Gadag: ಎಲ್ಲೆಲ್ಲೂ ಹೊಸ ವರ್ಷಾಚರಣೆಯ ರಿಂಗಣ. ೨೦೨೫ನ್ನು ಸ್ವಾಗತಿಸಲು ತರಹೇವಾರಿ ಕೇಕ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಕೆಜೆಯಿಂದ ಗ್ರಾಹಕರ ಬೇಡಿಕೆ ತನಕ ಕೇಕ್‌ಗಳು ಸಿದ್ಧವಾಗಿದೆ. ಹಾಗೆ ತಮ್ಮ ಇಷ್ಟವಾದ ಕೇಕ್ ಬುಕ್ಕ್ ಮಾಡಲಾಗುತ್ತದೆ. ಹೊಸ ವರ್ಷಾಚರಣೆ ಸಂಭ್ರಮದಿAದ ಆಚರಣೆ ಮಾಡಲು ಜಿಲ್ಲೆಯ ಜನರು ಮುಂದಾಗಿದ್ದಾರೆ.
೨೦೨೪ಕ್ಕೆ ಗುಡ್ ಬೈ ಹೇಳುವ ಜತೆಗೆ ಕಹಿ ನೆನಪುಗಳನ್ನು ಮರೆತು ಸಿಹಿ ಕನಸುಗಳೊಂದಿಗೆ ಹೊಸ ವರ್ಷಕ್ಕೆ ಕಾಲಿಡಲು ಜನ ಸಿದ್ಧವಾಗಿದ್ದಾರೆ. ಅವಳಿ ನಗರದ ವಿವಿಧ ಕಡೆ ಕೇಕ್ ಖರೀದಿಗೆ ಯುವ ಸಮೂಹ ಮುಗಿಬಿದ್ದಿವೆ. ಜನರು ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡಲು ಮುಂದಾಗುತ್ತಿದ್ದಾರೆ.
ಹೊಸ ವರ್ಷಾಚರಣೆ ಹಿನ್ನೆಲೆ ಜಿಲ್ಲೆಯ ನಗರ, ಪಟ್ಟಣಗಳ ಬೇಕರಿಗಳಲ್ಲಿ ಕೇಕ್ ಮಾರಾಟ ಭರಾಟೆ ಜೋರಾಗಿತ್ತು. ಕುಟುಂಬ ಸದಸ್ಯರು, ಸ್ನೇಹಿತರು ಯೋಜನೆ ರೂಪಿಸಿದಂತೆ ಬೇಕರಿಗಳಿಗೆ ಮೊದಲೇ ವಿವಿಧ ಬಗೆಯ ಕೇಕ್‌ಗಳ ಸಿದ್ಧಪಡಿಸಲು ಬೇಡಿಕೆ ಸಲ್ಲಿಸಿದ್ದರು. ಅಂತೆಯೇ ಸೋಮವಾರ ಮಧ್ಯಾಹ್ನದಿಂದಲೇ ಕೇಕ್ ಖರೀದಿಗೆ ಮುಗಿಬಿದ್ದಿದ್ದರು. ಬೇಕರಿಗಳು ಹೊಸ ವರ್ಷಾಚರಣೆಗೆ ಸಿಂಗಾರಗೊAಡಿದ್ದವು. ಬಣ್ಣ ಬಣ್ಣದ ಬಲೂನು, ವಿದ್ಯುತ್ ದೀಪಗಳಿಂದ ಅಲಂಕಾರಗೊAಡು ಗ್ರಾಹಕರನ್ನು ಕೈಬಿಸಿ ಕರೆಯುತ್ತಿವೆ. ಎಗ್‌ಲೆಸ್ ಕೇಕ್, ಪೈನಾಪಲ್, ಸ್ಟ್ರಾಬೆರಿ ಪೇಸ್ಟ್ರೀ, ಕಪ್ ಕೇಕ್‌ಗಳಿಗೂ ಈ ಬಾರಿ ಬೇಡಿಕೆ ಇದೆ. ಕೆಲವರು ಬ್ಲ್ಯಾಕ್ ಫಾರೆಸ್ಟ್, ಐರಿಶ್ ಕಾಫಿಯಂತಹ ದುಬಾರಿ ಕೇಕ್ ಖರೀದಿಸುತ್ತಿದ್ದಾರೆ. ಪ್ರತಿ ಕೆಜಿಗೆ ಕೇಕ್‌ಗೆ ೩೫೦ ರಿಂದ ೫೦೦೦ ದರವಿದೆ. ಕೇಕ್ ಮಾತ್ರವಲ್ಲದೆ, ಹೊಸ ವರ್ಷ ಶುಭಾಶಯ ಕೋರುವ ಸ್ಟಿಕರ್, ಗ್ರಿಟಿಂಗ್ಸ್ಗಳ ಮಾರಾಟವೂ ನಡೆದಿದೆ. ಪ್ರತಿ ವಷÀðದಂತೆ ಈ ಬಾರಿಯೂ ಹೊಸ ವಷÁðಚರಣೆ ವೇಳೆ ಕೇಕ್ ವ್ಯಾಪಾರ ಭರ್ಜರಿಯಾಗಿದೆ ಎನ್ನುತ್ತಾರೆ ಬೇಕರಿ ಮಾಲೀಕರು.
