ಗದಗ: ಮೂವತ್ತು ಗ್ರಾಂ ಚಿನ್ನಾಭರಣ, 100 ಗ್ರಾಂ ಬೆಳ್ಳಿ ಆಭರಣ ಮತ್ತು 2160 ರೂ. ಇದ್ದ ಬ್ಯಾಗ್ ಅನ್ನು ಸಂತ್ರಸ್ತೆಗೆ ಮರುಕಳಿಸಿ ಬಸ್ ನಿರ್ವಾಹಕಿ ಓರ್ವವರು ಮಾನವೀಯತೆ ಮರೆದ ಟನೆ ಗದಗ ನಗರದಲ್ಲಿ ಶನಿವಾರ ನಡೆದಿದೆ. ನಿರ್ವಾಹಕಿಯ ಪ್ರಮಾಣಿಕ ಕರ್ತವ್ಯವನ್ನು ಸಾರ್ವಜನಕಿರು ಶ್ಲಾಘಿಸಿದ್ದಾರೆ.
ಗದಗ ಮಾರ್ಗವಾಗಿ ಹಾವೇರಿ ಜಿಲ್ಲೆ ಬ್ಯಾಡಗಿ ಯಿಂದ ಕೊಪ್ಪಳ ನಗರಕ್ಕೆ ಹೊರಟ್ಟಿದ್ದ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಗದಗ ತಾಲೂಕಿನ ಮುಳಗುಂದ ಪಟ್ಟಣದ ಶಕಿಲಾಬಾನು ಎಂಬ ಮಹಿಳೆ ಚಿನ್ನಾಭರಣ, ಬೆಳ್ಳಿ ಆಭರಣ ಇದ್ದ ಬ್ಯಾಗ್ ಅನ್ನು ಮರೆತು ಗದಗ ಬಸ್ ನಿಲ್ದಾಣದಲ್ಲಿ ಶನಿವಾರ ಇಳಿದಿದ್ದಾರೆ. ಬಸ್ ನಲ್ಲಿ ಬ್ಯಾಗ್ ಗಮನಿಸಿದ ನಿರ್ವಾಹಕಿ ಅನಸೂಯಾ ಅವರು ಗದಗ ಬಸ್ ನಿಲ್ದಾಣದ ಅಧಿಕಾರಿ ಶಿವಾನಂದ ಸಂಗಣ್ಣವರ ಹಾಗೂ ಇತರೆ ಅಧಿಕಾರಿಗಳಿಗೆ ಬ್ಯಾಗ ತಲುಪಿಸಿದ್ದಾರೆ. ಎಲ್ಲರ ಸಮ್ಮುಖದಲ್ಲಿ ಬ್ಯಾಗ್ ತೆರೆದಿದ್ದಾರೆ. ಬ್ಯಾಗ್ ನಲ್ಲಿರುವ ಪಾನ್ ಕಾರ್ಡ ಮೂಲಕ ಬ್ಯಾಗ್ ಕಳೆದುಕೊಂಡ ಮಹಿಳೆ ವಿಳಾಸ ಪತ್ತೆಹಚ್ಚಿದ್ದಾರೆ. ಬ್ಯಾಗ್ ಕಳೆದುಕೊಂಡ ಸಂತ್ರಸ್ತೆ ಶಕಿಲಾಬಾನು ಅವರನ್ನು ಬೆಟಗೇರಿ ಬಡಾವಣೆ ಪೊಲೀಸ ಠಾಣೆಗೆ ಕರೆಯಿಸಿ ಬಸ್ ನಿಲ್ದಾಣ ಅಧಿಕಾರಿಗಳ ಸಮ್ಮುಖದಲ್ಲಿ ಬ್ಯಾಗ್ ಮರುಕಳಿಸಿದ್ದಾರೆ. ನಿರ್ವಾಹಕಿ ಅನಸೂಯಾ ಹಾಗೂ ಚಾಲಕ ಸೊಲಂಕಿ ಅವರ ಮಾನವೀಯತೆಯ ಕಾರ್ಯಕ್ಕೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗಿದೆ.