ಜಿಲ್ಲೆ

ಜಿಎಸ್​ಟಿ ಕಡಿತದಿಂದ ಜನಸಾಮಾನ್ಯರು, ವ್ಯಾಪಾರಿಗಳಿಗೆ ಅನುಕೂಲ

ಗದಗ: ಜಿಎಸ್​​ಟಿ ಕಡಿತದಿಂದ ಜನಸಾಮಾನ್ಯರಿಗೆ, ವ್ಯಾಪಾರಿಗಳಿಗೆ ತುಂಬಾ ಅನುಕೂಲವಾಗಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ ಹೇಳಿದರು.
 ನಗರದ ಪತ್ರಿಕಾಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,  ಜಿಎಸ್​​ಟಿ ಸುಧಾರಣೆಯ ಬಗ್ಗೆ ಜನರಿಗೆ ಹಾಗೂ ವ್ಯಾಪಾರಿಗಳಿಗೆ ತಿಳಿಸಿದ್ದೇವೆ. 2047ನೇ ಇಸವಿಗೆ ವಿಕಸಿತ ಭಾರತ ಪರಿವರ್ತನೆ ಆಗಬೇಕೆಂಬ ಮೋದಿಜಿ ಅವರ ಕನಸಿಗೆ ಜಿಎಸ್​​ಟಿ ಸುಧಾರಣೆ ಸಾಕಷ್ಟು ಸಹಾಯ ಮಾಡಲಿದೆ ಎಂದು ತಿಳಿಸಿದರು.
ಸರ್ಕಾರಗಳು ತೆರಿಗೆ ಹೆಚ್ಚಳ ಮಾಡುತ್ತದೆ. ಆದರೆ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮೊದಲ ಬಾರಿಗೆ ತೆರಿಗೆ ಕಡಿಮೆಗೊಳಿಸುವ ಮೂಲಕ ದೇಶದ ಜನತೆಗೆ ದಸರಾ ಉಡುಗೊರೆ ನೀಡಿದ್ದಾರೆ.
 ದೇಶದಲ್ಲಿ ಇಂದಿನಿಂದ ಜಿಎಸ್​​ಟಿ ಸುಧಾರಣೆಯ ಅನುಷ್ಠಾನ ಆಗುತ್ತಿದೆ. ಇಂದು ಐತಿಹಾಸಿಕ ದಿನ. ಇದನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ  ಎಂ.ಎಸ್. ಕರಿಗೌಡ್ರ, ಲಿಂಗರಾಜ ಪಾಟೀಲ, ಉಷಾ ದಾಸರ, ಶ್ರೀಕಾಂತ ದೊಡ್ಡಮನಿ, ಸುರೇಶ ಚಲವಾದಿ, ಉಡಚಪ್ಪ ಹಳ್ಳಿಕೇರಿ, ಅಶೋಕ ಕುಡತಿನಿ ಸೇರಿದಂತೆ ಇತರರು ಇದ್ದರು.