ಜಿಲ್ಲೆ

ಬಿಜೆಪಿ ಜಗತ್ತಿನಲ್ಲೇ ಅತೀ ಹೆಚ್ಚು ಸದಸ್ಯತ್ವ ಹೊಂದಿದ ಪಕ್ಷ: ರಾಜು ಕುರಡಗಿ

Gadag - Shivanand Hiremath

ಗದಗ: ಸೆಪ್ಟಂಬರ್ 2ರಂದು ಪ್ರಧಾನಿ ನರೇಂದ್ರ ಮೋದಿ ದೆಹಲಿ ಕಛೇರಿಯ ಬಿಜೆಪಿ ಕಛೇರಿಯಲ್ಲಿ ಸದಸ್ಯರಾಗುವ ಮೂಲಕ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದರು. ಭಾರತೀಯ ಜನತಾ ಪಕ್ಷ ಪ್ರತಿ 6ವರ್ಷಕ್ಕೊಮ್ಮೆ ಸದಸ್ಯತ್ವ ನವೀಕರಿಸುತ್ತದೆ. 1980ರಲ್ಲಿ ದಿ: ಅಟಲ್ ಬಿಹಾರಿ ವಾಜಪೇಯಿ ಮೊದಲ ಬಾರಿ ಬಿಜೆಪಿ ಅಧ್ಯಕ್ಷರಾದ ನಂತರ ಸದಸ್ಯತ್ವ ಅಭಿಯಾನ ಆರಂಭವಾಯಿತು. ಅಂದಿನ ಸಮಯದಲ್ಲಿ ಬಿಜೆಪಿಯಿಂದ ಕೇವಲ 2ಸಂಸದರಿದ್ದರು. ಆದರೆ, ಇಂದು ಜಗತ್ತಿನಲ್ಲೇ ಅತೀ ಹೆಚ್ಚು ಸದಸ್ಯರನ್ನು ಹೊಂದಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2016ರಲ್ಲಿ 1ಕೋಟಿಗಿಂತ ಹೆಚ್ಚು ಜನ ಕರ್ನಾಟಕದಲ್ಲಿ ಸದಸ್ಯರಾಗಿದ್ದರು. ಈ ಬಾರಿ 1.5ಕೋಟಿ ಸದಸ್ಯತ್ವ ಗುರಿ ಹೊಂದಲಾಗಿದೆ. ಶಾಸಕ ಸಿ. ಸಿ ಪಾಟೀಲ್, ಡಾ: ಚಂದ್ರು ಲಮಾಣಿ, ಎಂ ಎಲ್ ಸಿ, ಎಸ್ ವ್ಹಿ ಸಂಕನೂರ್ ನಾಯಕತ್ವದಲ್ಲಿ ಸದಸ್ಯತ್ವ ಅಭಿಯಾನವನ್ನು ಗದಗ ಜಿಲ್ಲೆಯಲ್ಲಿ ಹಮ್ಮಿಕೋಳ್ಳಲಾಗಿದೆ. ಯುವ ಮೋರ್ಚಾದ ಸದಸ್ಯರು ಪ್ರತಿ ಹಳ್ಳಿಗಳಿಗೆ ತೆರಳಿ ಈಗಾಗಲೇ ಸದಸ್ಯತ್ವ ಅಭಿಯಾನ ಆರಂಭ ಮಾಡಿದ್ದಾರೆ ಎಂದರು.

ಗದಗ ಜಿಲ್ಲೆಯಲ್ಲಿ ಸೆ. 6ರಂದು ಶಾಸಕ ಸಿ. ಸಿ ಪಾಟೀಲರು ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದರು. ಸಂಸದ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಸಿ. ಸಿ. ಪಾಟೀಲ್, ಎಸ್ ವಿ ಸಂಕನೂರ್, ಡಾ: ಚಂದ್ರು ಲಮಾಣಿ ನಾಯಕತ್ವದಲ್ಲಿ ಜಿಲ್ಲೆಯಲ್ಲಿ ಸದಸ್ಯತ್ವ ಅಭಿಯಾನ ಆರಂಭ ಮಾಡಲಾಗಿದೆ. ಕಳೆದ ಬಾರಿ ಕೇವಲ ಮಿಸ್ ಕಾಲ್ ನೀಡುವ ಮೂಲಕ ಸದಸ್ಯತ್ವ ಪಡೆಯಲಾಗುತ್ತಿತ್ತು. ಆದರೆ, ಈ ಬಾರಿ ಲಿಂಕ್ ತೆರೆದು ಸದಸ್ಯತ್ವ ಪಡೆಯುವುದರೊಂದಿಗೆ ಗುರುತಿನ ಚಿಟಿಯನ್ನು ಡೌನ್ ಲೋಡ್ ಮಾಡಿಕೋಳ್ಳಬೇಕಾಗುತ್ತದೆ ಎಂದು ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಅಕ್ಕಿ ಹೇಳಿದರು.

