ಜಿಲ್ಲೆ

ಸಹಕಾರದಿಂದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ

ಜಿಲ್ಲೆಯ ಸಹಕಾರ ಸಂಗಳ ವತಿಯಿಂದ ಗದಗ ಕೆಸಿಸಿ ಬ್ಯಾಂಕ್​ ಆವರಣದಲ್ಲಿ ಅಂತರಾಷ್ಟ್ರೀಯ ಸಹಕಾರ ವರ್ಷಾಚರಣೆ ಅಂಗವಾಗಿ ಶುಕ್ರವಾರ ಸಹಕಾರದಿಂದ ಸ್ವಚ್ಚತಾ ಅಭಿಯಾನ ಕಾರ್ಯಕ್ರಮ ಜರುಗಿತು.

ಧಾರವಾಡ ಕೆಸಿಸಿ ಬ್ಯಾಂಕ್​ ನಿರ್ದೇಶಕ ಎಂ. ಎಫ್​. ಕಲಗುಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾರತ ಸರ್ಕಾರದ ಮಹತ್ವಾಕಾಂಯ ಯೋಜನೆಗಳಲ್ಲಿ ಸ್ವಚ್ಚ ಭಾರತ ಅಭಿಯಾನವು ಒಂದಾಗಿದೆ. ಸಹಕಾರ ಸಂಸ್ಥೆಗಳು ಉತ್ತಮ ಜಗತ್ತನ್ನು ನಿಮಿರ್ಸಬಲ್ಲವು. ಆದ್ದರಿಂದ ಸಹಕಾರದಿಂದ ಸ್ವಚ್ಚತೆ ಅಭಿಯಾನ ಕಾರ್ಯಕ್ರಮವನ್ನು ಇಂದು ಆಯೋಜಿಸಲಾಗಿದೆ, ಜಿಲ್ಲೆಯಲ್ಲಿರುವ ಎಲ್ಲಾ ಸಹಕಾರ ಸಂಗಳು ತಮ್ಮ ಸಂಸ್ಥೆಗಳು ಹಾಗೂ ಸರ್ಕಾರಿ ರಸ್ತೆ, ಆಟದ ಮೈದಾನ, ಉದ್ಯಾನವನ ಹಾಗೂ ಗ್ರಾಮ ಪಂಚಾಯತ ವಿವಿಧ ಸ್ಥಳಗಳಲ್ಲಿ ವರ್ಷಾದ್ಯಂತ ಸ್ವಚ್ಚತೆಯನ್ನು ಕೈಗೊಂಡು ಸುಂದರ ದೇಶ ನಿಮಿರ್ಸಲು ಶ್ರಮೀಸಬೇಕು ಎಂದರು.

ಜಿಲ್ಲಾ ಸಹಕಾರ ಸಂದ ಅಧ್ಯಕ್ಷ ಸಿ. ಎಂ. ಪಾಟೀಲ ಮಾತನಾಡಿ, ನಮ್ಮ ಹಳ್ಳಿಗಳಿಂದ ಸ್ವಚ್ಚತೆ ಪ್ರಾರಂಭವಾಗಬೇಕು. ಸ್ವಚ್ಚತೆ ಮತ್ತು ನೈರ್ಮಲ್ಯ ಬಹಳ ಪ್ರಮುಖ. ನಮ್ಮ ಮನೆಯನ್ನು ಹೇಗೆ ನಾವು ಸ್ವಚ್ಚವಾಗಿ ಇಟ್ಟುಕೊಳ್ಳುತ್ತೆವೆ ಹಾಗೆಯೇ ನಮ್ಮ ಸಮಾಜ ಹಾಗೂ ಗ್ರಾಮವನ್ನು ಸ್ವಚ್ಚವಾಗಿಟ್ಟುಕೊಳ್ಳುವುದು ನಮ್ಮ ಹೊಣೆಗಾರಿಕೆ. ಜಿಲ್ಲೆಯಲ್ಲಿ ಸ್ವಚ್ಚತಾ ಅಭಿಯಾನ ಪ್ರಾರಂಭಿಸಲಾಗಿದ್ದು, ಸಹಕಾರಿಗಳು ಈ ಅಭಿಯಾನದಲ್ಲಿ ಭಅಗವಹಿಸಬೇಖು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಭಾರತ ಸ್ಕೌಟ್ಸ್​ ಮತ್ತು ಗೈಡ್ಸ್​ ಜಿಲ್ಲಾ ಮುಖ್ಯಸ್ಥಾರಾದ ಬಸವರಾಜ ಮಲ್ಲಾಪೂರ ವಿಶೇಷ ಉಪನ್ಯಾಸ ನೀಡಿದರು. ಸ್ವಚ್ಚತೆ, ನೈರ್ಮಲ್ಯ, ವಾಯು ಮಾಲಿನ್ಯ, ಜಲ ಮಾಲಿನ್ಯ ಭೂ ಮಾಲಿನ್ಯ, ಉಸಿರಾಡಿಸುವ ಶುದ್ಧ ಗಾಳಿ, ಪರಿಸರ ಕಾಪಾಡುವಲ್ಲಿ ಪ್ರಜೆಗಳ ಪಾತ್ರ, ಸಾಮಾಜಿಕ ಜವಾಬ್ದಾರಿ, ನೈತಿಕ ಮೌಲ್ಯಗಳು, ಆರೋಗ್ಯದ ಕುರಿತು ಮಾಹಿತಿಯನ್ನು ನೀಡಿದರು.

ಎಸ್​. ಕೆ. ಕುರಡಗಿ, ಕೆ. ಎಸ್​. ಚಟ್ಟಿ, ಎಸ್​. ಎಸ್​. ಕಬಾಡೆ, ಪ್ರಶಾಂತ ಮುಧೋಳ, ಕೆ. ಸಿ. ಕೂಸನೂರಮಠ, ಪ್ರಕಾಶ ನವಲಗುಂದ, ಆರ್​. ಎಸ್​. ಕಟ್ಟಿ, ಎಸ್​. ವಿ. ಚಳಗೇರಿ, ಪ್ರಸನ್ನ ಪಟ್ಟೇದ ಇತರರು ಇದ್ದರು.