ವಿಜಯವಾಣಿ ಸುದ್ದಿಜಾಲ ಗದಗ
ಸರ್ಕಾರಿ ನೌಕರರ ಸಂದ ಜಿಲ್ಲಾಧ್ಯಕ್ಷರಾಗಿ ರವಿ ಗುಂಜೀಕರ ಸತತವಾಗಿ 3ನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿ, ಹ್ಯಾಟ್ರಿಕ್ ಗೆಲುವಿನ ಮೂಲಕ ಇತಿಹಾಸ ನಿಮಿರ್ಸಿದರು.
ಅಧ್ಯಕ್ಷ ಸ್ಥಾನಕ್ಕೆ ರವಿ ಗುಂಜೀಕರ ಹಾಗೂ ಸತೀಶ ಕಟ್ಟಿಮನಿ ಸ್ಪಧಿರ್ಸಿದ್ದರು. ನೇರ ಹಣಾಹಣಿ ನಡೆಯಲಿದೆ ಎಂದು ಊಹಿಸಲಾಗಿತ್ತು. ಆದರೆ ಗುರುವಾರ ನಾಮಪತ್ರ ಪರಿಶೀಲನೆಯ ವೇಳೆಯಲ್ಲಿ ಸತೀಶ ಕಟ್ಟಿಮನಿ ಅವರ ನಾಮಪತ್ರ ತಿರಸತಗೊಂಡಿತು. ಈ ಹಿನ್ನೆಲೆ ರವಿ ಗುಂಜೀಕರ ಅವರು ಸಂದ ಅಧ್ಯಕ್ಷರಾಗಿ ಅವಿರೊಧ ಆಯ್ಕೆ ಆದರು.
ಹ್ಯಾಟ್ರಿಕ್ ಗೆಲುವು.
ಗದಗ ಜಿಲ್ಲಾ ಸರ್ಕಾರಿ ನೌಕರರ ಸಂಕ್ಕೆ ಸತತ ಮೂರನೇ ಬಾರಿಗೆ ಅವಿರೋಧವಾಗಿ ಆಯ್ಕೆ ಆಗುವ ಮೂಲಕ ಹ್ಯಾಟ್ರಿಕ್ ಗೆಲುವು ಸಾಧಿಸಿ ಇತಿಹಾಸ ನಿಮಿರ್ಸಿದರು. ಪ್ರಸ್ತು ಹಿಂದೂಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಗುಂಜೀಕರ ಎಲ್ಲಾ ಇಲಾಖೆಗಳ ನೌಕರರ ವಲಯದಲ್ಲಿ ಉತ್ತಮ ಬಾಂಧವ್ಯ ಹೊಂದಿದ್ದಾರೆ.
ನ್ಯಾಯಾಲಯದ ಮೆಟ್ಟಿಲೇರಿತ್ತು:
ಜಿಲ್ಲಾ ಸರ್ಕಾರಿ ನೌಕರರ ಅಧ್ಯಕ್ಷರ ಚುನಾವಣೆ ಪ್ರಕ್ರಿಯೆಯಲ್ಲಿ ಚುನಾವಣಾ ಅಧಿಕಾರಿಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಧಾರವಾಡ ಹೈಕೋರ್ಟ ನಲ್ಲಿ ಕೆಲ ಜನರು ಪ್ರಕರಣ ದಾಖಲಿಸಿದ್ದರು. ಆದರೆ ನ್ಯಾಯಾಲಯ ಬುಧವಾರವೇ ಈ ಪ್ರಕರಣದ ಕುರಿತಂತೆ ಸ್ಪಷ್ಟ ನಿರ್ಣಯ ಕೊಟ್ಟು ಪ್ರಕರಣವನ್ನು ಇತ್ಯರ್ಥ ಪಡಿಸಿತ್ತು.
ಅವಿರೋಧ ಹೇಗೆ?
ಅಧ್ಯಕ್ಷ ಸ್ಥಾನಕ್ಕಾಗಿ ಕಣದಲ್ಲಿ ರವಿ ಗುಂಜೀಕರ ಹಾಗೂ ಸತೀಶ ಕಟ್ಟಿಮನಿ ಅವರ ನಾಮಪತ್ರ ಗುರುವಾರ ಪರಿಶೀಲನೆ ನಡೆಯಿತು. ಈ ವೇಳೆ ಇಬ್ಬರೂ ಅಭ್ಯಥಿರ್ಗಳಿಗೆ ಸೂಚಕ, ಅನುಮೋದಕರ ಒಬ್ಬರೇ ಸಹಿ ಮಾಡಿದ್ದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿಗಳು ಸಂದ ಬೈಲಾ ಪ್ರಕಾರ ಮೊದಲು ನಾಮಪತ್ರ ಸಲ್ಲಿಸಿದವರ ನಾಮಪತ್ರವನ್ನು ಊಜಿರ್ತ ಎಂದು ಪರಿಗಣಿಸಿ, ಇನ್ನೊರ್ವರ ನಾಮಪತ್ರ ತಿರಸ್ಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರವಿ ಗುಂಜೀಕರ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.