ಜಿಲ್ಲೆ

ರಾಷ್ಟ್ರೀಯತೆಯ ಪುನರುಜ್ಜೀವನಕ್ಕೆ ದೀನ ದಯಾಳ ಉಪಾಧ್ಯಯ ಕೊಡುಗೆ ಅಪಾರ: ನಾಗರಾಜ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ
ಸಾವಿರಾರು ಜಾತಿ ಮತ ಪಂಥ ಧರ್ಮಗಳ ವಿವಿಧ ಸಂಸತಿ ಪರಂಪರೆ ಹೊಂದಿದ ಜನ ಸಮುದಾಯಗಳು ಒಂದೇ ಕುಟುಂಬದವರಂತೆ ಜೀವಿಸಬೇಕೆಂಬ ರಾಷ್ಟ್ರೀಯತೆಯನ್ನು ದೇಶದಲ್ಲಿ ಪುನರುಜ್ಜೀವನ ಗೊಳಿಸುವಲ್ಲಿ ಪಂಡಿತ ದೀನ ದಯಾಳ ಉಪಾಧ್ಯಯ ಅವರ ಕೊಡುಗೆ ಅಪಾರ ಎಂದು ಬಿಜೆಪಿ ಹಿರಿಯ ಮುಖಂಡ ನಾಗರಾಜ ಕುಲಕಣಿ ಹೇಳಿದರು.
ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಗುರುವಾರ ನಡೆದ ಜನಸಂದ ಸಂಸ್ಥಾಪಕರಲ್ಲಿ ಒಬ್ಬರಾದ ಪಂಡಿತ್​ ದೀನ ದಯಾಳ ಉಪಾಧ್ಯಯ ಅವರ 108 ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ಸಿನ ನಿರಂಕುಶ ಪ್ರಭುತ್ವದಿಂದ ದೇಶದ ಏಕತೆ ಸಮಗ್ರತೆ ಮತ್ತು ಅಭಿವೃದ್ಧಿ ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿ ಜನಸಂ ಸ್ಥಾಪಿಸಿದರು. ವ್ಯೆಕ್ತಿಗಿಂತ ಪ, ಪಕ್ಕಿಂತ ದೇಶ ಮೊದಲು ಎಂಬ ಧ್ಯೇಯದೊಂದಿಗೆ ಪ್ರತಿ ಜನಸಾಮಾನ್ಯರಿಗೂ ಒಳಿತಾಗಬೇಕು ಎಂಬುದು ಪಂಡಿತ್​ ಅವರ ಆಚಾರ ವಿಚಾರಗಲಿಂದ ತಿಳಿದು ಬರುತ್ತದೆ. ನಾವೆಲ್ಲ ಅವರನ್ನು ಅನುಸರಿಸಬೇಕು ಎಂದರು.
ಜಿಲ್ಲಾ ಪ್ರಧಾನ ಕಾರ್ಯದಶಿರ್ ಲಿಂಗರಾಜ ಪಾಟೀಲ ಮಾತನಾಡಿ, ಅಂದಿನ ಜನಸಂದಿಂದ ಇಂದಿನ ಬಿಜೆಪಿ ಯವರೆಗೆ ಸಂಟನೆ ವೈಚಾರಿಕತೆ ಮತ್ತು ವಿಚಾರಗಳಿಂದ ವಿಮುಖರಾಗದೆ ಜೀವ ಹಾಗೂ ಜೀವನವನ್ನೇ ಮುಡುಪಾಗಿಟ್ಟ ಅನೇಕ ಮಹನೀಯರಿಂದ ಇಂದು ಬಿಜೆಪಿ ಸಂಖ್ಯಾತ್ಮಕವಾಗಿ ಮತ್ತು ಗುಣಾತ್ಮಕವಾಗಿ ಬೆಳೆಯಲು ಯಶಸ್ವಿಯಾಗಿದೆ ಎಂದರು.
ಶಾಸಕ ಚಂದ್ರು ಲಮಾಣಿ, ಎಂ. ಎಸ್​. ಕರಿಗೌಡ್ರ, ಅನಿಲ ಅಬ್ಬಿಗೇರಿ, ಪಕ್ಕೀರೇಶ ರಟ್ಟೀಹಳ್ಳಿ, ಬುದ್ಧಪ್ಪ ಹಳ್ಳಿ, ಉಷಾ ದಾಸರ, ವಿಜಯಕುಮಾರ ಗಡ್ಡಿ, ಭೀಮಸಿಂಗ ರಾಠೋಡ, ಸಿದ್ದಣ್ಣ ಪಲ್ಲೇದ ಹಲವರು ಇದ್ದರು.