ದೇಶಾಧ್ಯಂತ ಕೇವಲ 8ದಿನಗಳಲ್ಲಿ ಬರೊಬ್ಬರಿ 2ಕೋಟಿ ಬಿಜೆಪಿ ಸದಸ್ಯರಾಗಿದ್ದಾರೆ. ಇದೊಂದು ದೊಡ್ಡ ಇತಿಹಾಸವಾಗಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರಾಗುತ್ತಾರೆ. ಯುವ ಮೋರ್ಚಾದಿಂದ ಈ ತಿಂಗಳು 14, 15, 16ರಂದು ಜಿಲ್ಲಾ ತಂಡದ 30ಸದಸ್ಯರು 9ಮಂಡಳಗಳಲ್ಲಿ 15ಜನ ಸದಸ್ಯರು, 19ಜಿ. ಪಂ ಕ್ಷೇತ್ರಗಳಲ್ಲಿ 957ಬೂತ್ ಗಳಲ್ಲಿ ಪ್ರತಿಯೊಬ್ಬ ಯುವಕ ಯುವತಿಯರನ್ನು ಸಂಪರ್ಕಿಸಿ ಸದಸ್ಯತ್ವ ಮಾಡುವ ಕಾರ್ಯ ಆಗುತ್ತಿದೆ ಎಂದರು.

ದೇಶಕ್ಕೆ ಯುವಕ-ಯುವತಿಯರ ಪಾತ್ರ ಬಹಳಷ್ಟಿದೆ. ವಿಕಸಿತ ಭಾರತ ಸಂಕಲ್ಪದ ಬಗ್ಗೆ ಕಾಲೇಜ್, ಹಾಸ್ಟೆಲ್, ಮನೆ, ಪಾರ್ಕ್ ಸೇರಿದಂತೆ ಕಟ್ಟ ಕಡೆಯ ಯುವಕರನ್ನು ಸಂಪರ್ಕಿಸಿ ಬಿಜೆಪಿ ಸದಸ್ಯತ್ವ ಪಡೆಯಲು ಪ್ರಯತ್ನಿಸುತ್ತಿದ್ದೇವೆ. ಜಿಲ್ಲೆಯಲ್ಲಿನ 957ಬೂತ್ ಗಳಲ್ಲಿ ಸಂಪರ್ಕಿಸಲು 250ಜನ ಸಕ್ರಿಯವಾಗಿ ಪಾಲ್ಗೊಂಡು ಕೆಲಸ ಆರಂಭಿಸಿದ್ದಾರೆ. ರಾಷ್ಟ್ರದ ನಿರ್ಮಾಣ ಪ್ರಕ್ರಿಯೆಗೆ ಜಿಲ್ಲೆಯ ಯುವಕ ಯುವತಿಯರು ಭಾಗವಹಿಸಬೇಕು ಎಂದರು.

ಈ ಸಂದರ್ಭದಲ್ಲಿ ನವೀನ್ ಕುರ್ತಕೋಟಿ, ಉಮೇಶ್ ಚನ್ನುಪಾಟೀಲ್, ಧರ್ಮರಾಜ್ ಕೊಂಚಿಕೇರಿ, ಸುರೇಶ್ ಹೂಬಸೂರ, ಸಚಿನ್ ಮಡಿವಾಳರ, ಶಿವು ಗೋಟೂರ್, ಕಾಳಪ್ಪ ತೋಟದ್, ಗೋಪಾಲ್ ಗಡ್ಡದ್  ಉಪಸ್ಥಿತರಿದ್ದರು.

ಗದಗ ಜಿಲ್ಲೆಯಲ್ಲಿ ಈವರೆಗೆ 10ಸಾವಿರಕ್ಕಿಂತ ಹೆಚ್ಚು ಸದಸ್ಯರು ನೊಂದಣಿ ಆಗಿದ್ದಾರೆ. ಜಿಲ್ಲೆಯಲ್ಲಿ 4ಲಕ್ಷ ಸದಸ್ಯರ ಗುರಿ ಹೊಂದಲಾಗಿದ್ದು, ಗದಗ ಮತಕ್ಷೇತ್ರದಲ್ಲಿ 75ಸಾವಿರದಿಂದ 1ಲಕ್ಷದ ಗುರಿ ಹೊಂದಲಾಗಿದೆ - ಸಂತೋಷ್ ಅಕ್ಕಿ ಜಿಲ್ಲಾಧ್ಯಕ್ಷ, ಯುವ ಮೋರ್ಚಾ