ವಿಜಯವಾಣಿ ಸುದ್ದಿಜಾಲ ಗದಗ
ಭಾರತೀಯ ಸಂವಿಧಾನದಲ್ಲಿ ತಿಳಿಸಲಾಗಿರುವ ಮೂಲಭೂತ ಹಕ್ಕುಗಳನ್ನು ಪಡೆಯುವುದರ ಜೊತೆಗೆ, ಸಾಂವಿಧಾನಿಕ ಕರ್ತವ್ಯಗಳನ್ನೂ ಸಹ ಎಲ್ಲರೂ ಪಾಲಿಸಬೇಕು ಎಂದು ಪ್ರಧಾನ ಜಿಲ್ಲಾ ನ್ಯಾಯಾಧೀಶ ಬಸವರಾಜ ಹೇಳಿದರು.
ಶನಿವಾರ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಏರ್ಪಡಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ಇಡಿ ವಿಶ್ವದಾದ್ಯಂತ ಇರುವ ಕಾನೂನುಗಳನ್ನು ಸಮಗ್ರವಾಗಿ ಅಭ್ಯಸಿಸಿ, ಭಾರತಕ್ಕೆ ಅತ್ಯುತ್ತಮವಾದ ಸಂವಿಧಾನವನ್ನು ನೀಡಲಾಗಿದೆ. ಅದರ ಭಾಗವಾಗಿರುವ ಎಲ್ಲಾ ಹಕ್ಕುಗಳನ್ನು ಪಡೆಯುವುದಷ್ಟೇ ಅಲ್ಲದೇ, ಕರ್ತವ್ಯಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸಂವಿಧಾನದ ನಿರ್ದೇಶಿತ ತತ್ವಗಳು, ಮಾರ್ಗಸೂಚಿಗಳನ್ನು, ಅಂಶಗಳನ್ನು ಅನುಷ್ಟಾನಗೊಳಿಸಬೇಕು. ಪ್ರಸ್ತಾವನೆಯಲ್ಲಿರುವಂತೆ ಎಲ್ಲಾ ಆಶಯಗಳನ್ನು ಪಾಲಿಸಬೇಕು ಎಂದು ತಿಳಿಸಿದರು.
ನ್ಯಾಯಾಧೀಶ ರಾಜೇಶ್ವರ ಶೆಟ್ಟಿ ಮಾತನಾಡಿ, ಭಾರತೀಯ ಸಂವಿಧಾನವು ಎಲ್ಲ ಕಾನೂನುಗಳ ಮೂಲ. ಸಂವಿಧಾನದ ಕುರಿತಾಗಿ ಶಾಲಾ ಹಂತದಿಂದಲೇ ಪಾಠಗಳಿವೆ. ಪ್ರಮುಖವಾಗಿ ಹಕ್ಕುಗಳು, ಕರ್ತವ್ಯಗಳ ಬಗ್ಗೆ ಬೋಧನೆ ಮಾಡಲಾಗುತ್ತದೆ. ನಂತರದಲ್ಲಿ ಕರ್ತವ್ಯಗಳನ್ನು ಮರೆಯುತ್ತಾರೆ. ಸಂವಿಧಾನದ ಆಶಯಗಳನ್ನು ಜನರಿಗೆ ಇನ್ನೂ ಅರಿವು ಮೂಡಿಸಬೇಕಿದೆ, ಅದರಲ್ಲಿ ನಮ್ಮ ಪಾತ್ರ ಏನು ಎಂಬುದನ್ನು ಅರಿಯಬೇಕಿದೆ ಎಂದರು.
ನಾಯಾಧೀಶ ಅರುಣ ಚೌಗಲೆ ಮಾತನಾಡಿ, ಸಂವಿಧಾನವನ್ನು ಪಾಲಿಸುವುದು, ಅದರ ಆಶಯಗಳನ್ನು ಗೌರವಿಸುವುದು, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಗೌರವಿಸುವುದು, ಭಾರತದ ಸಾರ್ವಭೌಮತ್ವ, ಅಖಂಡತೆ ಮತ್ತು ಏಕತೆಯನ್ನು ಎತ್ತಿ ಹಿಡಿಯುವುದು ಮತ್ತು ಕಾಪಾಡುವುದು, ದೇಶವನ್ನು ರಸುವುದು ಮತ್ತು ದೇಶಸೇವೆಗೆ ಸಿದ್ಧರಿರುವುದು ಭಾರತೀಯರ ಕರ್ಯವ್ಯ ಎಂದರು.
ನ್ಯಾಯಾಧೀಶರಾದ ಬೀರಪ್ಪ ಕಾಂಬಳೆ ಅವರು ಮೂಲಭೂತ ಹಕ್ಕುಗಳ ಬಗ್ಗೆ ವಿವರಿಸಿದರು.
ಕಾರ್ಯಕ್ರಮದ ಅಧ್ಯತೆಯನ್ನು ಎಂ. ಐ. ಹಿರೇಮನಿಪಾಟೀಲ ವಹಿಸಿದ್ದರು. ಖಾದರಸಾಬ ಬೆನಕಟ್ಟಿ, ಕೆ. ಗುರುಪ್ರಸಾದ, ಪ್ರಕಾಶ ಕುರಬೆಟ್ಟ, ಪುಷ್ಪಾ ಜೋಗೊಜಿ, ಬಿ. ಎಚ್. ಮಾಡಲಗೇರಿ, ಪ್ರಕಾಶ ಕಣಗಿನಹಾಳ, ಬಿ. ಎಂ. ಕುಕನೂರ, ಕೆ.ಐ. ಖಂಡೇಬಾಗಿಲ ಇತರರು ಇದ್ದರು.
ೋಟೋ 23ಜಿಡಿಜಿ04
ಗದಗ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಏರ್ಪಡಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ನ್ಯಾಯಾಧೀ ಬಸವರಾಜ ಉದ್ಘಾಟಿಸಿದರು. ರಾಜೇಶ್ವರ ಶೆಟ್ಟಿ, ಅರುಣ ಚೌಗಲೆ, ಬೀರಪ್ಪ ಕಾಂಬಳೆ ಇತರರು ಇದ್ದರು.