ಜಿಲ್ಲೆ

ಗದಗ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ "ವಿಶ್ವ ಮಹಿಳಾ ದಿನ'ಆಚರಣೆ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ

ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಶನಿವಾರ ವಿಶ್ವ ಮಹಿಳಾ ದಿನ ಆಚರಿಸಲಾಯಿತು.

ಜಿಲ್ಲಾ ಮಹಿಳಾ ಮೋರ್ಚಾ ಅಧ್ಯೆ ನಿರ್ಮಲಾ ಕೊಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳಾ ಆಥಿರ್ಕ ಸಬಲೀಕರಣ ಮತ್ತು ಆರೋಗ್ಯ ಜಾಗೃತಿ ಮಹಿಳಾ ದಿನಾಚರಣೆಯ ಅಂಗವಾಗಿ, ನಮ್ಮ ಜಿಲ್ಲೆಯ ಮಹಿಳೆಯರ ಆಥಿರ್ಕ ಸಬಲೀಕರಣ ಮತ್ತು ಆರೋಗ್ಯ ಜಾಗೃತಿಗಾಗಿ ಒಂದು ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲು ಉದ್ದೇಶಿಸಲಾಗಿದೆ. ಈ ಕಾರ್ಯಕ್ರಮದಲ್ಲಿ, ಮಹಿಳೆಯರಿಗೆ ಆಥಿರ್ಕ ಸ್ವಾತಂತ್ರ್ಯವನ್ನು ಒದಗಿಸುವ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಲಾಗುವುದು ಎಂದರು.

ಕೇಂದ್ರ ಸರ್ಕಾರದಿಂದ ಆಥಿರ್ಕ ಸಬಲೀಕರಣ ಯೋಜನೆ, ಮುದ್ರಾ ಯೋಜನೆ, ಜನ್​ ಧನ್​ ಯೋಜನೆ, ಸ್ಟಾರ್ಟ್​ ಅಪ್​ ಇಂಡಿಯಾ, ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮ, ಸ್ವಸಹಾಯ ಸಂಗಳ ಆಥಿರ್ಕ ನೆರವು ಸೇರಿದಂತೆ ಹಲವು ಯೋಜನೆಗಳು ಮಹಿಳೆಯ ಸ್ವಾವಲಂಭಿ ಬದುಕಿಗಾಗಿ ಜಾರಿ ಮಾಡಲಾಗಿದೆ. ಈ ಯೋಜನೆಗಳ ಬಗ್ಗೆ ಮಾಹಿತಿ ಅರಿತು ಲಾನುಭವಿಗಳಾಗಬೇಕು ಎಂದರು.

ಡಾ. ರೇಕಾ ಕೊರ್ಲಹಳ್ಳಿ ಮಾತನಾಡಿ, ಮನುಷ್ಯನ ಅಂಗಗಾಳ ಅರಿವು ಮೂಡಿಸಿ ಮನುಷ್ಯ ತಾನು ತನ್ನ ದೇಹ ದಾನ ಮಾಡಿದರೆ ಒಂದು ದೇಹ ದಾನದಿಂದ 75 ಜೀವ ಉಳಿಸಬಹುದು ಎಂದರು.

ಜಯಶ್ರೀ ಹಿರೇಮಠ, ಎಂ. ಎಸ್​. ಕರೀಗೌಡ್ರ, ಜಯಶ್ರೀ ಉಗಲಾಟದ, ಶಾರದಾ ಸಜ್ಜನರ, ಅಶ್ವೀನಿ ಜಗತಾಪ, ಡಾ. ಕಮಲಾ ಅಂಗಡಿ, ಉಮಾ ಕಲ್ಲನಗೌಡ್ರ, ಅಕ್ಕಮ್ಮ ವಸ್ತ್ರದ, ಕಸ್ತೂರಿ ಕಮ್ಮಾರ, ಪದ್ಮೀನಿ ಮುತ್ತಲದಿನ್ನಿ, ಸುಮಂಗಲಾ ಕೊನೆವಾಲ, ಪ್ರಭಾವತಿ ಬೆಳವಣಕಿ, ಯೋಗೇಶ್ವರಿ ಭಾವಿಕಟ್ಟಿ ಇತರರು ಇದ್ದರು.