ವಾಣಿಜ್ಯ ಮಹಾವಿದ್ಯಾಲಯಕ್ಕೆ ಯುವಜನೋತ್ಸವದಲ್ಲಿ ಸತತ ಐದನೇ ಬಾರಿ ಸಮಗ್ರ ವೀರಗ್ರಹಣ ಪ್ರಶಸ್ತಿಗೆ ಆಯ್ಕೆ
ನಗರದ ಆದರ್ಶ ಶಿಕ್ಷಣ ಸಂಸ್ಥೆಯ ಸುವರ್ಣ ಮಹೋತ್ಸವ ಭವನದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ಆದರ್ಶ ಶಿಕ್ಷಣ ಸಂಸ್ಥೆಯ ಶ್ರೀ ವಿ ಆರ್ ಕುಷ್ಟಗಿ ಮೆಮೋರಿಯಲ್ ಕಾಲೇಜ್ ಆಫ್ ಕಾಮರ್ಸ್ ಸಹಯೋಗದಲ್ಲಿ ಗದಗ ಜಿಲ್ಲಾ ವಲಯ ಮಟ್ಟದ ಯುವಜನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಮಾರೋಪ ಸಮಾರಂಭ ಹಾಗೂ ಪ್ರಶಸ್ತಿ ವಿತರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ತಿನ ಮಾನ್ಯ ಶಾಸಕರಾದ ಸನ್ಮಾನ್ಯ ಶ್ರೀ ಎಸ್ ವಿ ಸಂಕನೂರು ರವರು ಪ್ರಶಸ್ತಿಯನ್ನು ವಿತರಿಸಿ ಮಾತನಾಡಿ ಕಲೆ, ಸಾಹಿತ್ಯ, ಸಂಗೀತ, ಕ್ರೀಡೆ ಸಂಸ್ಕೃತಿಗೆ ಹೆಸರುವಾಸಿಯಾಗಿರುವ ನಮ್ಮ ಜಿಲ್ಲೆಯ ಮಣ್ಣಿನ ಗುಣ ವಿಶೇಷವಾಗಿದೆ. ಪುಟ್ಟರಾಜ ಕವಿ ಗವಾಯಿಗಳು, ಭೀಮಸೇನ್ ಜೋಶಿಯರಂತಹ ಮಹಾತ್ಮರು ಹುಟ್ಟಿದ ನಾಡು ನಮ್ಮ ಗದುಗು ಇಂಥ ಜಿಲ್ಲೆಯಿಂದ ವಿವಿಧ ಸ್ಪರ್ಧೆಗಳಲ್ಲಿ ಆಯ್ಕೆಯಾಗುವ ವಿದ್ಯಾರ್ಥಿಗಳು ಬರಿ ವಿಶ್ವವಿದ್ಯಾಲಯಕ್ಕೆ ಮಾತ್ರ ಸೀಮಿತವಾಗಬಾರದು ಅಂತರ ವಿಶ್ವವಿದ್ಯಾಲಯ ಮಟ್ಟದಲ್ಲಿ ಗದುಗಿನ ಕೀರ್ತಿ ಪತಾಕೆಯನ್ನು ಹಾರಿಸಬೇಕು. ಹುಟ್ಟಿದ ಪ್ರತಿಯೊಂದು ಮಕ್ಕಳಲ್ಲಿ ಒಂದಲ್ಲ ಒಂದು ಪ್ರತಿಭೆ ಪಡೆದುಕೊಂಡು ಬಂದಿರುತ್ತದೆ. ಅದನ್ನು ಗುರುತಿಸಿ ಬೆಳಕು ಚೆಲ್ಲುವ ಕೆಲಸ ಶಿಕ್ಷಕರು ಮಾಡಬೇಕು. ದೇಶದ ಸಂಸ್ಕೃತಿ ಮತ್ತು ಕಲೆ ಸಂಸ್ಕಾರ ಬೇರೆ ದೇಶಗಳಿಗೆ ಮಾದರಿಯಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಬೆಳೆಸಿಕೊಂಡು ಹೋಗುವ ಮೂಲಕ ಜಗತ್ತು ನಮ್ಮ ಕಡೆ ನೋಡುವಂತಾಗಬೇಕು ಎಂದರು ತಮ್ಮ ಮಾತುಗಳಲ್ಲಿ ಹಂಚಿಕೊಂಡರು.
ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ.ಪಿ.ಆರ್ ಅಡವಿಯವರು ಮಾತನಾಡಿ ಜಿಲ್ಲೆಯ ವಿವಿಧ ಮಹಾವಿದ್ಯಾಲಯಗಳಿಂದ ಸುಮಾರು 700ಕ್ಕೂ ಹೆಚ್ಚು ಸ್ಪರ್ಧಾಳಗಳು ಈ ಒಂದು ಯುವಜೋತ್ಸವದಲ್ಲಿ ಭಾಗವಹಿಸಿದ್ದೀರಿ ಸೋಲು ಗೆಲುವು ಎರಡನ್ನು ಸಮಾನವಾಗಿ ಸ್ವೀಕರಿಸಿ ಇಂದಿನ ಸೋಲು ಮುಂದಿನ ಗೆಲುವಿನ ಮೆಟ್ಟಿಲಾಗಬೇಕು. ಅದರೊಂದಿಗೆ ಪರಿಶ್ರಮವು ಕೂಡ ಬಹಳಷ್ಟು ಮುಖ್ಯವಾಗಿದೆ ಇಂದಿನ ದಿನಗಳಲ್ಲಿ ಮಕ್ಕಳ ಪ್ರತಿಭೆಯನ್ನು ನಗದೀಕರಿಸಿಕೊಂಡು ಬೆಳೆಯುವ ಕುಡಿಯನ್ನು ಚಿವುಟಿ ಹಾಕುವಂತಹ ಸನ್ನಿವೇಶಗಳನ್ನು ಸಾಕಷ್ಟಿವೆ. ಆದರೆ, ನಿಮ್ಮ ಮಗುವಿನ ಯಶಸ್ಸು ಅದರ ಖುಷಿಯ ಮೇಲೆ ನಿಂತಿದೆ ಎಂದು ಅರಿತುಕೊಳ್ಳುವುದು ಸೂಕ್ತ. ವಿದ್ಯಾರ್ಥಿಗಳಿಗೆ ಆಯ್ಕೆಗೆ ಬೆಂಬಲ ನೀಡಿ, ಆಸಕ್ತಿಯನ್ನು ಬೆಳೆಸಿ. ತರಗತಿಗಳು ಮುಗಿದ ನಂತರ ಅಂತಹ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಿ. ಎಂದು ತಮ್ಮ ನುಡಿಗಳಲ್ಲಿ ಹಂಚಿಕೊಂಡರು.
ಕರ್ನಾಟಕ ವಿಶ್ವವಿದ್ಯಾಲಯ ಗದಗ ಜಿಲ್ಲಾ ವಲಯ ಮಟ್ಟದ ಯುವಜನೋತ್ಸವ ಸ್ಪರ್ಧೆಯಲ್ಲಿ ಸತತ ಐದನೇ ವರ್ಷ ಸಮಗ್ರ ವಿರಗ್ರಾಣಿ ಪ್ರಶಸ್ತಿ ಪಡೆದಕ್ಕಾಗಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಕೆ ವಿ ಕುಷ್ಟಗಿ ಅವರು ಅಭಿನಂದನೆ ಸಲ್ಲಿಸಿದರು. ವೇದಿಕೆ ಮೇಲೆ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಎ.ಡಿ. ಗೋಡಕಿಂಡಿ ಹಾಗೂ ಕಾರ್ಯಕ್ರಮದಲ್ಲಿ ವಿವಿಧ ಮಹಾವಿದ್ಯಾಲಯಗಳ ಆಡಳಿತ ಮಂಡಳಿ ಪ್ರಾಚಾರ್ಯರು ತಂಡದ ನಿರ್ದೇಶಕರು ಉಪಸ್ಥಿತರಿದ್ದರು. ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊಫೆಸರ್ ಕೆ ಗಿರಿರಾಜಕುಮಾರ್ ಸ್ವಾಗತ ಮಾಡಿದರು. ಮಹಾವಿದ್ಯಾಲಯದ ಉಪ ಪ್ರಾಚಾರ್ಯರಾದ ಡಾ. ವಿ ಟಿ ನಾಯಕರವರು ವಂದನಾಪಣೆ ನಡೆಸಿಕೊಟ್ಟರು. ಕಾರ್ಯಕ್ರಮದ ನಿರೂಪಣೆಯನ್ನು ಸಾಂಸ್ಕೃತಿಕ ವಿಭಾಗದ ಚೇರ್ಮನ್ ಪ್ರೊ. ಬಿ ಪಿ ಜೈನರ್ ನಡೆಸಿಕೊಟ್ಟರು ಯುವಜನೋತ್ಸವದಲ್ಲಿ ಎರಡನೇ ಸ್ಥಾನವನ್ನು ಜೆ.ಟಿ ಕಾಲೇಜ್ ಪಡೆದುಕೊಂಡಿದ್ದು 27 ಮಹಾವಿದ್ಯಾಲಯಗಳ ತಂಡಗಳು ಈ ಒಂದು ಯುವಜನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.