ಗದಗ: ಭಾರತೀಯ ಶಾಲಾಕ್ಯ ತಂತ್ರ ಅಸೋಸಿಯೇಷನ್ ವತಿಯಿಂದ ಪ್ರತಿ ವರ್ಷ ನೀಡುವ ರಾಷ್ಟ್ರೀಯ ಮಟ್ಟದ "ಅತ್ಯುತ್ತಮ ಶಾಲಾಕ್ಯ 2024' ಪ್ರಶಸ್ತಿಯನ್ನು ಗದಗಿನ ಡಾ. ವೀರಯ್ಯ ಆರ್ ಹಿರೇಮಠ ರವರಿಗೆ ನೀಡಲಾಗಿದೆ. ಕೊಪ್ಪಳದ ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದಿಕ್ ವೈದ್ಯಕಿಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಡೀನ್ ಹಾಗೂ ಶಾಲಾಕ್ಯತಂತ್ರ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಾಲಕ್ಯತಂತ್ರ ಕ್ಷೇತ್ರಕ್ಕೆ ವೈದ್ಯಕಿಯ ಸೇವೆ, ಶಿಕ್ಷಣ ಸೇವೆ, ಚಿಕಿತ್ಸಾ ವಿಧಾನಗಳಲ್ಲಿ ಅನ್ವೇಷಣೆಯಲ್ಲಿ ಅವರ ಸಾಧನೆ ಗಮನಿಸಿ ಪ್ರಶಸ್ತಿಯನ್ನು ವಿತರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.