ಜಿಲ್ಲೆ

ರಕ್ತದಾನ ಶ್ರೇಷ್ಠದಾನ: ಡಾ. ಎನ್​. ಬಿ. ಪಾಟೀಲ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ

ಎಲ್ಲ ದಾನಗಳಲ್ಲಿ ರಕ್ತದಾನ ಕೂಡ ಶ್ರೇಷ್ಠವಾಗಿದೆ. ನೀವು ನೀಡುವ ರಕ್ತ ಹಲವಾರು ಜೀವಗಳನ್ನು ಉಳಿಸಲು ಕಾರಣವಾಗುತ್ತದೆ. ಸ್ವಯಂಪ್ರೇರಣೆಯಿಂದ ಎಲ್ಲರೂ ಮುಂದೆ ಬಂದು ರಕ್ತದಾನ ಮಾಡಬೇಕು ಎಂದು ರೋಟರಿ ಡಾ. ಎನ್​. ಬಿ. ಪಾಟೀಲ ಹೇಳಿದರು.

ರೋಟರಿ ಸೆಂಟ್ರಲ್​ ವತಿಯಿಂದ ನಗರದ ಸೇವಾಲಾಲ ಭವನದಲ್ಲಿ ಮಂಗಳವಾರ ಪ್ರಸಕ್ತ ಸಾಲಿನ ನೂತನ ಪದಾಧಿಕಾರಿಗಳ ಸೇವಾದೀೆ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ರಕ್ತದಾನ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮನುಷ್ಯ ದೇಹದಲ್ಲಿ ಕೆಲವನ್ನು ಕೃತಕವಾಗಿ ಅಳವಡಿಸಬಹುದು. ಆದರೆ ರಕ್ತಕ್ಕೆ ಪರ್ಯಾಯವಿಲ್ಲ. ಕೃತಕ ರಕ್ತ ಇಲ್ಲದ ಕಾರಣ ನೀವು ನೀಡುವ ರಕ್ತ ಅತ್ಯಮೂಲ್ಯ. ರೋಟರಿ ಗದಗ ಸೆಂಟ್ರಲ್​ ಪ್ರಸಕ್ತ ಸಾಲಿನ ಆರಂಭದಲ್ಲೇ ಉತ್ತಮ ಕಾರ್ಯ ಕೈಗೊಂಡಿದೆ. ಸಾರ್ವಜನಿಕರಿಗೆ ಉಪಯುಕ್ತವಾಗುವ ಇಂತಹ ಕಾರ್ಯಕ್ರಮಗಳನ್ನು ಸಂ ಸಂಸ್ಥೆಗಳು ಹಮ್ಮಿಕೊಳ್ಳಬೇಖು ಎಂದರು.

ರಕ್ತದಾನ ಶಿಬಿರದಲ್ಲಿ 17 ಜನ ರಕ್ತದಾನ ಮಾಡಿದರು. 25 ಜನರ ರಕ್ತದ ಗುಂಪು ಪರೀೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ರಕ್ತದಾನಿಗಳಿಗೆ ಪ್ರಶಸ್ತಿ ಪತ್ರ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಚೇತನ ಅಂಗಡಿ, ರಾಜು ಉಮನಾಬಾದಿ, ಪ್ರಭು ಗಂಜಿಹಾಳ, ಮೋಹನ ಹುಲಕೋಟಿ, ವಿ. ಕೆ. ಗುರುಮಠ, ಮಲ್ಲಿಕಾರ್ಜುನ ಐಲಿ, ರಾಜು ಕುರಡಗಿ, ಶರಣಬಸಪ್ಪ ಗುಡಿಮನಿ, ಸಿ. ಬಿ.ಹಿರೇಗೌಡರ, ಶಶಿಧರ ದಿಂಡೂರ, ಎಂ. ಸಿ. ಬೇಲೇರಿ, ಎಂ. ಎಂ. ಬಡ್ನಿ, ಪ್ರಕಾಶ ಉಗಲಾಟದ, ಮಲ್ಲಿಕಾರ್ಜುನ ಚಂದಪ್ಪನವರ, ಎಸ್​. ಐ. ಅಣ್ಣಿಗೇರಿ, ವಿಜಯಕುಮಾರ ಹಿರೇಮಠ, ಆರ್​. ಬಿ. ದಾನಪ್ಪಗೌಡರ, ಸಂತೋಷ ತೋಟಗಂಟಿ, ಚಂದ್ರಗೌಡ ಹಿರೇಗೌಡರ ಇತರರು ಇದ್ದರು.