ಗದಗ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯಥಿರ್ ಬೊಮ್ಮಾಯಿ ಅವರನ್ನು ಮಹಿಳೆಯರು ಆರತಿ ಮಾಡಿ ಬರಮಾಡಿಕೊಂಡರು. 
ಜಿಲ್ಲೆ

ಖಜಾನೆ ಖಾಲಿ ಮಾಡಿರುವ ದರಿದ್ರ ಕಾಂಗ್ರೆಸ್​ ಸರ್ಕಾರ: ಬಸವರಾಜ ಬೊಮ್ಮಾಯಿ

ವಿಜಯವಾಣಿ ಸುದ್ದಿಜಾಲ ಗದಗ
ರಾಜ್ಯ ಸರ್ಕಾರದ ಖಜಾನೆ ಸಂರ್ಪೂಣ ಖಾಲಿ ಆಗಿದೆ. ಒಂದು ನಯಾ ಪೈಸೆ ಈ ಸರ್ಕಾರ ಅಭಿವೃದ್ಧಿ ಮಾಡಿಲ್ಲ. ಇದೊಂದು ದರಿದ್ರ ಸರ್ಕಾರ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಗದಗ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯಥಿರ್ ಬಸವರಾಜ ಬೊಮ್ಮಾಯಿ ಹೇಳಿದರು.
ಗದಗ ವಿಧಾನಸಭಾ ಕ್ಷೇತ್ರದ ಕುರ್ತಕೋಟಿ, ಹತಿರ್, ಕಣವಿ, ಹೊಸೂರು ಹಾಗೂ ಸೊರಟೂರು ಗ್ರಾಮಗಳಲ್ಲಿ ಶುಕ್ರವಾರ ಮತಯಾಚನೆ ಮಾಡಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿಗೆ ರಸ್ತೆ, ದ್ವೀಪ ಹಾಕಿಸಲು ಖಜಾನೆ ಹೊಂದಿರದ ಕಾಂಗ್ರೆಸ್​ ಸರ್ಕಾರ. ಕಾಂಗ್ರೆಸ್​ ಶಾಸಕರೇ ಈ ಮಾತನ್ನು ಹೇಳುತ್ತಿದ್ದಾರೆ. ಬರಗಾಲ ಬಂದಿದೆ. ಒಂದು ಬೆಳೆಯೂ ಬಂದಿಲ್ಲ. ರೈತರಿಗೆ ಬರ ಪರಿಹಾರ ನೀಡದೇ ಕೇಂದ್ರ ಸರ್ಕಾರದ ಕಡೆ ಬೆರಳು ಮಾಡಿ ತೋರಿಸುತ್ತಿದ್ದಾರೆ. ಇದೊಂದು ದರಿದ್ರ ಸರ್ಕಾರ. ಇಂತಹ ದರಿದ್ರ ಸರ್ಕಾರವನ್ನು ಹಿಂದೆಂದೂ ನಾನು ನೋಡಿಲ್ಲ ಎಂದರು.
ಈ ದೇಶದ ಚುನಾವಣೆ ನಡೆಯುವಂತಹ ಸಂದರ್ಭದಲ್ಲಿ ಯಾರು ಆಡಳಿತ ಪಕ್ಷದ ಚುಕ್ಕಾಣಿ ಹಿಡಿಯುತ್ತಾರೆ ಎನ್ನುವುದು ಮುಖ್ಯ. ಇದು ದೇಶದ ಚುನಾವಣೆ ಆಗಿದೆ. ದೇಶ ಸುಭದ್ರವಾಗಿದ್ದರೆ, ರಾಜ್ಯ ಸುಭದ್ರವಾಗಿರುತ್ತದೆ. ರಾಜ್ಯ ಸುಭದ್ರವಾಗಿದ್ದರೆ ನಮ್ಮ ಹಳ್ಳಿ ಸುಭದ್ರವಾಗಿರುತ್ತವೆ. ಇಡೀ ದೇಶದಲಿ,್ಲ ವಿಶ್ವದಲ್ಲಿ ನರೇಂದ್ರ ಮೋದಿ ಪ್ರಖ್ಯಾತರಾಗಿದ್ದು, ನರೇಂದ್ರ ಮೋದಿಯವರು ಭಯೋತ್ಪಾದನೆ ಮುಕ್ತ ಭಾರತವನ್ನು ಮಾಡಿದ್ದಾರೆ ಎಂದರು.
ಪ್ರಚಾರ ಸಂದರ್ಭದಲ್ಲಿ ಮಾಜಿ ಸಚಿವ ಸಿ.ಸಿ. ಪಾಟೀಲ್​ ಹಾಜರಿದ್ದರು.

ಬಾಕ್ಸ್​:
ಡೊಳ್ಳು ಬಾರಿಸಿದ ಬೊಮ್ಮಾಯಿ
ಗದಗ ತಾಲೂಕಿನ ಕುರ್ತಕೋಟಿಯಲ್ಲಿ ಚುನಾವಣಾ ಪ್ರಚಾರ ಕಾರ್ಯ ಆರಂಭಿಸಿದ ಬಸವರಾಜ ಬೊಮ್ಮಾಯಿಯವರು ಮೆರವಣಿಗೆಯಲ್ಲಿ ಜಾನಪದ ಕಲಾವಿದರೊಂದಿಗೆ ಡೊಳ್ಳು ಬಾರಿಸಿ ಸಂಭ್ರಮ ಪಟ್ಟರು. ಮಹಿಳೆಯರು ಆರತಿ ಮಾಡಿ ಬರಮಾಡಿಕೊಂಡರು