oplus_2 
ಜಿಲ್ಲೆ

ವಾಣಿಜ್ಯೋದ್ಯಮ ಸಂಸ್ಥೆ ಸುವರ್ಣ ಮಹೋತ್ಸವ ಕಾರ್ಯಕ್ರಮ

Gadag - Shivanand Hiremath
Gadag:
ಉದ್ದಿಮೆದಾರರಿಗೆ ಉಪಯೋಗ ಆಗುವ ಎಲ್ಲ ಕಾರ್ಯಗಳನ್ನು ಗದಗ ವಾಣಿಜ್ಯೋದ್ಯಮ ಸಂಸ್ಥೆ ಮಾಡುತ್ತ ಬಂದಿದೆ. 50 ವರ್ಷ ಪೂರೈಸಿದೆ. ಆಧುನಿಕ ವ್ಯವಸ್ಥೆಯಲ್ಲಿ ಬಹಳಷ್ಟು ಬದಲಾಣೆ ಕಾಣುತ್ತಿದ್ದೇವೆ. ಇಂತಹ ವ್ಯವಸ್ಥೆಯಲ್ಲಿ ಸಂಸ್ಥೆ 50 ವರ್ಷ ನಿರಂತರ ಸೇವೆ ನೀಡಿದ್ದು ಅಭಿನಂದನಾರ್ಹ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ನಗರದ ಕೆ.ಎಚ್. ಪಾಟೀಲ ಸಭಾಂಗಣದಲ್ಲಿ ಗದಗ ವಾಣಿಜ್ಯೋದ್ಯಮ ಸಂಸ್ಥೆಯ 50 ವರ್ಷದ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕ ಚಾಲನೆ ನೀಡಿ ಮಾತನಾಡಿ, ಈಗ ಕೇವಲ ಬೆಂಗಳೂರು ಕೇಂದ್ರಿತವಾಗಿ ವಾಣಿಜ್ಯೋದ್ಯಮ ಬೆಳೆಯುತ್ತಿದೆ. ಬೆಂಗಳೂರು ಆಚೆಗೆ(ಬಿಯಾಂಡ್ ಬೆಂಗಳೂರು) ವಾಣಿಜ್ಯೋದ್ಯಮ ಬೆಳೆಸಲು ಸರ್ಕಾರ ತನ್ನ ಪ್ರಯತ್ನ ಮುಂದುವರಿಸಿದೆ. 2 ಎಕರೆ ಒಳಗಡೆ ಭೂಮಿಯಲ್ಲಿ ಕೈಗಾರಿಕಾ ಆರಂಭಿಸಲು ಕೈಗಾರಿಕಾ ನೀತಿಯನ್ನು ರಾಜ್ಯ ಸರ್ಕಾರ ಜಾರಿ ತಂದಿದೆ. ಉದ್ಯಮಿಗಳು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ನಗರಕ್ಕೆ ಎಚ್.ಕೆ. ಪಾಟೀಲರು ವ್ಯಾಪಾರ, ಅಭಿವೃದ್ಧಿ, ಸಾಂಸ್ಕೃತಿಕ ಬೆಳವಣಿಗೆಗೆ ಉತ್ತಮ ಪ್ರಾಧಿಕಾರ ತಂದಿದ್ದಾರೆ. ಅದಕ್ಕಾಗಿ ಪಿಪಿಪಿ ಮಾಡಲ್ ನಲ್ಲಿ ನೀಲ ನಕ್ಷೆ ಸಿದ್ದಪಡಿಸಿದ್ದಾರೆ. ಸರ್ಕಾರದಿಂದ ವಕಾರು ಸಾಲು ಅಭಿವೃದ್ಧಿ ಪ್ರಾಧಿಕಾರಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಉದ್ಯಮಿಗಳಿಗೆ ಈ ಪ್ರಾಧಿಕಾರದಿಂದ ಅನುಕೂಲ ಆಗುವುದಷ್ಟೇ ಅಲ್ಲದೇ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿ ಆಗಲಿದೆ ಎಂದು ಜಿ.ಎಸ್. ಪಾಟೀಲ ಹೇಳಿದರು.
ಹುಬ್ಬಳ್ಳಿ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಎಸ್.ಪಿ. ಸಂಶಿಮಠ ಮಾತನಾಡಿ, ಗದಗ ಅಧ್ಯಕ್ಷ ತಾತನಗೌಡ ಪಾಟೀಲ ಕಾರ್ಯಪ್ರವೃತ್ತಿ ಎಲ್ಲರೂ ಅಭಿಮಾನ ಪಡುವ ಕೆಲಸ ಎಂದರು.
ಮಾಜಿ ಅಧ್ಯಕ್ಷ ಚಂದ್ರು ಬಾಳಿಹಳ್ಳಿಮಠ ಮಾತನಾಡಿ, ನರಸಾಪುರ ಕೈಗಾರಿಕಾ ವಲಯದ ನಿವೇಶನಗಳನ್ನು ಮೂಲ ದರಕ್ಕೆ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿದರು.
ಕೊಪ್ಪಳ ಗವಿಸಿದ್ದೇಶ್ವರ ಶ್ರೀಗಳಿಗೆ ವಾಣಿಜ್ಯೋದ್ಯಮ ಸಂಸ್ಥೆಯಿಂದ ಗೌರವ ಸಮರ್ಪಿಸಲಾಯಿತು. ಕಾರ್ಯಕ್ರಮದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು
ಎಸ್.ಪಿ. ಸಂಶಿಮಠ, ಸೋಮನಾಥ ಜಾಲಿ, ಆನಂದ ಎಲ್. ಪೋತ್ನಿಸ್, ಶರಣಬಸಪ್ಪ ಗುಡಿಮನಿ, ವಿಜಯಕುಮಾರ ಎಸ್. ಮಾಟಲದಿನ್ನಿ, ಶಿವಯ್ಯ ಆರ್. ನಾಲತ್ವಾಡಮಠ, ಅಶೋಕಗೌಡ ಕೆ. ಪಾಟೀಲ, ರಾಘವೇಂದ್ರ ಎಸ್. ಕಾಲವಾಡ, ಸಂಜಯ ಸಿ. ಬಾಗಮಾರ, ನಂದಾ ಸಿ. ಬಾಳಿಹಳ್ಳಿಮಠ, ದೀಪಾ ಎಸ್. ಗದಗ, ಸುಷ್ಮಾ ಎಸ್. ಜಾಲಿ, ಸುಜಾತ ಎಸ್. ಗುಡಿಮನಿ, ಜ್ಯೋತಿ ಆರ್. ದಾನಪ್ಪಗೌಡ್ರ, ಲಲಿತಾ ಜಿ. ತಡಸದ, ಸುಧಾ ಸಿ. ಹುಣಸಿಕಟ್ಟಿ, ಪೂರ್ಣಿಮಾ ಕೆ. ಆಟದ ಸೇರಿದಂತೆ ಹಲವರು ಉಪಸ್ಥಿತರಿದ್ದರು.