ವಿಜಯವಾಣಿ ಸುದ್ದಿಜಾಲ ಗದಗ
ಮಕ್ಕಳ ಮನಸ್ಸುಗಳಲ್ಲಿ ಮಾಹಿತಿಗಳನ್ನು ತುಂಬುವುದು ಮಾತ್ರ ಶಿಣದ ಗುರಿಯಲ್ಲ. ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯೇ ಶಿಣದ ಉದ್ದೇಶವಾಗಿದೆ. ಮಕ್ಕಳು ವೈಜ್ಞಾನಿಕ ಹಾಗೂ ವೈಚಾರಿಕ ಭಾವನೆಗಳೊಂದಿಗೆ ಶೈಣಿಕ ಅಭಿವೃದ್ಧಿ ಕಾಣಬೇಕು ಎಂದು ಗದಗ ಜಯೇಂಟ್ಸ್ ಗ್ರ್ಸು್ ಆ್ ಸಖಿ ಸಹೇಲಿ ಸಂದ ಅಧ್ಯೆ ಸುಮಾ ಪಾಟೀಲ ಹೇಳಿದರು.
ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ನಂ.11 ರಲ್ಲಿ ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ಶಾಲೆಗೆ ಕಂಪ್ಯೂಟರ್ ವಿತರಿಸಿ ಮಾತನಾಡಿದರು.
ಮಕ್ಕಳಿಗೆ ಇಂದಿನ ದಿನಗಳಲ್ಲಿ ಕಂಪ್ಯೂಟರ್ ಜ್ಞಾನವು ಅತೀ ಅವಶ್ಯವಾಗಿದೆ. ಸರ್ಕಾರಿ ಶಾಲೆಯ ಮಕ್ಕಳಿಗೆ ತಾಂತ್ರಿಕ ಹಾಗೂ ವೈಜ್ಞಾನಿಕ ಮನೋಭಾವನೆ ಕುರಿತಾಗಿ ತಿಳುವಳಿಕೆ ಅವಶ್ಯವಾಗಿದೆ. ಮುಂದೆ ಭವಿಷ್ಯದಲ್ಲಿ ವೈಜ್ಞಾನಿಕತೆಯೊಂದಿಗೆ ಬೆಳೆಯಬೇಕು. ಆ ಉದ್ದೇಶದಿಂದ ಕಲಿಕೆಯಲ್ಲಿ ನಾವಿಣ್ಯತೆ ಮೂಡಬೇಕು ಎಂದು ಕಂಪ್ಯೂಟರ್ ವಿತರಿಸಲಾಗಿದೆ ಎಂದರು.
ಸುಗ್ಗಲಾ ಯಳಮಲಿ ಮಾತನಾಡಿ ಮಕ್ಕಳ ಶೈಣಿಕ ಅಭಿವೃದ್ಧಿಯಲ್ಲಿ ವಿಜ್ಞಾನದ ಅವಿಷ್ಕಾರಗಳನ್ನು ಹೊಸ ಸಂಶೋಧನಾ ಭಾವಗಳನ್ನು ತುಂಬುವ ಅಗತ್ಯತೆ ಇದೆ. ತಾಂತ್ರಿಕತೆಯ ಮೂಲಕ ಮಕ್ಕಳು ಶೈಣಿಕ ವಿಷಯಗಳನ್ನು ಕುತೂಹಲಕಾರಿ ಹಾಗೂ ಸಮಸ್ಯಾತ್ಮಕಗಳನ್ನು ಕಂಪ್ಯೂಟರ್ ಇಂಟರ್ನೆಟ್ ಮೂಲಕ ಉತ್ತರಗಳನ್ನು ಕಂಡುಕೊಳ್ಳಬಹುದು ಎಂದರು.
ಎಂ. ಆರ್. ಕರಮಡಿ, ಭಾರತಿ ಕುಲಕಣಿರ್, ಮಂಜುಳಾ ಕೊಳ್ಳಿ, ಅಶ್ವಿನಿ ಮಾದಗುಂಡಿ, ಶಶಿಕಲಾ ಮಾಲಿಪಾಟೀಲ, ರೇಖಾ ರೊಟ್ಟಿ, ಶಾಂತಾ ತುಪ್ಪದ ಇತರರು ಇದ್ದರು.