ಗದಗ: ವಿದ್ಯಾಥಿರ್ಗಳು ಕಷ್ಟಪಟ್ಟು ಓದದೆ, ಇಷ್ಟಪಟ್ಟು ಓದಬೇಕು. ಪುಸ್ತಕದಲ್ಲಿರುವದನ್ನು ಮಸ್ತಕದಲ್ಲಿ ಇಟ್ಟುಕೊಂಡು ಪರೀೆಯಲ್ಲಿ ಚೆನ್ನಾಗಿ ಬರೆದು ಪ್ರತಿಭಾನ್ವಿತರಾಗಿ ಹೊರಹೊಮ್ಮಿ ನಿಮ್ಮ ಬದುಕು ಬಂಗಾರ ಮಾಡಿಕೊಳ್ಳಬೇಕು ಎಂದು ವೈದ್ಯ ಡಾ. ಜಿ. ಬಿ. ಬಿಡಿನಹಾಳ ಹೇಳಿದರು.
ತಾಲೂಕಿನ ಲಕ್ಕುಂಡಿ ಗ್ರಾಮದ ಬಾಲಕಿಯರ ಸರಕಾರಿ ಪ್ರೌಢ ಶಾಲೆಯಲ್ಲಿ ಬಿ.ಜಿ.ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನದಿಂದ ಎಸೆಸೆಲ್ಸಿ ಮೊದಲ 5 ಸ್ಥಾನ ಪಡೆದುಕೊಂಡ ಗದಗ ತಾಲೂಕಿನ ಸರ್ಕಾರಿ ಪ್ರೌಢ ಶಾಲಾ ವಿದ್ಯಾಥಿರ್ಗಳಿಗೆ ಪ್ರತಿಭಾ ಪುರಸ್ಕಾರ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಅಡಿದ ಅವರು, ವಿದ್ಯಾಥಿರ್ಗಳು ಕಲಿಯುವ ವಯಸ್ಸಿನಲ್ಲಿ ಕಲಿಯುವನ್ನು ಮಾತ್ರ ಮಾಡಬೇಕು. ಸಮಯ ವ್ಯರ್ಥ ಮಾಡಿಕೊಳ್ಳಬಾರದು. ದುಶ್ಚಟಗಳನ್ನು ರೂಢೀಸಿಕೊಳ್ಳಬಾರದು. ಟಿವಿ ಮತ್ತು ಮೊಬೈಲ್ಗಳಿಂದ ದೂರ ಇದ್ದರೆ ಮಾತ್ರ ಓದಿನಲ್ಲಿ ಗಮನ ಹರಿಸಬಹುದು. ಅಗತ್ಯವಿದ್ದರೆ ಮಾತ್ರ ಮೊಬೈಲ್ ಬಳಕೆ ಮಾಡಬೇಕು. ಜ್ಞಾನಾರ್ಜನೆಗೆ ಸಂಪರ್ಕಕ್ಕೆ ಅಗತ್ಯಕ್ಕೆ ತಕ್ಕಂತೆ ಮೊಬೈಲ್ ಉಪಯೋಗಿಸಬೇಕು ಎಂದರು.
ಶಾಲೆಯ ಪ್ರತಿಭಾನ್ವಿತ ವಿದ್ಯಾಥಿರ್ಗಳಾದ ಗಾಯತ್ರಿ ಹಳ್ಳಿ, ರೋಹಿಣಿ ಮಾಡಲಗೇರಿ, ಶಿವಲೀಲಾ ಅಬ್ಬಿಗೇರಿ, ಸೃಷ್ಠಿ ಮುಸ್ಕಿನಬಾವಿ, ವಿಜಯಲಕ್ಷಿ$್ಮ ಹಳ್ಳಿ ಅವರುಗಳಿಗೆ ಪ್ರತಿಭಾ ಪುರಸ್ಕಾರ, ಪ್ರಮಾಣ ಪತ್ರ, ಕಾಲೇಜ್ ಬ್ಯಾಗ್ಗಳನ್ನು ನೀಡಲಾಯಿತು. ಶಾಲೆಯ ಎಲ್ಲ ಮಕ್ಕಳಿಗೆ ಸಿಹಿ ವಿತರಿಸಿ ಶುಭ ಕೋರಲಾಯಿತು.
ಪ್ರತಿಷ್ಠಾನದ ಅಧ್ಯ ಶಿವಕುಮಾರ ಪಾಟೀಲ ಅವರು ಪ್ರತಿಷ್ಠಾನದ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. ಸುಭಾಸಚಂದ್ರ ಬೆಟದೂರ, ವಿಜಯಲಕ್ಷಿ$್ಮ ಅಂಗಡಿ, ಡಾ. ಶರಣಬಸವ ಚೌಕಿಮಠ, ಡಾ.ಬಸಯ್ಯ ಬೆಳ್ಳೇರಿಮಠ, ಶಿವಪ್ಪ ಕತ್ತಿ, ಆಂಜನೇಯ ಕಟಗಿ, ಸಿದ್ಧಲಿಂಗನಗೌಡ ಪಾಟೀಲ, ಡಾ.ಬಸವರಾಜ ಚನ್ನಪ್ಪಗೌಡ್ರ, ಭಾರತಿ ಪಾಟೀಲ, ನೇಹಾ, ಸುಧಾರಾಣಿ ಸೇರಿದಂತೆ ಇತರರು ಇದ್ದರು.
ಬಾಕ್ಸ್:
ಲಕ್ಕುಂಡಿಯ ಕಿತ್ತೂರ ಚೆನ್ನಮ್ಮ ಬಾಲಕಿಯರ ಪ್ರೌಢ ಶಾಲೆಯ ವಿದ್ಯಾಥಿರ್ಗಳಾದ ಸಂಜನಾ ಗೋಣೆನ್ನವರ ಮತ್ತು ಯಶೋಧಾ ಅಳವಂಡಿ, ನಂದಿತಾ ನರೇಗಲ್ಲ, ನಂದಿನಿ ಅಂಗಡಿ, ಮೇಘಾ ದಾಸರ, ಅಂಕಿತಾ ಪೂಜಾರ ಅವರಿಗೆ ಪ್ರರತಿಷ್ಠಾನದ ವತಿಯಿಂದ ಪ್ರತಿಭಾ ಪುರಸ್ಕಾರ ನೀಡಲಾಯಿತು. ಅದೇ ರೀತಿ ಅಡವಿಸೋಮಾಪೂರ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾಥಿರ್ಗಳಿಗೆ, ನಾಗಾವಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾಥಿರ್ಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.