ಜಿಲ್ಲೆ

ಸಜ್ಜನರ ಸಹವಾಸದಿಂದ ಉತ್ತಮ ಮೌಲ್ಯಗಳು: ಡಾ. ಕುರಡಗಿ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ
ವಿದ್ಯಾಥಿರ್ಗಳ ಜೀವನದಲ್ಲಿ ಶಿಕರು ಮಹತ್ವದ ಬದಲಾವಣೆ ತರಬಲ್ಲರು. ಶಿಕರು ಎಲ್ಲ ಬಲ್ಲ ಸರ್ವರಂತೆ, ಪ್ರತಿಯೊಬ್ಬರ ಬದುಕಿನಲ್ಲೂ ಬೆಳಕು ಬೀರಬಲ್ಲರು ಎಂದು ಡಾ. ಶ್ರೀಧರ ಕುರಡಗಿ ಹೇಳಿದರು.
ತಾಲೂಕಿನ ಅಡವಿ ಸೋಮಾಪೂರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಬಿ.ಜಿ.ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನ ವತಿಯಿಂದ ಸೋಮವಾರ ಏರ್ಪಡಿಸಿದ್ದ ಎಸ್ಸೆಸ್ಸೆಲ್ಸಿ ಪರೀೆಯಲ್ಲಿ ಜಿಲ್ಲೆಗೆ ಮೊದಲ ಮೂರು ಸ್ಥಾನಗಳನ್ನು ಸರ್ಕಾರಿ ಶಾಲೆಯ ವಿದ್ಯಾಥಿರ್ಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ವಿದ್ಯಾಥಿರ್ಗಳು ದುಶ್ಚಟಗಳಿಂದ ದೂರ ಇರಬೇಕು. ಸಜ್ಜನರ ಸಹವಾಸದಿಂದ ಉತ್ತಮ ಮೌಲ್ಯಗಳು ನಮ್ಮ ಬದುಕಿನಲ್ಲಿ ಒಡಮೂಡುತ್ತವೆ. ಅದಕ್ಕಾಗಿ ವಿದ್ಯಾಥಿರ್ಗಳು ಎಲ್ಲರೊಡನೆ ಉತ್ತಮ ಬಾಂಧವ್ಯ ಹೊಂದಿ ಸಹಬಾಳ್ವೆಯ ಹಾದಿಯಲ್ಲಿ ಸಾಗಬೇಕು. ಇದಕ್ಕೆಲ್ಲ ದಾರಿ ತೋರುವವರು ನಮ್ಮ ಗುರುಗಳು ಎಂದರು.
ಡಾ. ಅಜೇಯ ರಾಜ ಮಾತನಾಡಿ, ನಮ್ಮ ಜೀವನದಲ್ಲಿ ಉತ್ತಮ ಹಾಗೂ ನಿದಿರ್ಷ್ಠ ಗುರಿ ಹೊಂದಿರಬೇಕು. ಗುರಿ ಸಾಧನೆಗಾಗಿ ನಿರಂತರ ಪರಿಶ್ರಮ ಪಡಬೇಕು. ಸತತ ಓದು, ತಿಳಿದುಕೊಳ್ಳುವಿಕೆಯಿಂದ ಅಧ್ಯಯನ ಮಾಡಿದರೆ ಉನ್ನತ ಹುದ್ದೆಯನ್ನು ಪಡೆಯಬಹುದು. ವಿದ್ಯಾಥಿರ್ಗಳಿಗೆ ಶಿಸ್ತು ಮುಖ್ಯ. ಹಾಗೆಯೇ ಜವಾಬ್ದಾರಿಯೂ ಸಹ ಅಷ್ಟೇ ಮುಖ್ಯ ಎಂದರು.
ಕಾರ್ಯಕ್ರಮದಲ್ಲಿ ಕವಿತಾ ಜಡಿ, ಬೇಬಿಆಯಿಶಾ ಪೆಂಡಾರಿ, ಕವಿತಾ ಹಾದಿಮನಿ, ಆಕಾಶ ತಳವಾರ, ಪುರುಷೋತ್ತಮ ಹಮ್ಮಿಗಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಶಿವಕುಮಾರ ಪಾಟೀಲ, ಶಂಕ್ರಪ್ಪ ಅಣ್ಣಿಗೇರಿ, ಸಿ. ಎಂ. ಪತ್ತಾರ, ಶಿವಾನಂದ ಖಟವಟೆ, ರೇಶ್ಮಾ ಮುಲ್ಲಾ, ಸಿ. ಜೆ. ವಸ್ತ್ರದ ಇತರರು ಇದ್ದರು.