ಜಿಲ್ಲೆ

ಎಲ್ಲ ದಾನಗಳಲ್ಲಿ ರಕ್ತದಾನ ಶ್ರೇಷ್ಠದಾನ : ಅಪ್ಪುರಾಜ್​

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ

ಎಲ್ಲ ದಾನಗಳಲ್ಲಿ ಶ್ರೇಷ್ಠದಾನ ರಕ್ತದಾನವಾಗಿದೆ. ಒಬ್ಬ ವ್ಯಕ್ತಿಯ ಜೀವನ್ಮರಣದ ವಿಷಯದಲ್ಲಿ ರಕ್ತ ಅತ್ಯಂತ ಪ್ರಮುಖ ಪಾತ್ರ ವಹಿಸುವದು ಎಂದು ಗದಗ ಹೆಲ್ಪಿಂಗ್​ ಹ್ಯಾಂಡ್ಸ್​ ೌಂಡೇಶನ್​ ಅಧ್ಯ ಅಪ್ಪುರಾಜ ಭದ್ರಕಾಳಮ್ಮನಮಠ ಹೇಳಿದರು.

ನಗರದ ನಾಲ್ವಾಡಗಲ್ಲಿಯ ಅಂಗನವಾಡಿ ಕೇಂದ್ರದಲ್ಲಿ ಭಾನುವಾರ ಹೆಲ್ಪಿಂಗ್​ ಹ್ಯಾಂಡ್ಸ್​ ೌಂಡೇಶನ್​ ವತಿಯಿಂದ ಏರ್ಪಡಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ರಕ್ತಕ್ಕೆ ಪರ್ಯಾಯ ಎಂಬುದು ಇಲ್ಲ. ಮಾನವನ ದೇಹದಲ್ಲೇ ಉತ್ಪಾದನೆ ಆಗುವ ರಕ್ತ ಪರಿಶುದ್ಧವಾಗಿರಲು ರಕ್ತದಾನ ಮಾಡುವ ಪ್ರಕ್ರಿಯೆ ವರ್ಷದಲ್ಲಿ ಕನಿಷ್ಠ ಎರಡು ಬಾರಿ ಮಾಡಲೇಬೇಕು. ಹೊಸ ರಕ್ತ ಉತ್ಪಾದನೆಯಾಗಿ ಮನುಷ್ಯ ಚೈತನ್ಯದಿಂದ ಉತ್ಸಾಹದೊಂದಿಗೆ ಕ್ರಿಯಾಶೀಲತೆಯಿಂದ ಕಾರ್ಯ ಮಾಡಲು ಸಾಧ್ಯ. ಆದ್ದರಿಂದ ಎಲ್ಲರೂ ಜನ್ಮದಿನ, ಮದುವೆ ವಾಷಿರ್ಕೋತ್ಸವ, ಹೊಸ ವರ್ಷ ಹೀಗೆ ವಿಶೇಷ ಸಂದರ್ಭಗಳನ್ನು ನೆಪವಾಗಿಸಿಕೊಂಡು ರಕ್ತದಾನ ಮಾಡಬೇಕು ಎಂದರು.

ರಕ್ತದಾನದಿಂದ ಹೊಸರಕ್ತ ಉತ್ಪಾದನೆಗೆ ಅವಕಾಶ ಒಂದೆಡೆಯಾದರೆ ಇನ್ನೊಂದರೆ ತೀವ್ರ ಸಂಕಷ್ಟದಲ್ಲಿರುವ ಜೀವನ್ಮರಣಗಳ ಮಧ್ಯ ತೊಳಲಾಟದಲ್ಲಿರುವ ವ್ಯಕ್ತಿಯ ಜೀವ ಸಂರಣೆಗೆ ಈ ರಕ್ತ ಉಪಯೋಗ ಆಗಬಲ್ಲದು. ಅಂತಹ ಪುಣ್ಯಪ್ರಾಪ್ತಿಯ ಸಂತೃಪ್ತ ಭಾವನೆ ಮೂಡುವ ಸಂತಸದ ಳಿಗೆಗೆ ನಾವೆಲ್ಲರೂ ಅಣಿಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ನಮ್ಮ ಸಂಟನೆ ಪ್ರತಿವರ್ಷ ರಕ್ತದಾನ ಶಿಬಿರ ನಡೆಸಿಕೊಂಡು ಬಂದಿದೆ ಎಂದರು.

ಶಿಬಿರದಲ್ಲಿ 25ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು. ಈ ಸಂದರ್ಭದಲ್ಲಿ ಸಿದ್ದು ಚನ್ನವಿರಶೆಟ್ಟರ, ಪ್ರಶಾಂತ ಪಾಟೀಲ, ನಾಶೀರ್​ ಚಿಕೇನಕೊಪ್ಪ, ಇಾರ್ನ್​ ಡಂಬಳ, ವೀರಪ್ಪ ಲಕ್ಕುಂಡಿ, ವಿ. ಕೆ. ಮಟ್ಟಿ, ರಾಜು ಹುಳ್ಳಿಗೌಡ್ರ ಇತರರು ಇದ್ದರು.