ವಿಜಯವಾಣಿ ಸುದ್ದಿಜಾಲ ಗದಗ
ಕರ್ನಾಟಕ ಕಟ್ಟಡ ನಿರ್ಮಾಣ ಕಾಮಿರ್ಕರ ಒಕ್ಕೂಟ, ಅಮರಶಿಲ್ಪಿ ಜಕಣಾಚಾರಿ ಕಟ್ಟಡ ನಿರ್ಮಾಣ ಕಾಮಿರ್ಕರ ಸಂ ಸೇರಿದಂತೆ ವಿವಿಧ ಸಂಗಳ ಆಶ್ರಯದಲ್ಲಿ ನಗರದ ಕಾಟನ್ ಮಾರ್ಕೆಟ್ ರಸ್ತೆಯಲ್ಲಿರುವ ಹಂಜಿಗಿಯವರ ಕಾಂಪ್ಲೆಕ್ಸ್ನಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಪ್ರೋತ್ಸಾಹ, ಸಮವಸ್ತ್ರವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕಾಮಿರ್ಕರು ಒಗ್ಗಟ್ಟಾಗಿ ಬಾಲ ಕಾಮಿರ್ಕರನ್ನು ಗುರುತಿಸಿ ಕಾಮಿರ್ಕ ಪದ್ಧತಿ ನಿಷೇಧಿಸಿ, ಸಮಾಜದ ಮುಖ್ಯವಾಹಿನಿಗೆ ಅವರನ್ನು ತರಬೇಕು ಮತ್ತು ಶಿಣವಂತರನ್ನಾಗಿ ಮಾಡಬೇಕು ಎಂದು ಹೇಳಿದರು.
ಗದಗ ಜಿಲ್ಲಾ ಕಾಮಿರ್ಕ ಇಲಾಖೆ ಅ-ಧಿಕಾರಿ ಶ್ರೀಶೈಲ ಸೋಮನಕಟ್ಟಿ ಮಾತನಾಡಿ, ಕಾಮಿರ್ಕ ಕಲ್ಯಾಣ ಮಂಡಳಿಯಿಂದ ಸಿಗುವ ಕಾಮಿರ್ಕರ ಎಲ್ಲ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಂಡು ಕಾಮಿರ್ಕರ ಮಕ್ಕಳು ಬಾಲಕಾಮಿರ್ಕ, ಕಿಶೋರ ಕಾಮಿರ್ಕರ ಪದ್ಧತಿ ನಿಷೇಧದ ಜನಜಾಗೃತಿಯನ್ನು ಎಲ್ಲ ಕಾಮಿರ್ಕರಿಗೂ ತಿಳಿಯುವಂತೆ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಹೇಳಿದರು.
ಕಾಮಿರ್ಕ ಕಲ್ಯಾಣ ಸಂಸ್ಥೆಯ ಅಧ್ಯ ಮಹಮ್ಮದ ಇಾರ್ನ ಡಂಬಳ ಮಾತನಾಡಿ, ಕಾಮಿರ್ಕ ಕಲ್ಯಾಣ ಸಂಸ್ಥೆಯಿಂದ ಶೈಣಿಕ, ಧಾಮಿರ್ಕ, ಶಿಣಕ್ಕೆ ಪೂರಕವಾಗಿ ಅವಶ್ಯವಿರುವ ವಿದ್ಯಾಥಿರ್ಗಳನ್ನು ಗುರುತಿಸಿ ಅವರಿಗೆ ಸಹಾಯ ಹಸ್ತ ನೀಡುವುದರ ಜೊತೆಗೆ ಕಾಮಿರ್ಕ ಕುಟುಂಬ ಭದ್ರತೆ ಯೋಜನೆಯನ್ನು ಎಲ್ಲ ವರ್ಗದ ಕಾಮಿರ್ಕರಿಗೂ ತಲುಪವ ಹಾಗೆ ಜಿಲ್ಲೆಯ ಸಮಸ್ತ ಕಟ್ಟಡ ಕಾಮಿರ್ಕರ ಅಭಿವೃದ್ಧಿಗೆ ಯೋಜನೆಯನ್ನು ರೂಪಿಸಿ ಪ್ರತಿಯೊಬ್ಬ ಕಾಮಿರ್ಕರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಎಲ್ಲರೊಂದಿಗೆ ಶ್ರಮಿಸುತ್ತೇನೆ ಎಂದು ಹೇಳಿದರು.
ನಗರಸಭೆ ಸದಸ್ಯ ಚಂದ್ರು ಕರಿಸೋಮನಗೌಡರ ಮಾತನಾಡಿ, ಕಾಮಿರ್ಕರ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿದ್ದಕ್ಕೆ ತುಂಬಾ ಸಂತೋಷವಾಗಿದೆ. ಕಾಮಿರ್ಕ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ನನ್ನ ಸಹಕಾರ ಇರುತ್ತದೆ ಎಂದರು.
ವಿವಿಧ ಕ್ರೀಡೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ನವರೀನ ನದಾ, ಜ್ಯೋತಿ ಕುರಟ್ಟಿ, ಪೂಜಾ ಹಾಲನವರ, ಚಿಂಚನಾ ಬೇಟಗೇರಿ, ಹೊನ್ನೆಪ್ಪ ಭಗವತಿ, ಯಲ್ಲಪ್ಪ ಕಿರೇಸೂರ, ತೇಜಸ್ವಿನಿ ಮೇಗಲಮನಿ, ಅನು ಮೇಗಲಮನಿ ಅವರಿಗೆ ಕ್ರೀಡಾ ಸಮವಸ್ತ್ರವನ್ನು ವಿತರಿಸಲಾಯಿತು.
ಉಮರ ಾರೂಕ ಹುಬ್ಬಳ್ಳಿ, ಅಮರಶಿಲ್ಪಿ ಜಕಣಾಚಾರಿ, ಈಶಪ್ಪ ಬಳ್ಳಾರಿ, ಶಂಕರಗೌಡ ಭರಮಗೌಡ್ರ, ನಾಸೀರ ಚಿಕೇನಕೊಪ್ಪ, ಭೀಮಪ್ಪ ಪೂಜಾರ, ಮಹಮ್ಮದ ಈಟಿ, ಮಲ್ಲಪ್ಪ ಜೀವಣ್ಣವರ ಹಲವರು ಇದ್ದರು.