ಗದಗ: ಸಹಕಾರ ಮಹಾಮಂಡಳ ನಿ ಬೆಂಗಳೂರು, ಗದಗ ಜಿಲ್ಲಾ ಸಹಕಾರ ಯೂನಿಯನ್ ನಿ ಗದಗ ಕೆ.ಸಿ.ಸಿ. ಬ್ಯಾಂಕ್ ಲಿ ಧಾರವಾಡ, ಕೆ.ಎಂ.ಎಫ್ ಧಾರವಾಡ ಹಾಗೂ ಗದಗ ಜಿಲ್ಲೆಯ ಎಲ್ಲಾ ಸಹಕಾರ ಸಂಘ/ಬ್ಯಾಕುಗಳ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟಿಯ ಸಹಕಾರ ವರ್ಷಾಚರಣೆ 2025 ರ ಅಂಗವಾಗಿ ಹಾಗೂ ಸ್ವಚ್ಛತಾ ಹಿ ಸೇವಾ-2025 ಹಾಗೂ ಸ್ವಚ್ಛತಾ ಮೇ ಸಹಕಾರ ಸಹಯೋಗದೊಂದಿಗೆ “ಏಕ್ ದಿನ್ ಏಕ್ ಘಂಟಾ ಏಕ್ ಸಾಥ್” ಶ್ರಮದಾನ ಕಾರ್ಯಕ್ರಮವು ಗುರುವಾರ ಗದಗ ಜಿಲ್ಲಾ ಸಹಕಾರ ಯೂನಿಯನ್ ನಿ ಗದಗ ಸಭಾಭವನದಲ್ಲಿ ಜರುಗಿತು.
ಕರ್ನಾಟಕ ರಾಜ್ಯ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ ನಿ ಬೆಂಗಳೂರು ಇದರ ನಿರ್ದೇಶಕರಾದ ಎಚ್. ಜಿ ಹಿರೇಗೌಡ್ರ ಅವರು ಮಾತನಾಡುತ್ತಾ ಭಾರತ ಸರ್ಕಾರದ ಮಹತ್ವಾಕಾಂಕ್ಷಯ ಯೋಜನೆ ಸ್ವಚ್ಚ ಭಾರತ ಅಭಿಯಾನ ಅಕ್ಟೋಬರ್ 2, 2014 ರಲ್ಲಿ ಪ್ರಾರಂಭಗೊAಡಿರುತ್ತದೆ. ಆದರೆ ಕೇಂದ್ರ ಸರ್ಕಾರವು 2025ನೇ ವರ್ಷವನ್ನು ಅಂತರಾಷ್ಟಿಯ ಸಹಕಾರ ವರ್ಷ ಎಂದು ಘೋಷಿಸಿದ್ದು ಅದರ ಧ್ಯೇಯ ಸಹಕಾರ ಸಂಸ್ಥೆಗಳು ಉತ್ತಮ ಜಗತ್ತನ್ನು ನಿರ್ಮಿಸಬಲ್ಲವು “ಏಕ್‌ದಿನ್ ಏಕ್ ಘಂಟಾ ಏಕ್ ಸಾಥ್” ಶ್ರಮದಾನ ಕಾರ್ಯಕ್ರಮವನ್ನು ಇಂದು ಆಯೋಜಿಸಿದ್ದು ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ಸಂತಸ ತಂದಿದೆ ಕಾರಣ ಜಿಲ್ಲೆಯಲ್ಲಿರುವ ಎಲ್ಲಾ ಸಹಕಾರ ಸಂಘಗಳು ತಮ್ಮ ಸಂಸ್ಥೆಗಳು ಹಾಗೂ ಸರ್ಕಾರಿ ರಸ್ತೆ, ಆಟದ ಮೈದಾನ, ಉದ್ಯಾನವನ ಹಾಗೂ ಗ್ರಾಮ ಪಂಚಾಯತ ಈ ರೀತಿ ವಿವಿಧ ಸ್ಥಳಗಳಲ್ಲಿ ವರ್ಷಾಧ್ಯಂತ ಸ್ವಚ್ಚತೆಯನ್ನು ಕೈಗೊಳ್ಳಲು ಕರೆ ನೀಡಿದರು.
