ಜಿಲ್ಲೆ

ಪ್ರವಾಹದಿಂದ ಹಾನಿಗೀಡಾದ ಹಳ್ಳಿಗಳಿಗೆ ಸಚಿವ ಎಚ್.ಕೆ. ಪಾಟೀಲ, ಶಾಸಕ ಸಿ.ಸಿ. ಪಾಟೀಲ, ಮಾಜಿ ಶಾಸಕ ಬಿ.ಆರ್. ಯಾವಗಲ್ ಭೇಟಿ ಪರಿಶೀಲನೆ

Gadag - Shivanand Hiremath
ಗದಗ
ಬೆಣ್ಣೆಹಳ್ಳ ಪ್ರವಾಹದಿಂದ ಹಾನಿಗೀಡಾದ ನರಗುಂದ ಹಾಗೂ ರೋಣ ಭಾಗದ ಹಳ್ಳಿಗಳಿಗೆ ಸಚಿವ ಎಚ್.ಕೆ. ಪಾಟೀಲ, ಶಾಸಕ ಸಿ.ಸಿ. ಪಾಟೀಲ, ಮಾಜಿ ಶಾಸಕ ಬಿ.ಆರ್. ಯಾವಗಲ್ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನರಗುಂದ ತಾಲೂಕಿನ ಕುರ್ಲಗೇರಿ ಗ್ರಾಮದಲ್ಲಿ ಬೆಳೆಹಾನಿ ಸಮೀಕ್ಷೆ ನಡೆಸಿದ ಜನಪ್ರತಿನಿಧಿಗಳು ವಿವಿಧ ಬಿತ್ತನೆ ಕ್ಷೇತ್ರಗಳ ಹಾನಿಗೀಡಾದ ಬಗ್ಗೆ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು. ಕುರ್ಲಗೇರಿ ಗ್ರಾಮದ ಮೇಲ್ಸೇತುವೆ ಕೆಲಭಾಗಗಳಲ್ಲಿ ಗಿಡಗಂಟಿಗಳನ್ನು ತುರ್ತು ತೆರವುಗೊಳಿಸಲು ಸಚಿವ ಎಚ್.ಕೆ. ಪಾಟೀಲ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು
ಕುರ್ಲಗೇರಿ ಗ್ರಾಮದ ಸ್ಥಳಾಂತರ ಗ್ರಾಮದಲ್ಲಿ ಮೂಲಭೂತ ಸೌಕರ್ಯ ಇಲ್ಲದ ಕುರಿತು, ಮನೆಗಳ ಸಮರ್ಪಕ ಹಂಚಿಕೆ ಆಗದ ಕುರಿತು ಸಚಿವರಲ್ಲಿ ದೂರು ನೀಡಿದರು. ಮತ್ತು ಹೊಲಗಳಲ್ಲಿ ಒಡ್ಡು ಒಡೆದ ಕುರಿತು ಅಳಲು ತೋಡಿಕೊಂಡರು. ಈ ವೇಳೆ ಸಚಿವರು ಮಾತನಾಡಿ, ಕುರ್ಲಗೇರಿ ನೂತನ ಗ್ರಾಮಕ್ಕೆ ಜನರು ಸ್ಥಳಾಂತರ ಗೊಂಡಿಲ್ಲ. ಈ ಹಿನ್ನೆಲೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮನೆ ಅಗತ್ಯವಿರುವರ ಪಟ್ಟಿ ಸಿದ್ದಪಡಿಸಿ ಅವರಿಗೆ ಮನೆ ಹಂಚಲು ಸೂಚಿಸಿದ್ದೇನೆ ಎಂದು ತಿಳಿಸಿದರು. ಗ್ರಾಮದಲ್ಲಿ ನೀರಿನ ಹರಿವಿನಿಂದ ಒಡ್ಡು ಒಡೆದು ಹೋದು ಕುರಿತು ಸಚಿವ ಶಾಸಕರಲ್ಲಿ ಜನರು ನೋವು ತೋಡಿಕೊಂಡರು. ಒಡ್ಡು ಹಾಕಿಸಿಕೊಡುವುದಾಗಿ ಶಾಸಕ ಸಿ.ಸಿ. ಪಾಟೀಲ, ಸಚಿವ ಎಚ್.ಕೆ. ಪಾಟೀಲ ಭರವಸೆ ನೀಡಿದರು.
