ಜಿಲ್ಲೆ

ಬಸವೇಶ್ವರ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ.

Gadag - Shivanand Hiremath
ಗಜೇಂದ್ರಗಡ: ತಾಲೂಕಿನ ರಾಜೂರಿನ ಶ್ರೀ ಬಸವೇಶ್ವರ ಕಿರಿಯ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ೭೯ ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ರಾಜೂರಿನ ಗ್ರಾಮ ಪಂಚಾಯತ ಸದಸ್ಯರಾದ ಶ್ರೀ ಶೇಖಪ್ಪ ಮಳಗಿ ಹಾಗೂ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಕೆ. ಬಿ. ಬೆನಕನವಾರಿ ರವರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ ರವರ ಭಾವಚಿತ್ರಕ್ಕೆ ಹೂ ಮಾಲೆ ಅರ್ಪಿಸಿ, ಪೂಜೆ ಸಲ್ಲಿಸಿ, ನಂತರ ಧ್ವಜಾರೋಹಣವನ್ನು ನೆರವೇರಿಸಿದರು.
ಗ್ರಾಮ ಪಂಚಾಯತ ಸದಸ್ಯರಾದ ಶ್ರೀ ಶೇಖಪ್ಪ ಮಳಗಿ ರವರು ಸ್ವಾತಂತ್ರ್ಯ ತಂದುಕೊಡುವಲ್ಲಿ ಮಹಾನ್ ನಾಯಕರ ಕೊಡುಗೆ ಅಪಾರ ಹಾಗೂ ಅವರ ತ್ಯಾಗ, ಬಲಿದಾನದಿಂದ ದೇಶವು ಸ್ವಾತಂತ್ರ್ಯವಾಯಿತು. ಹಾಗಾಗಿ ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆಯನ್ನು ತಿಳಿದುಕೊಂಡು ಹಾಗೂ ಅವರ ಮೌಲ್ಯಗಳನ್ನು ತಮ್ಮ   ನಿಜಜೀವನದಲ್ಲಿ ಅಳವಡಿಸಿಕೊಂಡು ದೇಶ ಕಟ್ಟುವಲ್ಲಿ ಎಲ್ಲರೂ ಕೈಜೋಡಿಸಬೇಕೆಂದರು. ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಕೆ. ಬಿ. ಬೆನಕನವಾರಿ ರವರು ಸ್ವಾತಂತ್ರ್ಯದ ಮಹತ್ವ ಹಾಗೂ ಸದೃಢ ದೇಶ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಹಾಗೂ ಯುವಕರ ಪಾತ್ರ ಮಹತ್ವವಾದದ್ದು ಮತ್ತು ಅದರ ಕುರಿತು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಇದೇ ವೇಳೆ ಗ್ರಾಂ. ಪಂ. ಸದಸ್ಯರಾದ ಶ್ರೀ ಶೇಖಪ್ಪ ಮಳಗಿ ರವರು ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಬುಕ್ ವಿತರಿಸಿದರು. ಹಾಗೆಯೇ ಊರಿನ ಹಿರಿಯರಾದ ಶ್ರೀ ಚಂದನಗೌಡ ಪಾಟೀಲ ರವರು ಶಾಲೆಯ ಎಲ್ಲಾ ಮಕ್ಕಳಿಗೆ ಉಚಿತವಾಗಿ ಆಂಗ್ಲಭಾಷೆಯ ಡಿಕ್ಷನರಿ ನೀಡಿದರು. ವಿದ್ಯಾರ್ಥಿಗಳಾದ ಕು. ಗಣೇಶ ಗೂಳಿ ನಿರೂಪಿಸಿದರು. ಕು. ವಿಜಯಕುಮಾರ ಮಡಿವಾಳರ ಸ್ವಾಗತಿಸಿದರು. ಕು. ನಿಂಗರಾಜ ಕಪ್ಪರದ ವಂದಿಸಿದರು. ಈ ಸಂದರ್ಭದಲ್ಲಿ ಎಲ್ಲಾ ಅತಿಥಿ ಮಹನೀಯರು, ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಕೆ. ಬಿ. ಬೇನಕನವಾರಿ, ಶ್ರೀಮತಿ ಶಕುಂತಲಾ ಬೆನಕನವಾರಿ, ಶ್ರೀಮತಿ ಸುಮಂಗಲ ಗೊರವರ, ಶ್ರೀಮತಿ ಸುಮಾ ಗೌಡರ, ಸಿಬ್ಬಂದಿ ವರ್ಗದವರು, ಪಾಲಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.