ಗದಗ: ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲಾ ಕಾರ್ಯಾಲಯದಲ್ಲಿ ಭಕ್ತ ಕನಕದಾಸರ ೫೩೭ ನೇ ಜಯಂತೋತ್ಸವವನ್ನು ಆಚರಿಸಲಾಯಿತು.
ಬಿಜೆಪಿ ಗದಗ ಜಿಲ್ಲೆ ಹಾಗು ನಗರ ವತಿಯಿಂದ ಕನಕ ಜಯಂತಿಯAದು ಕನಕನ ಭಾವಚಿತ್ರಕ್ಕೆ ಪುಷ್ಪಾರ್ಪಣೆಯನ್ನ ಮಾಡುವುದರ ಮೂಲಕ ಭಕ್ತ ಶ್ರೇಷ್ಠ ಕನಕರಿಗೆ ನಮನಗಳನ್ನ ಸಲ್ಲಿಸಿದೇವು.
ಈ ಸಂದರ್ಭದಲ್ಲಿ ಬಿಜೆಪಿ ಗದಗ ಜಿಲ್ಲಾಧ್ಯಕ್ಷರಾದ ತೋಟಪ್ಪ(ರಾಜು) ಕುರುಡಗಿ ಮಾತನಾಡಿ ಭಕ್ತ ಶ್ರೇಷ್ಠ ಕನಕರ ಜೀವನ ಚರಿತ್ರೆ ಮತ್ತು ಅವರ ಜೀವನದ ಬಗ್ಗೆ ವಿಸ್ತಾರವಾಗಿ ಮಾತನಾಡಿ ಅವರ ಆದರ್ಶಗಳನ್ನ ನಾವೇಲ್ಲರೂ ಪಾಲಿಸೋಣ ಎಂದು ಹೇಳಿದರು.
ಬಿಜೆಪಿ ಮುಖಂಡರಾದ ಎಂ.ಎಸ್.ಕರೀಗೌಡ್ರ ಮಾತನಾಡಿ ಭಕ್ತಶ್ರೇಷ್ಠ ಕನಕರ ಬಾಲ್ಯದ ಜೀವನ ಮತ್ತು ಅವರು ನೆಡೆದುಬಂದ ದಾರಿ ಎಲ್ಲ ಅವರ ವಿಚಾರವಾಗಿ ಎಳೆ, ಎಳೆಯಾಗಿ ಸಂದರ್ಭೊಚಿತವಾಗಿ ಉದಾಹರಣೆಗಳನ್ನ ಕೊಟ್ಟು ಮಾತನಾಡಿದರು.
ಗದಗ ನಗರ ಮಂಡಲ ಅಧ್ಯಕ್ಷರಾದ ಅನೀಲ ಅಬ್ಬಿಗೇರಿ ರವರು ಮಾತನಾಡಿ ಭಕ್ತಶ್ರೇಷ್ಠ ಕನಕರು ನಮ್ಮೆಲ್ಲರಿಗೂ ಆದರ್ಶರೆಂದು ಕನಕರ ಜಯಂತಿಯನ್ನು ಬಿಜೆಪಿ ಆಡಳಿತದಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಸರ್ಕಾರಿ ಜಯಂತಿ ಯಂದು ರಜೆ ಘೋಷಿಸಿದರು ಎಂದು ಮಾತನಾಡಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಎಸ್.ವಿ.ಸಂಕನೂರ, ಸಿದ್ದಣ್ಣ ಪಲ್ಲೇದ, ಬೂದಪ್ಪ ಹಳ್ಳಿ, ಸುರೇಶ ಹೆಬಸೂರ, ಕುಮಾರ ಗಂಗಿಮಡಿ, ಮಂಜುನಾಥ ಶಾಂತಗೇರಿ, ಕಲ್ಲಯ್ಯ, ಕೆ.ಪಿ.ಕೋಟಿಗೌಡ್ರ, ಸಂತೋಷ ಕಲ್ಯಾಣಿ, ವಾಸು ಹುಯಿಲಗೋಳ, ಅಪ್ಪಣ್ಣ ಟೆಂಗಿನಕಾಯಿ, ಚನ್ನಮ್ಮ ಹುಳಕಣ್ಣವರ, ಕಮಲಾಕ್ಷೀ ಅಂಗಡಿ, ರವಿ ವಗ್ಗನವರ, ವಾಯ್.ಪಿ.ಅಡ್ನೂರ ಹಾಗು ಇನ್ನೂ ಹಲವಾರು ಪ್ರಮುಖರುಗಳು ಉಪಸ್ಥೀತರಿದ್ದರು.