ಗದಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಂಗಳವಾ ಬಿಜೆಪಿ ಸಭೆ ಜರುಗಿತು. ನಿರ್ಮಲಾ ಕೊಳ್ಳಿ, ರಾಜು ಕುರಡಗಿ. ಎಂ.ಎಸ್​. ಕರೀಗೌಡ್ರ, ಅನೀಲ ಅಬ್ಬಿಗೇರಿ ಇತರರು ಇದ್ದರು. 
ಜಿಲ್ಲೆ

ರಾಜ್ಯದ ಬಾಣಂತಿಯರ ಸಾವಿಗೆ ಕಾಂಗ್ರೆಸ್​ ಸರ್ಕಾರ: ನಿರ್ಮಲಾ ಕೊಳ್ಳಿ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ

ಕಾಂಗ್ರೆಸ್​ ಸರ್ಕಾರದ ನಿರ್ಲಕ್ಷ$್ಯದಿಂದ ರಾಜ್ಯದಲ್ಲಿ ಬಾಣಂತಿಯರು, ಶಿಶಿಗಳು ಸಾವನ್ನಪ್ಪುತ್ತಿವೆ. ಆದರೆ, ಸದನದಲ್ಲಿ ಈ ಕುರಿತು ಸಮಪರ್ಕ ಚರ್ಚೆ ಆಗಲಿಲ್ಲ ಎಂದು ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯೆ ನಿರ್ಮಲಾ ಕೊಳ್ಳಿ ಹೇಳಿದರು.

ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ಜರುಗಿದ ಸಭೆಯಲ್ಲಿ ಮಾತನಾಡಿದ, ರಾಜ್ಯದಲ್ಲಿ ಸರಣಿಯಂತೆ ಬಾಣಂತಿ, ಶಿಶು ಮೃತಪಟರ್ಟರೂ ಅಧಿಕಾರಿಗಳು ಮತ್ತು ಸಚಿವರು ನಿರ್ಲಕ್ಷ$್ಯ ವಹಿಸಿದ್ದಾರೆ. ದುರಹಂಕಾರದಿಂದ ನಡೆದುಕೊಳ್ಳುತ್ತಿರುವ ಅಯೋಗ್ಯ ಸರ್ಕಾರಕ್ಕೆ ತಕ್ಕ ಉತ್ತರ ಕೊಡಬೇಕಾಗಿದೆ. ಸರ್ಕಾರ ತಾಯಂದಿರ ಕಣ್ಣಿರು ವರೆಸುವ ಕೆಲಸ ಮಾಡಬೇಕಿದೆ. ಹಲವು ಹಗರಣಗಳಲ್ಲಿ ಭಾಗಿಯಾದ ಸಿದ್ಧರಾಮಯ್ಯ ಅವರಿಗೆ ಪ್ರಜಾಪ್ರಭುತ್ವದ ಬಗ್ಗೆ ನಿಜವಾಗಿಯೂ ಗೌರವ ಇದ್ದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

ಜಿಲ್ಲಾಧ್ಯ ತೋಟಪ್ಪ ಕುರುಡಗಿ ಮಾತನಾಡಿ, ಜಾನುವಾರುಗಳಿಗೆ ನೀಡಬೇಕಾದ ಔಷಧವನ್ನು ಮನುಷ್ಯರಿಗೆ ನೀಡಲಾಗುತ್ತಿದೆ. ಸರ್ಕಾರದ ತಪ್ಪನ್ನು ವೈದ್ಯರು ಒಪ್ಪಿಕೊಳ್ಳುತ್ತಿದ್ದಾರೆ. ಆದರೆ, ಸಚಿವರು ಒಪ್ಪಿಕೊಳ್ಳುತ್ತಿಲ್ಲ. ಎಲ್ಲಿಯವರೆಗೆ ಈ ಸರ್ಕಾರ ಅಧಿಕಾರದಲ್ಲಿ ಇರುತ್ತದೆಯೋ, ಅಲ್ಲಿಯವರೆಗೆ ಬಾಣಂತಿಯರು ಸುರತವಲ್ಲ. ಬಾಣಂತಿಯರ ಸಾವು ಪ್ರಕರಣದಲ್ಲಿ ಆರೋಗ್ಯ ಸಚಿವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಎಂ. ಎಸ್​. ಕರೀಗೌಡ್ರ, ಅನೀಲ ಅಬ್ಬಿಗೇರಿ, ಅಶ್ವೀನಿ ಜಗತಾಪ, ವಂದನಾ ವರ್ಣೇಕರ, ಅಶ್ವೀನಿ ಅಂಕಲಕೋಟಿ, ಕಮಲಾ ಗೊಂದಿ, ಪಾರ್ವತಿ ಪಟ್ಟಣಶೆಟ್ಟಿ, ಜಯಶ್ರೀ ಅಣ್ಣಿಗೇರಿ, ವಿಜಯಲಕ್ಷಿ$್ಮ ಮಾನ್ವಿ, ಕವಿತಾ ಬಂಗಾರಿ, ಸ್ವಾತಿ ಅಕ್ಕಿ, ಪದ್ಮನಿ ಮುತ್ತಲದಿನ್ನಿ, ಶೇಖವ್ವ ಮಾಸರಡ್ಡಿ ಇತರರು ಇದ್ದರು.