ಗದಗ ನಗರದ ವಿವಿಧ ವಾರ್ಡಗಳಲ್ಲಿ ಸಚಿವ ಎಚ್​.ಕೆ. ಪಾಟೀಲ ಆನಂದಸ್ವಾಮಿ ಗಡ್ಡದೇವರಮಠ ಪರ ಪ್ರಚಾರ ನಡೆಸಿ ಮಾತನಾಡಿದರು. ಡಿ.ಆರ್​. ಪಾಟೀಲ, ನಾಗಲಿಂಗ ಐಲಿ, ಸುರೇಶ ಕಟ್ಟಿಮನಿ ಹಲವರು ಇದ್ದರು. 
ಜಿಲ್ಲೆ

ಬಡವರಿಗೆ ತಲುಪುವ ಯೋಜನೆಗಳನ್ನು ತಪ್ಪಿಸಲು ಕುತಂತ್ರದ ರಾಜಕಾರಣ: ಎಚ್​.ಕೆ. ಪಾಟೀಲ

ವಿಜಯವಾಣಿ ಸುದ್ದಿಜಾಲ ಗದಗ
ನಗರದ ವಿವಿಧ ವಾರ್ಡ್​ಗಳಲ್ಲಿ ಆನಂದಸ್ವಾಮಿ ಗಡ್ಡದೇವರ ಮಠ ಪರ ಸಚಿವ ಎಚ್​.ಕೆ. ಪಾಟೀಲ ಪ್ರಚಾರ ನಡೆಸಿದರು.
ವಿವಿಧ ವಾರ್ಡ್​ಗಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನೀವೆಲ್ಲರೂ ನಮ್ಮ ಪದ ಹಿತೈಷಿಗಳು. ನಿಮ್ಮ ಒಂದು ಮತ ಕಡಿಮೆಯಾದರೂ ನಮಗೆ ನೋವಾಗುತ್ತದೆ. ನಿಮ್ಮ ಕುಟುಂಬದ ತೊಂದರೆ, ವಾಡಿರ್ನ ತೊಂದರೆ, ಆರೋಗ್ಯ ತೊಂದರೆಗಳು ನಮ್ಮ ತೊಂದರೆ ಇದ್ದಂತೆ. ಆಶ್ರಯ ಕಾಲೋನಿ, ನೇಕಾರ ಕಾಲೋನಿ ನಿರ್ಮಾಣವಾಗಲು ಕೆ.ಎಚ್​. ಪಾಟೀಲ ಹಾಗೂ ಡಿ.ಆರ್​. ಪಾಟೀಲ ಅವರು ಕಾರಣರು. ಚುನಾವಣೆಗೆ ಬಂದಾಗ ನಮ್ಮನ್ನು ಹೊರಗಿಟ್ಟವರಿಗೂ ಈ ಬಾರಿ ತಿಳಿವಳಿಕೆ ಹೇಳಿ, ಮನೆ&ಮನೆಗೆ ಗ್ಯಾರಂಟಿ ಕಾರ್ಡ್​ಗಳನ್ನು ತಲುಪಿಸಿ ಈ ಬಾರಿ ಕಾಂಗ್ರೆಸ್​ ಅಭ್ಯಥಿರ್ಗೆ ರ್ಪೂಣ ಪ್ರಮಾಣದ ಆಶೀರ್ವಾದ ಮಾಡಬೇಕು. ಕನಿಷ್ಠ 1 ಲಕ್ಷ ಮತಗಳ ಅಂತರದಿಂದ ಗೆಲ್ಲಿಸುವಲ್ಲಿ ಶ್ರಮ ವಹಿಸಬೇಕು. ಕೇಂದ್ರದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ 1 ಲ ನೀಡುವುದಾಗಿ ಘೋಷಿಸಲಾಗಿದೆ. ಈ ಕುರಿತು ಗ್ಯಾರಂಟಿ ಕಾರ್ಡ್​ ನೀಡುತ್ತಿದ್ದರೆ, ಗ್ಯಾರಂಟಿ ವಿರುದ್ಧ ಬಿಜೆಪಿ ಮುಖಂಡರು ಬಡವರಿಗೆ ಹಣ ಮುಟ್ಟಬಾರದು ಎನ್ನುವ ಉದ್ದೇಶದಿಂದ ಗ್ಯಾರಂಟಿ ವಿರುದ್ಧ ಕೋರ್ಟ್​ ಮೆಟ್ಡಿಲೇರುತ್ತಿದ್ದಾರೆ. ಆದ್ದರಿಂದ ಬಡವರಿಗೆ ದ್ರೋಹ ಮಾಡುತ್ತಿರುವ ಬಿಜೆಪಿಗೆ ಮತ ನೀಡದೇ ಕಾಂಗ್ರೆಸ್​ ಪದ ಅಭ್ಯಥಿರ್ಗೆ ಅಧಿಕ ಮತಗಳನ್ನು ನೀಡುವ ಮೂಲಕ ಕೇಂದ್ರದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೇರುವಂತೆ ಆಶೀರ್ವದಿಸಬೇಕು ಎಂದು ಹೇಳಿದರು.
ಮಾಜಿ ಶಾಸಕ ಡಿ.ಆರ್​. ಪಾಟೀಲ ಮಾತನಾಡಿ, ಈ ಬಾರಿ ಅಧಿಕ ಮತಗಳನ್ನು ನೀಡುವ ಮೂಲಕ ಕಾಂಗ್ರೆಸ್​ ಆನಂದಸ್ವಾಮಿ ಗಡ್ಡದೇವರಮಠ ಅವರ ಗೆಲುವಿಗೆ ಕಾರಣರಾಗಬೇಕು ಎಂದು ಹೇಳಿದರು.
ನಗರಸಭೆ ಮಾಜಿ ಸದಸ್ಯ ಅಶೋಕ ಬಣ್ಣದ ಮಾತನಾಡಿ, ನರಸಾಪೂರ ಆಶ್ರಯ ಕಾಲೋನಿ ನಿರ್ಮಾಣವಾಗಲು ಕೆ.ಎಚ್​. ಪಾಟೀಲ ಹಾಗೂ ಡಿ.ಆರ್​. ಪಾಟೀಲ ಮೂಲ ಕಾರಣರಾಗಿದ್ದಾರೆ. ಅವರ ಋಣ ತೀರಿಸುವ ಕೆಲಸ ಮಾಡಬೇಕಾಗಿದೆ. ಆಶ್ರಯ ಕಾಲೋನಿಯಲ್ಲಿ ವಿದ್ಯುತ್​, ಕುಡಿಯುವ ನೀರು, ಚರಂಡಿ ಸೇರಿದಂತೆ ಮೂಲಸೌಕರ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಆದ್ದರಿಂದ ಈ ಬಾರಿ ಕಾಂಗ್ರೆಸ್​ ಪಕ್ಕೆ ಅಧಿಕ ಮತಗಳನ್ನು ನೀಡುವ ಮೂಲಕ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.
ಮುಖಂಡರಾದ ಪ್ರಭು ಬುರಬುರೆ, ನಾಗಲಿಂಗ ಐಲಿ, ಸುರೇಶ ಕಟ್ಟಿಮನಿ, ವೀರಪ್ಪ ನಾಯ್ಕರ, ಬಾಬು ನರಸಾಪೂರ, ಸಂಗಮೇಶ ಹಾದಿಮನಿ, ಬಾಲರಾಜ ಅರಬರ ಸೇರಿ ಹಲವರು ಇದ್ದರು.