ನಗರದ ಪ್ರದೇಶಕ್ಕೆ ಸೀಮಿತವಾಗಿದ್ದ ಹೊಸ ವಷÁðಚರಣೆ ಸಂಭ್ರಮ ಗ್ರಾಮೀಣ ಭಾಗಕ್ಕೂ ವ್ಯಾಪಿಸಿದೆ. ಗ್ರಾಮೀಣ ಭಾಗದ ಯುವಕರು ಹೊಲ, ಗದ್ದೆಗಳಲ್ಲಿ ಸಂಭ್ರಮಾಚರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ರಾತ್ರಿ ಗ್ರಾಮೀಣ ಭಾಗದ ಯುವಕರು ಬಸ್ ನಿಲ್ದಾಣದ ಹಾಗೂ ರಸ್ತೆ, ಮನೆಯ ಗೋಡೆ ಮೇಲೆ ಹೊಸ ವರ್ಷದ ಶುಭಾಷಯ ಕೋರಿವ ಚಿತ್ರ ಬಿಡಿಸುವ ಬಗ್ಗೆ ಚಿಂತನೆ ನಡೆದಿದೆ.
ಜಿಲ್ಲೆಯ ಶಾಲಾ ಮತ್ತು ಕಾಲೇಜ್‌ಗಳಲ್ಲಿ ಹೊಸ ವರ್ಷಚಾರಣೆ ಅಂಗವಾಗಿ ಕೇಕ್ ಕತ್ತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಶಾಲಾ ಮಕ್ಕಳು ಶಾಲಾ ಆವಣರದಲ್ಲೇ ಹೊಸ ವರ್ಷಾಚಾರಣೆ ಮಾಡಲು ಸಿದ್ಧತೆ ಮಾಡಿದ್ದಾರೆ. ಶಿಕ್ಷಕರು ಹಾಗೂ ಮಕ್ಕಳು ಸೇರಿಕೊಂಡು ಹೊಸ ವರ್ಷಚಾರಣೆ ಸಂಭ್ರಮದಿAದ ಆಚರಣೆ ಮಾಡಲು ಸಕಲ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದ್ದಾರೆ.
ಕಳೆದ ಸುಮಾರು ವರ್ಷಗಳಿಂದ ಸಾಮಾಜಿಕ ಜಾಲಾತಾಣವಾದ ವ್ಯಾಟ್ಸಪ್ , ಪೇಸ್ ಬುಕ್, ಟ್ವೀಟರ್ ಸೇರಿದಂತೆ ಇನ್ನೀತರ ಸೋಸಿಯಲ್ ಮೀಡಿಯಾದ ಮೂಲಕ ವರ್ಷಚಾರಣೆ ಸಂಬAಧಪಟ್ಟ ಹಲವಾರು ಸಂದೇಶ ನೀಡಲಾಗುತ್ತಿದೆ. ತಮ್ಮ ಪ್ರೇಡ್ಸ್ ಸೇರಿಂದತೆ ಇನ್ನಿತರ ಹೊಸ ವರ್ಷದ ಶುಭಾಷಯ ಕೋರುವ ಸಾಂಗ್ಸ್, ಚಿತ್ರಗಳನ್ನು ಹಾಕುತ್ತಾರೆ.
ಹೊಸ ವರ್ಷವನ್ನು ಜಿಲ್ಲೆಯಲ್ಲಿ ಸಂಭ್ರಮದಿAದ ಆಚರಣೆ ಮಾಡಲು ಮುಂದಾಗಿದ್ದಾರೆ. ಜತೆಗೆ ಸಕಲ ರೀತಿಯಲ್ಲಿ ಆಚರಣೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಕೆಲವರು ಮನೆಯಲ್ಲಿ ಹಾಗೂ ಹೋಟಲ್, ಮಾಲ್‌ಗಳನ್ನು ಹೊಸ ವರ್ಷಾಚರಣೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಹಾಗೆ ಕೆಲವು ವಿವಿಧ ಪ್ರದೇಶದಲ್ಲಿ ಹೋಗಿ ಹೊಸ ವರ್ಷಾಚರಣೆ ಮಾಡಲು ಮುಂದಾಗಿದ್ದಾರೆ.