ಹದಲಿ, ಯಾವಗಲ್, ಸುರಕೋಡ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪರಿಹಾರ ಬಂದಿಲ್ಲ:
ಕಳೆದ ಬಾರಿ ಬೆಣ್ಣೆಹಳ್ಳದ ಪ್ರವಾಹದಿಂದ ಬೆಳೆಹಾನಿ ರೈತರಿಗೆ ಸರ್ಕಾರ ಘೋಷಿಸಿದ್ದ ಮಧ್ಯಂತರ ಬೆಳೆ ಪರಿಹಾರ ರೈತರ ಖಾತೆ ಇನ್ನೂ ಬಾರದ ಕುರಿತು ರೈತರು ಅಳಲು ತೋಡಿಕೊಂಡರು. ಕಳೆದ ಬಾರಿ ಮಧ್ಯಂತರ ಬೆಳೆ ಪರಿಹಾರ ಮತ್ತು ಪ್ರಸಕ್ತ ಸಾಲಿನ ಬೆಳೆಹಾನಿ ಕ್ಷೇತ್ರವನ್ನು ತುರ್ತು ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಎಚ್.ಕೆ. ಪಾಟೀಲ ಏನ್ ಹೇಳಿದ್ರು?
* ಬೆಣ್ಣೆಹಳ್ಳ ಪ್ರವಾಹದಿಂದ 2000 ಎಕರೆ ಕ್ಷೇತ್ರ ಬೆಳೆ ಹಾನಿ
* ತಕ್ಷಣ ಬೆಳೆಹಾನಿ ಸಮೀಕ್ಷೆ ನಡೆಸಲು ಅಧಿಕಾರಿಗಳಿಗೆ ಸೂಚನೆ.
* ಬೆಣ್ಣೆಹಳ್ಳ ಪ್ರವಾಹ ತಡೆಗೆ ಸರ್ಕಾರದ 200 ಕೋಟಿ ಯೋಜನೆ ಶೀಘ್ರ ಜಾರಿ.
* ಬೆಣ್ಣೆಹಳ್ಳದಲ್ಲಿ ಹರಿಯುವ 16 ಟಿಎಂಸಿ ನೀರು ಸಂಗ್ರಹ ಅಸಾಧ್ಯ.
* ಶೀಘ್ರ ಬಂದು ಹೋಗುವ ಪ್ರವಾಹ ಆದ್ದರಿಂದ ಸಂಗ್ರಹಣೆ ಅಸಾಧ್ಯ.
* ಯಾವಗಲ್, ಮೆಣಸಗಿ ಸಂಪರ್ಕ ಸೇತುವೆ ಹೆಚ್ಚಿಸುವ ಭರವಸೆ.
ಕೋಟ್: 
ಬೆಣ್ಣೆಹಳ್ಳದ ಭಾಗದಲ್ಲಿ ಅಂದಾಜು 7000 ಎಕರೆ ಭೂಮಿ ಪ್ರವಾಹಕ್ಕೆ ಒಳಪಡುತ್ತದೆ. ಬಾರಿ 2000 ಕ್ಕೂ ಅಧಿಕ ಎಕರೆ ಬಿತ್ತನೆ ಜಮೀನು ನಾಶ ಆಗಿರಬಹುದು ಎಂದು ಅಂದಾಜಿಸಲಾಗಿದೆ. ತುರ್ತು ಸಮೀಕ್ಷೆ ನಡೆಸಲಯ ಸೂಚಿಸಲಾಗಿದೆ. ಬೆಳೆ ಪರಿಹಾರ ಸಮರ್ಪಕ ನೀಡಲಾಗುವುದು.
* ಎಚ್.ಕೆ. ಪಾಟೀಲ, ಸಚಿವರು
ಕೋಟ್:
ನರಗುಂದ ಕ್ಷೇತ್ರದ ನಾಲ್ಕಾರು ಹಳ್ಳಿಗಳ ಜನರು ಪ್ರವಾಹ ಸಂದರ್ಭದಲ್ಲಿ ಸಮಸ್ಯೆ ಅನುಭವಿಸುತ್ತಾರೆ. ಶಿಗ್ಗಾವಿಯಿಂದ ನರಗುಂದ, ರೋಣ ಕ್ಷೇತ್ರ ಮುಕ್ತಾಯದ ವರೆಗೂ ಬೆಣ್ಣೆಹಳ್ಳಕ್ಕೆ ತಡೆಗೋಡೆ ಸೇರಿದಂತೆ ಅಭಿವೃದ್ಧಿ ಕಾರ್ಯಕ್ಕೆ ಸರ್ಕಾರ ಘೋಷಿಸಿದ ಯೋಜನೆ ಪರಿಣಾಮಕಾರಿ ಅನುಷ್ಠಾನ ಆಗಬೇಕು. ಅಂದಾಗ ಮಾತ್ರ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಂತಾಗುತ್ತದೆ.
* ಸಿ. ಸಿ. ಪಾಟೀಲ, ಶಾಸಕ