ವಿಜಯವಾಣಿ ಸುದ್ದಿಜಾಲ ಗದಗ
ಜಿಲ್ಲಾ ಸಹಕಾರ ಇಲಾಖೆ ಮತ್ತು ತೋಂಟದಾರ್ಯ ವಿದ್ಯಾಪಿಠದ ಬಸವೇಶ್ವರ ಮಹಾವಿದ್ಯಾಲಯ ಸಹಯೋಗದಲ್ಲಿ ಬಸವೇಶ್ವರ ಮಹಾವಿದ್ಯಾಲಯದ ಸಭಾಭವನದಲ್ಲಿ ಶನಿವಾರ ಆಯ್ದ ಪ್ರೌಢಶಾಲೆ ವಿದ್ಯಾಥಿರ್ಗಳಿಗೆ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ, ಚರ್ಚಾ ಸ್ಪರ್ಧೆ ಮತ್ತು ಪ್ರಮಾಣಪತ್ರ ವಿತರಣೆ ಕಾರ್ಯಕ್ರಮ ಜರುಗಿತು.
ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಂ. ಎ. ರಡ್ಡೇರ ಉದ್ಘಾಟಿಸಿ ಮಾತನಾಡಿ, ತಾಲೂಕಿನ ಕಣಗಿನಹಾಳ ಗ್ರಾಮದಲ್ಲಿ ಜನಿಸಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂ ಇಡೀ ಏಷ್ಯಾ ಖಂಡದಲ್ಲಿ ಪ್ರಥಮ ಸಹಕಾರ ಸಂ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಮಕ್ಕಳು, ಯುವಕರು ಸಹಕಾರ ೇತ್ರದ ಬಗ್ಗೆ ಸರಿಯಾದ ತಿಳುವಳಿಕೆ ಪಡೆದು ಮನನ ಮಾಡಿಕೊಂಡು ೇತ್ರದ ಪ್ರಗತಿಯಲ್ಲಿ ಭಾಗವಹಿಸಬೇಕು ಎಂದರು.
ತೋಂಟದಾರ್ಯ ಶಿಣ ಸಂಸ್ಥೆಗಳ ನೌಕರರ ಪತ್ತಿನ ಸಹಕಾರ ಸಂಗಳ ಅಧ್ಯ ಎಸ್. ಎಸ್. ಪಟ್ಟಣಶೆಟ್ಟಿ ಮಾತನಾಡಿ, ಸಹಕಾರ ೇತ್ರದ ಅಭಿವೃದ್ಧಿಗೆ ಯುವಕರ ಪಾತ್ರ ಬಹಳ ಮುಖ್ಯ. ಅಭಿವೃದ್ಧಿಯ ಮನೋಭಾವದಿಂದ ಕಾಯೊರ್ನ್ಮೂಕರಾಗಬೇಕು ಎಂದರು.
ಜಿಲ್ಲಾ ಸಹಕಾರ ಯೂನಿಯನ್ ಅಧ್ಯ ಸಿ. ಎಂ. ಪಾಟೀಲ ಮಾತನಾಡಿ, ವಿಶೇಷವಾಗಿ ಕೇಂದ್ರ ಸರ್ಕಾರವು ಸಹಕಾರ ಸಚಿವಾಲಯ ಪ್ರಾರಂಭ ಮಾಡುವುದರ ಜೊತೆಗೆ ವಿಶಿಷ್ಟ ಯೋಜನೆಗಳನ್ನು ಜಾರಿ ಆಗಿದೆ. ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಿ ಈ ೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸ್ಪರ್ಧೆ ವಿಜೇತರಿಗೆ ಪ್ರಮಾಣಪತ್ರ ವಿತರಿಸಲಾಯಿತು. ಎಸ್. ಎಸ್. ಕಬಾಡೆ, ಎಂ. ಎಂ. ಬುರಡಿ, ಪ್ರಶಾಂತ ಮುಧೋಳ, ಎಂ. ಸಿ. ಉಪ್ಪಿನ, ಎಂ. ಬಿ. ಮಡಿವಾಳರ, ಡಿ. ಆರ್. ವೆಂಕಟರಾಮ ಇತರರು ಇದ್ದರು.