಕ್ಕಾಗಿ ಯುವ ಸಮೂಹ ಒಗ್ಗೂಡಬೇಕು ಹಾಗೂ ದುಶ್ಚಟಗಳಿಂದ ದೂರವಿರಬೇಕು ಎಂದರು.
ನಗರಸಭೆ ಸ್ಥಾಯಿ ಸಮಿತಿ ಅಧ್ಯ ಅನಿಲ ಅಬ್ಬಿಗೇರಿ ಮಾತನಾಡಿ, ಸಾಂಸತಿಕ ಕಾರ್ಯಕ್ರಮಗಳು ಸ್ವಚ್ಛತೆಯ ಜಾಗೃತಿಗೆ ಸಹಕಾರಿ ಆಗಿದೆ. ನಗರಸಭೆಯಿಂದ ಇಂತಹ ಕಾರ್ಯಕ್ರಮಗಳಿಗೆ ಸಹಕಾರ ನೀಡಲಾಗುವುದು. ಎಲ್ಲರೂ ಮನೆಯ ಮತ್ತು ಸಾರ್ವಜನಿಕ ಸ್ಥಳಗಳ ಸ್ವಚ್ಛತೆ ಬಗ್ಗೆ ಆಧ್ಯತೆ ನಿಡಬೇಕು ಎಂದು ಹೇಳಿದರು.
ಕಲಾವಿದ ವೀರಯ್ಯ ಹೊಸಮಠ ಪ್ರಾಸ್ತಾವಿಕ ಮಾತನಾಡಿ, ನಮ್ಮ ತಂಡದಿಂದ ಹಲವು ಶುಭ ಕಾರ್ಯಕ್ರಮಗಳು, ಸರ್ಕಾರಿ ಹಾಗೂ ಖಾಸಗಿ ಸಾಂಸತಿಕ ಕಾರ್ಯಕ್ರಮಗಳನ್ನು ನೀಡಲಾಗುತ್ತಿದೆ. ಆ ಕಾರ್ಯಕ್ರಮದಲ್ಲಿ ಬಂದಂತಹ ಹಣದಿಂದ ಸಂಸ್ಥೆಯನ್ನು ನಡೆಸುವಂತಹ ಸಮಾಜಮುಖಿ ಕಾರ್ಯವನ್ನು ನಡೆಸಲಾಗುವುದು ಎಂದರು.
ರಾಚಯ್ಯ ಹೊಸಮಠ, ಪ್ರಭಯ್ಯ ದಂಡಾವತಿಮಠ, ಡಾ. ವಿ. ವಿ ಹಿರೇಮಠ, ಚಂದ್ರು ಮುಳಗುಂದ, ವಿಜಯಕುಮಾರ್ ಹಿರೇಮಠ, ಸಿದ್ದಲಿಂಗಪ್ಪ ಒಳಗುಂದಿ, ಮಂಜುನಾಥ್ ದಾಮೋದರ್ ಹಲವರು ಇದ್ದರು.