ಜಿಲ್ಲೆ

ಕೇಂದ್ರದಿಂದ ರೈತರಿಗೆ ಬರ ಪರಿಹಾರ: ಉಷಾ ದಾಸರ

Gadag - Shivanand Hiremath

ಗದಗ: ರಾಜ್ಯದ ರೈತರಿಗೆ ಸುಳ್ಳು ಬರವಸೆಗಳನ್ನು ನೀಡಿ ಮತ ಬಿೆ ಬೇಡುತ್ತಿರುವ ಕಾಂಗ್ರೆಸ್​ ಪಕ್ಷವು ರೈತರಿಗೆ ಮೋಸ ಮಾಡುತ್ತಿದೆ. ಇದೇ ಸಮಯದಲ್ಲಿ ರೈತರಿಗೆ ಹಿತಕ್ಕೆ ಸ್ಪಂಧಿಸುವ ಕೇಂದ್ರದ ಬಿಜೆಪಿ ಸರ್ಕಾರದಿಂದ 3454 ಕೋಟಿ ರೂ. ಬರ ಪರಿಹಾರ ಬಿಡುಗಡೆ ಮಾಡಲಾಗಿದೆ ಎಂದು ನಗರಸಭೆ ಅಧ್ಯೆ ಉಷಾ ದಾಸರ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜ್ಯದ ಕಾಂಗ್ರೆಸ್​ ಸರ್ಕಾರ ಬರ ಪರಿಹಾರ ಪಡೆಯಲು ದಾಖಲೆಗಳನ್ನು ನೀಡಲು ವಿಳಂಭ ಧೋರಣೆ ಅನುಸರಿಸಿತ್ತು. ರಾಜ್ಯದ ಜನರಿಗೆ ಸುಳ್ಳು ಮಾಹಿತಿ ನೀಡಿ ದಾರಿ ತಪ್ಪಿಸಿದೆ. ಆದರೆ, ರೈತರ ಹಿತಕ್ಕಾಗಿ ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡಿದೆ. ಪ್ರಸಕ್ತ ಸಾಲಿನ ಕೃಷಿ ಚಟುವಟಿಕೆಗೆ ರಾಜ್ಯದ ರೈತರಿಗೆ ಈ ಪರಿಹಾರ ಮೊತ್ತ ಸಹಕಾರಿ ಆಗಲಿದೆ. ಕಾಂಗ್ರೆಸ್​ ಸರ್ಕಾರ ಇನ್ನಾದರೂ ರೈತರ ವಿಷಯದಲ್ಲಿ ರಾಜಕೀಯ ಮಾಡುವುದು ಬಿಡಬೇಕು. ರೈತರ ಕಷ್ಟಕ್ಕೆ ಸ್ಪಂಧಿಸಬೇಕು ಎಂದು ತಿಳಿಸಿದ್ದಾರೆ.