ಜಿಲ್ಲೆ

ಬರ ಪರಿಹಾರ ನೀಡಲು ಕೇಂದ್ರ ಸರ್ಕಾರವೇ ರಾಜ್ಯ ಸರ್ಕಾರದ ಸಹಾಯಕ್ಕೆ ಬರಬೇಕಾಯಿತು: ಬಸವರಾಜ ಬೊಮ್ಮಾಯಿ

ಗದಗ: ಬರ ಪರಿಹಾರ ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರವೇ ರಾಜ್ಯ ಸರ್ಕಾರದ ನೆರವಿಗೆ ಬರಬೇಕಾಯಿತು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನಲ್ಲಿ ವಿವಿಧ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸುವ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತ‌ನಾಡಿದ ಅವರು,  ಬರ ಪರಿಹಾರ ಕುರಿತು ಕಾಂಗ್ರೆಸ್ ಪ್ರತಿಭಟನೆ ನಡೆಸಿರುವುದಕ್ಕೆ ಹರಿಹಾಯ್ದರು. ಕಳೆದ 10 ವರ್ಷದಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ನೀಡಿದ ಎರಡು ಪಟ್ಟು ಬರಪರಿಹಾರ ಈಗಿನ ನರೇಂದ್ರ ಮೋದಿ ಸರ್ಕಾರ ಕೊಟ್ಟಿದೆ. ಕಾಂಗ್ರೆಸ್ ನವರು ಸರಿಯಾದ ಸಮಯಕ್ಕೆ ದಾಖಲೆಗಳನ್ನು ಕೊಡಲಾರದ್ದು ಇವರ ತಪ್ಪು ಎಂದರು‌. ಸುಪ್ರೀಂ ಕೋರ್ಟ್ ಗೆ ಕೇಂದ್ರ ಸರ್ಕಾರ ಹೇಳಿದೆ. ಚುನಾವಣೆ ಆಯೋಗ ಪರವಾನಿಗೆ ಕೊಟ್ಟರೆ ಕರ್ನಾಟಕಕ್ಕೆ ಪರಿಹಾರ ಕೊಡುತ್ತೇವೆ ಎಂಬ ದೊಡ್ಡ ನಿರ್ಣಯವನ್ನು ಕೇಂದ್ರ ಸರ್ಕಾರ ಮಾಡಿದೆ. ಕೇಂದ್ರ ಸರ್ಕಾರ ಕೊಟ್ಟೆ ಕೊಡುತ್ತದೆ. ಈ ಹಿಂದೆ ಪ್ರವಾಹ ಬಂದಾಗ ನಾವು ಕೇಂದ್ರದ ಅನುದಾನಕ್ಕಾಗಿ ಕಾಯಲಿಲ್ಲ. ನಮ್ಮ ರಾಜ್ಯದ ಬೊಕ್ಕಸದಿಂದ ರೈತರ ಸಹಾಯಕ್ಕೆ ಬಂದೆವು.  ಅದೆ ರೀತಿ  ಈಗಿನ ಕಾಂಗ್ರೆಸ್ ಸರ್ಕಾರ ಮಾಡಬಹುದಿತ್ತು, ಕೊನೆಗೂ ಮಾಡಲಿಲ್ಲ. ಕೊನೆಗೆ ಕೇಂದ್ರ ಸರ್ಕಾರವೇ ಇವರ ಸಹಾಯಕ್ಕೆ ಬರಬೇಕಾಯಿತು ಎಂದು ಹೇಳಿದರು.

ರಾಜ್ಯ ಸರ್ಕಾರ, ಕಾಂಗ್ರೆಸ್ ಪಕ್ಷ ಜನರಿಗೆ ಮೋಸ ಮಾಡುತ್ತಿದೆ.  ಸಂಸತ್ತಿನ 543 ಲೋಕಸಭಾ ಸ್ಥಾನದಲ್ಲಿ ಬಹುಮತಕ್ಕೆ 272 ಸ್ಥಾನ ಬೇಕು. ಕಾಂಗ್ರೆಸ್ ನಿಲ್ಲಿಸಿದ್ದು ಕೇವಲ 230 ಸ್ಥಾನಕ್ಕೆ. ಕಾಂಗ್ರೆಸ್ ಬಹುಮತ ಬರಲು ಸಾಧ್ಯವೇ ಇಲ್ಲ. ಆದರೂ ಗ್ಯಾರಂಟಿ ಭರವಸೆ ನೀಡಿ ಜನರಿಗೆ ಮೋಸ ಮಾಡುತ್ತಿದ್ದಾರೆ. ಇಂತಹ ಮೋಸಕ್ಕೆ ಬಲಿಯಾಗಬೇಡಿ ಅಂತ ಜನರಿಗೆ ಕರೆ ಕೊಡುತ್ತಿದ್ದೆನೆ. ಇಂತಹ ಮೋಸಕ್ಕೆ ಬಲಿಯಾಗಬೇಡಿ ಎಂದು ಮನವಿ ಮಾಡಿದರು.

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಬೇಜವಾಬ್ದಾರಿ ಪಕ್ಷ, ಬೇಜವಾಬ್ದಾರಿ ಗ್ಯಾರಂಟಿ ಕೊಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಕೊಡುವುದು ಶಾಶ್ವತ ಗ್ಯಾರಂಟಿ. ಉಜ್ವಲ ಯೋಜನೆ, ಮನೆ ಕಟ್ಟಿಕೊಡುವುದು, ಅಕ್ಕಿ ಕೊಡಿತ್ತಿದ್ದೆವೆ. ಬದುಕು ಕಟ್ಟಿಕೊಳ್ಳುವ ಗ್ಯಾರಂಟಿಯನ್ನು ಮೋದಿ ಅವರು ಕೊಡುತ್ತಿದ್ದಾರೆ. ಕಾಂಗ್ರೆಸ್ ಎಂದೂ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಅಂತಹದರಲ್ಲಿ ಗ್ಯಾರಂಟಿ ಕೊಟ್ಟು ಜನ್ರಿಗೆ ಮೋಸ ಮಾಡುದ್ದಾರೆ. ಯಾರೂ ಮೋಸ ಹೋಗಬಾರದು ಎಂದು ಕಳಕಳಿ ಮಾಡಿಕೊಳ್ಳುತ್ತೆನೆ. ಹೋದಲ್ಲೆಲ್ಲಾ ಜನ ಸಾಗರ ನೋಡಿದರೆ ಈ ಬಾರಿ 28 ಸ್ಥಾನ ಗೆಲ್ಲುತ್ತೆವೆ ಎಂದರು. ಇನ್ನು ದಿಂಗಾಲೇಶ್ವರ ಸ್ವಾಮಿಜಿ ನಾಮಪತ್ರ ಹಿಂಪಡೆದದ್ದು ಯಾರಿಗೆ ಲಾಭ ಎಂಬ ಪ್ರಶ್ನೆಗೆ ಕಾಯ್ದು ನೋಡೋಣ ಎಂದು ಹೇಳಿದರು.