ಜಿಲ್ಲೆ

ಕಾಂಗ್ರೆಸ್​ ಯುವ ಟಕ ಸದಸ್ಯರ ಪದಗ್ರಹಣ ಸಮಾರಂಭ ಜು. 12ಕ್ಕೆ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ

ನಗರದ ವಿವೇಕಾನಂದ ಸಭಾಂಗಣದಲ್ಲಿ ಜು. 12 ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾ ಕಾಂಗ್ರೆಸ್​ ಯುವ ಘಟಕದ ವತಿಯಿಂದ ಯುವಧ್ವನಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಗದಗ ಜಿಲ್ಲಾ ಯುವ ಟಕದ ಸದಸ್ಯರು, ಅಧ್ಯಕ್ಷರ ಪದಗ್ರಹಣ ನಡೆಯಲಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್​ ಟಕದ ಅಧ್ಯಕ್ಷ ಕೆ. ಎಚ್​. ಪಾಟೀಲ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಯುವಟಕಕ್ಕೆ ಆಯ್ಕೆಯಾದ ಎಲ್ಲ ಸದಸ್ಯರ ಪದಗ್ರಹಣ ಕಾರ್ಯಕ್ರಮವೇ ಯುವಧ್ವನಿ ಆಗಿದೆ. ಸಭೆಯಲ್ಲಿ ಸಚಿವ ಪ್ರಿಯಾಂಕ ರ್ಖಗೆ, ಯುವ ರಾಜ್ಯಾಧ್ಯಕ್ಷ ಮಂಜುನಾಥ ಗೌಡ, ದೀಪಿಕಾ ರೆಡ್ಡಿ, ಶಾಸಕರಾದ ಜಿ.ಎಸ್​. ಪಾಟೀಲ, ಎಚ್​.ಕೆ. ಪಾಟೀಲ, ಸಲೀಂ ಅಹಮ್ಮದ, ಸುಜಾತಾ ದೊಡ್ಡಮನಿ, ರಾಮಕೃಷ್ಣ ದೊಡ್ಡಮನಿ ಸೇರಿದಂತೆ ಎಲ್ಲ ಸದಸ್ಯರು ಭಾಗವಹಿಸಲಿದ್ದಾರೆ. ಅಂದಾಜು 5000ಕ್ಕೂ ಅಧಿಕ ಜನರು ಸೇರುವ ನಿರೀೆ ಇದೆ ಎಂದರು.

ನಿಕಟಪೂರ್ವ ಅಧ್ಯಕ್ಷ ಅಶೋಕ ಮಂದಾಲಿ ಅವರು ಈ ಮೊದಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಈ ಹಿಂದೆ ಹಲವು ಜಿಲ್ಲೆಗಳಲ್ಲಿ ಕಾರ್ಯಕ್ರಮ ಮಾಡಿದ ಅನುಭವ ಅಶೋಕ ಮಂದಾಲಿ ಅವರಿಗಿದೆ. ಅವರ ಅನುಭವವನ್ನು ಯುವ ಘಟಕ ಪಡೆಯಲಿದೆ ಎಂದರು.

ಸಂಘಟನೆಯ ವಿಷಯದಲ್ಲಿ ಟಕದ ಚಟುವಟಿಕೆಯಿಂದ ಕೂಡಿದೆ. ಸಾಮಾಜಿ ಬದ್ದತೆಯೊಂದಿಗೆ ಸೇವೆ ಮಾಡಿದ್ದಲ್ಲಿ ಯುವ ಟಕ ಬಲಿಷ್ಠ ಆಗಲಿದೆ. ಸೇವಾ ಸಂಸ್ಥೆಗಳ ಮೂಲಕ ಜನರ ಮನೆ ಮಾತಾಗಿರುವ ಯುವ ಕಾಂಗ್ರೆಸ್​ ಟಕದ ಕಾರ್ಯ ನಿರಂತರವಾಘಿ ಜರುಗಲಿದೆ ಎಂದು ಕೆ. ಎಚ್​. ಪಾಟೀಲ ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಪದಗ್ರಹಣ ಬಿತ್ತಿಪತ್ರ ಬಿಡುಗಡೆ ಮಾಡಲಾಯಿತು.

ಅಶೋಕ ಮಂದಾಲಿ, ಅಕ್ಷಯ ಪಾಟೀಲ, ರಾವೇಂದ್ರ ದೊಡ್ಡಮನಿ, ಅನ್ವರ ನದಾಫ್​, ಮೊಹಮ್ಮ ಬೆಟಗೇರಿ ಇತರರು ಇದ್ದರು