ಸಹಕಾರ ಸಂಘಗಳ ಉಪನಿಬಂಧಕಿಯರಾದ ಶ್ರೀಮತಿ ಎಸ್. ಎಸ್ ಕಬಾಡೆ ಮಾತನಾಡಿ ಸಹಕಾರದಿಂದ ಸ್ವಚ್ಚತಾ ಅಭಿಯಾನ ಜೂನ್ ತಿಂಗಳಿನಲ್ಲಿ ಪ್ರಾರಂಭಗೊAಡು ಏಕ್ ಪೇಡ ಮಾ ಕಿ ನಾಮಸೇ ಹೆಸರಿನಲ್ಲಿ ಸಸಿ ನೆಡುವ ಕಾರ್ಯಕ್ರಮ ಕೂಡಾ ಜರುಗಿಸಲಾಗಿದೆ. ಅದೇ ರೀತಿ ಸ್ವಚ್ಛತಾ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿನ ಎಲ್ಲಾ ಸಹಕಾರ ಸಂಘ/ಬ್ಯಾAಕುಗಳ ಆವರಣಗಳನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ಗದಗ ಜಿಲ್ಲಾ ಸಹಕಾರ ಯೂನಿಯನ್‌ದ ಅಧ್ಯಕ್ಷರಾದ ಸಿ. ಎಂ. ಪಾಟೀಲ ವಹಿಸಿ ಮಾತನಾಡಿ ದೇಶ, ರಾಜ್ಯ, ಜಿಲ್ಲೆ, ತಾಲೂಕು ಹಾಗೂ ನಮ್ಮ ಹಳ್ಳಿಗಳಿಂದ ಸ್ವಚ್ಚತೆ ಪ್ರಾರಂಭವಾಗಿದೆ. ಸ್ವಚ್ಚತೆ ಮತ್ತು ನೈರ್ಮಲ್ಯ ಬಹಳ ಪ್ರಮುಖ ನಮ್ಮ ಮನೆಯನ್ನು ಹೇಗೆ ನಾವು ಸ್ವಚ್ಚವಾಗಿ ಇಟ್ಟುಕೊಳ್ಳುತ್ತೇವೆಯೋ ಹಾಗೇ ನಮ್ಮ ಸಮಾಜ ಹಾಗೂ ಗ್ರಾಮವನ್ನು ಸ್ವಚ್ಚವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು ಸ್ವಚ್ಛತಾ ಹಿ ಸೇವಾ-2025 ಹಾಗೂ ಸ್ವಚ್ಛತಾ ಮೇ ಸಹಕಾರ ಪ್ರಯುಕ್ತ ಗದಗ ಜಿಲ್ಲೆಯಲ್ಲಿ ಮಹಾಮಂಡಳದ ನಿರ್ದೇಶನ ಹಾಗೂ ಮಾರ್ಗದರ್ಶನದಂತೆ ಜೂನ್ ತಿಂಗಳಿನಲ್ಲಿ ಸಹಕಾರದಿಂದ ಸ್ವಚ್ಚತಾ ಅಭಿಯಾನ ಹಾಗೂ ಏಕ್ ಪೇಡ ಮಾ ಕಿ ನಾಮಸೇ ಹೆಸರಿನಲ್ಲಿ ಸಸಿ ನೆಡುವ ಕಾರ್ಯಕ್ರಮ ಜರುಗಿಸಲಾಗಿದೆ, ಅದೇ ರೀತಿ ಕೇಂದ್ರ ಸರ್ಕಾರದ ನಿರ್ದೇಶನದಂತೆ ಇಂದು “ಏಕ್ ದಿನ್ ಏಕ್ ಘಂಟಾ ಏಕ್ ಸಾಥ್” ಶ್ರಮದಾನ ಅಭಿಯಾನ ಜರುಗಿಸಲಾಗಿದೆ ಎಂದು ಹೇಳಿದರು.
ಗದಗ ಜಿಲ್ಲಾ ಸಹಕಾರ ಯೂನಿಯನ್ನಿನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಚಂದ್ರಶೇಖರ ಎಸ್. ಕರಿಯಪ್ಪನವರ ನಿರೂಪಿಸಿ ಸ್ವಾಗತಿಸಿದರು. ಮಹಿಳಾ ಸಹಕಾರ ಶಿಕ್ಷಕಿ ಶ್ರೀಮತಿ ರಶೀದಾಬಾನು.ಸಿ.ಯಲಿಗಾರ ವಂದಿಸಿದರು.
ಗದಗ ಜಿಲ್ಲಾ ಸಹಕಾರ ಯೂನಿಯನ್‌ದ ನಿರ್ದೇಶಕ ಎಸ್ ಕೆ ಕುರಡಗಿ ಸಹಕಾರ ಸಂಘಗಳ ಸಹಾಯಕ ನಿಬಂಧಿಯ ಶ್ರೀಮತಿ ಪುಷ್ಪಾ ಕಡಿವಾಳ ಗದಗ ಸಹಕಾರ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಮತಿ ಶಾಂತಾ ಎಚ್.ಎಂ. ಕೆ.ಸಿ.ಸಿ. ಬ್ಯಾಂಕ್ ಲಿ ಪ್ರಭಾರ ಜಿಲ್ಲಾ ನಿಯಂತ್ರಣಾಧಿಕಾರಿಗಳಾದ ಎಸ್.ವ್ಹಿ.ಚಳಗೇರಿ ಮರ್ಚಂಟ್ಸ್ ಲಿಬರಲ್ ಕೋ-ಆಪ್ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರಾದ ರಾಜು ಕೋಟಿ ಮರ್ಚಂಟ್ಸ್ ಅರ್ಬನ್ ಕೋ-ಆಪ್ ಬ್ಯಾಂಕ್ ಲಿ ಗದಗ ದಿ ಮರ್ಚಂಟ ಅರ್ಬನ್ ಕೋ-ಆಪ್ ಬ್ಯಾಂಕ್ ಲಿ ಗದಗ ಇದರ ವ್ಯವಸ್ಥಾಪಕ ನಿರ್ದೇಶಕರಾದ ಬಸವರಾಜ ನಾಯಕವಾಡಿ ಹಾಗೂ ಬ್ಯಾಂಕಿನ ಸಿಬ್ಬಂದಿಗಳು, ಸಹಕಾರ ಇಲಾಖೆಯ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.