ಬೇಸಿಗೆ ಬಂತೆಂದರೆ ಪ್ರತಿಯೊಬ್ಬರೂ ಬಿಸಿಲಿನ ಬೇಗೆ ತಾಳಲಾರದೆ ಅಬ್ಬಬ್ಬಾ. ಎಂತ ಬಿಸಿಲಪ್ಪ ಅನ್ನೋ ಪರಿಸ್ಥಿತಿ ಇದೆ. ಅದರಲ್ಲೂ ಗದಗ ಬೆಟಗೇರಿ ಅವಳಿ ನಗರದಲ್ಲಿ ಬಿಸಿಲಿನ ಧಗೆಯಿಂದ ತಪ್ಪಿಸಿಕೊಳ್ಳಲೂ ಕೂಲ್ ಕೂಲ್ ಜ್ಯೂಸ್ ಅಥವಾ ತಣ್ಣನೆಯ ನೀರು ಬೇಕೇ ಬೇಕು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಿರುವಾಗ ಶಹರ ಪ್ರದೇಶಗಳಲ್ಲಿ ವಾಸಿಸುವ ಮೂಕ ಪ್ರಾಣಿ-ಪಕ್ಷಿಗಳ ಕಥೆ ಏನಾಗಿರಬೇಡ ಅಂತ ಒಮ್ಮೆ ಯೋಚಿಸಿದರೂ ಅಯ್ಯೊ ಪಾಪ ಎನಿಸುತ್ತೆ. ಇದನ್ನೆಲ್ಲ ಗಮನಿಸಿದ ಇಲ್ಲೊಂದು ತಂಡ ಪರಿಸರ ಮತ್ತು ಪ್ರಾಣಿ, ಪಕ್ಷಿಗಳನ್ನೂ ಬದುಕಿಸುವ ಪ್ರಯತ್ನ ನಡೆಸಿ ಪರಿಸರ ಕಾಳಜಿ ಮೆರೆಯುತ್ತಿದೆ. ಅದುವೇ ಗದುಗಿನ ಎ.ಎಸ್. ಎಸ್ ವಾಣಿಜ್ಯ ಮಹಾವಿದ್ಯಾಲಯದ ಎನ್ ಎಸ್ ಎಸ್ ಸ್ವಯಂ ಸೇವಕ ಸೇವಕಿಯರ ತಂಡ.
"ಸೇವ್ ಬರ್ಡ್ ಸೇವ್ ವಾಟರ್" ಎಂಬ ಶೀರ್ಷಿಕೆ ಅಡಿಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮಕ್ಕೆ ಆದರ್ಶ ಶಿಕ್ಷಣ ಸಂಸ್ಥೆಯ ಚೇರ್ಮನರಾದ ಶ್ರೀ ಆನಂದ್ ಪೋತ್ನಿಸ್ ರವರು ಚಾಲನೆ ನೀಡಿ ಪ್ರಾಣಿ-ಪಕ್ಷಿಗಳ ಬಾಯಾರಿಕೆ ನೀಗಿಸಲು ಮುಂದಾದ ಕಾಲೇಜು ವಿದ್ಯಾರ್ಥಿಗಳು ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ ಕಾರಣ ಬೇಸಿಗೆಗಾಲ ಬಂತೆಂದರೆ ಮೂಕಪ್ರಾಣಿಗಳು ನೀರಿಗಾಗಿ ಪರದಾಡುತ್ತವೆ. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆಯ ಎನ್ ಎಸ್ ಎಸ್ ಸ್ವಯಂಸೇವಕ ಸೇವಕೀರು ಪ್ರತಿ ಮನೆ ಮನೆಗೆ ತೆರಳಿ ಎರಡೆರಡು ಮಣ್ಣಿನ ಮಡಕೆಗಳನ್ನು ಕೊಟ್ಟು ಒಂದರಲ್ಲಿ ಪ್ರಾಣಿ-ಪಕ್ಷಿಗಳಿಗೆ ಆಹಾರ ಇನ್ನೊಂದರಲ್ಲಿ ನೀರು ಹಾಕಿ ನೆರಳಿರುವ ಜಾಗ ಅಥವಾ ಮರಕ್ಕೆ ತೂಗು ಬಿಡುವ ಹಾಗೆ ವಿದ್ಯಾರ್ಥಿಗಳೇ ಮನೆಗೆ ಹೋಗಿ ಪಕ್ಷಿಗಳಿಗೆ ನೀರು, ಕಾಳುಗಳನ್ನು ಹಾಕಿ ರಕ್ಷಣೆಗೆ ಮುಂದಾಗಿದ್ದಾರೆ ಪಕ್ಷಿಗಳ ನೀರಿನ ದಾಹ ನೀಗಿಸಲು, ಉಚಿತ ಬುಟ್ಟಿಗಳನ್ನು , ಮಣ್ಣಿನ ಮಡಿಕೆಗಳನ್ನು ಕೊಂಡುಕೊಳ್ಳಲು ಸಂಸ್ಥೆ ಧನ ಸಹಾಯದೊಂದಿಗೆ ಎನ್ ಎಸ್ ಎಸ್ ವಿದ್ಯಾರ್ಥಿಗಳು ತಮ್ಮ ಪಾಕೆಟ್ ಮನಿಗಳನ್ನು ಈ ಒಂದು ಕಾರ್ಯಕ್ಕೆ ಕೊಟ್ಟಿರುವುದು ಬಹಳ ಮೆಚ್ಚುಗೆಯ ಕಾರ್ಯವಾಗಿದೆ. ಒಟ್ಟು 1000 ಮನೆಗಳಿಗೆ 40 ಸ್ವಯಂಸೇವಕ ಸೇವಕಿಯರ ಸಹಕಾರದಿಂದ ಈ ಒಂದು ಮಣ್ಣಿನ ಮಡಕೆಗಳನ್ನ ಮುಟ್ಟಿಸುವ ಕಾರ್ಯ ಹಮ್ಮಿಕೊಳ್ಳಲಾಗಿದೆ ಈ ಒಂದು ಕಾರ್ಯಕ್ಕೆ ಸಂಸ್ಥೆಯ ಪರವಾಗಿ ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಪ್ರೊ. ಬಿ.ಪಿ ಜೈನರ್ ಹಾಗೂ ಅವರ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಲಾಯಿನ್ಸ್ ಶಿಕ್ಷಣ ಸಂಸ್ಥೆಯ ಮಾಜಿ ಚೇರ್ಮನ್ ಶ್ರೀ ಆರ್ ಜೆ ಮೆರವಾಡೆಯವರು ಮಾತನಾಡಿ ನಗರ ಪ್ರದೇಶಗಳಲ್ಲಿ ಕುಡಿವ ನೀರಿಗೆ ಹಾಹಾಕಾರ ಸೃಷ್ಟಿಯಾಗಿ ಹಕ್ಕಿಪಕ್ಷಿಗಳು ತೊಂದರೆ ಎದುರಿಸುವುದು ಸಹಜವಾಗಿದೆ. ಜನ ಬಾಯಾರಿದರೆ ಕುಡಿವ ನೀರು ಖರೀದಿಸಿ ನೀರಿನ ದಾಹ ನೀಗಿಸಿಕೊಳ್ಳುತ್ತಾರೆ. ಆದರೆ, ಮೂಕ ಪ್ರಾಣಿಗಳ ರೋಧನೆ ಹೇಳತೀರದು. ಈ ಸಮಸ್ಯೆ ಅರಿತ ಗದುಗಿನ ವಾಣಿಜ್ಯ ಮಹಾವಿದ್ಯಾಲಯದ ಸ್ವಯಂಸೇವಕರು ಮೂಕ ಪ್ರಾಣಿಗಳಿಗೆ ನೀರು ಪೂರೈಸಿ ರಕ್ಷಿಸುವ ಕಾರ್ಯ ಮಾಡುತ್ತಿದ್ದು ಪ್ರಶಂಸೆ ವ್ಯಕ್ತವಾಗಿದೆ ಎಂದು ತಮ್ಮ ನುಡಿಗಳಲ್ಲಿ ಹಂಚಿಕೊಂಡರು.
ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ಕೆ. ಗಿರಿರಾಜ್ ಕುಮಾರ್ ಅವರು ಮಾತನಾಡಿ ಪ್ಲ್ಯಾಸ್ಟಿಕ್ ಬುಟ್ಟಿಗಳನ್ನು ಬಳಸಿದರೆ ಪಕ್ಷಿಗಳ ಆರೋಗ್ಯದಲ್ಲಿ ಸಮಸ್ಯೆಯಾಗುವುದು ಎಂಬ ದೃಷ್ಟಿಕೋನದಿಂದ ಮಣ್ಣಿನ ಮಡಿಕೆಗಳನ್ನ ಬಳಸಲಾಗಿದೆ. ಆ ಮಣ್ಣಿನ ಮಡಕೆಗಳನ್ನು ಕಾಲೇಜಿನ ಅವಣದಲ್ಲಿ ಗಿಡಗಳಿಗೆ ತೂಗುಹಾಕಿ ವಿದ್ಯಾರ್ಥಿಗಳೇ ಕಾಲೇಜಿಗೆ ಬರುವಾಗ ತಮ್ಮ ತಮ್ಮ ಮನೆಯಲ್ಲಿರುವ ಕಾಳು ತಂದು ಪಕ್ಷಿಗಳ್ನ ರಕ್ಷಿಸುತ್ತಿದ್ದಾರೆ ಕಾರಣ ನೀರು ಮತ್ತು ಆಹಾರ ಬೇಸಿಗೆಯಲ್ಲಿ ಜನರಿಗೆ ಸಿಗುವಷ್ಟು ಸುಲಭವಾಗಿ ಹಕ್ಕಿ, ಪಕ್ಷಿಗಳಿಗೆ ಇಂದಿನ ಕಾಂಕ್ರಿಟ್ ಕಾಡಿನಲ್ಲಿ ನೀರು ಆಹಾರ ಸಿಗಲಾರದೆ ದಾಹ ಮತ್ತು ಹಸಿವು ನೀಗಿಸಿಕೊಳ್ಳಲು ಪ್ರಾಣಿ ಪಕ್ಷಿಗಳು ಅಲೆದಾಡುತ್ತಿವೆ. ಕೆಲ ಸಲ ನೀರು ಮತ್ತು ಆಹಾರದ ಅಭಾವದಿಂದ ಪ್ರಾಣ ಕಳೆದುಕೊಂಡ ಉದಾಹರಣೆಗಳನ್ನು ಕಂಡು ಮುಂದೆ ನೋಡಿದ್ದೇವೆ ಬೇಸಿಗೆಯ ಸುಡು ಬಿಸಿಲಿಗೆ ಮನುಷ್ಯನ ಜತೆಗೆ ಪ್ರಾಣಿ ಪಕ್ಷಿಗಳು ತತ್ತರಿಸುತ್ತಿವೆ ಈ ಪರಿಸ್ಥಿತಿಯಲ್ಲಿ ಪ್ರಾಣಿ ಹಾಗೂ ಪಕ್ಷಿಗಳಿಗೂ ಗುಟುಕು ನೀರು ಮತ್ತು ಆಹಾರ ನೀಡುತ್ತಿರುವುದು ಮಹಾವಿದ್ಯಾಲಯದ ಎನ್ ಎಸ್ ಎಸ್ ಘಟಕದ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಉಪ ಪ್ರಾಚಾರ್ಯರು ಹಾಗೂ ಐಕ್ಯುಎಸಿ ಕೋ-ಆರ್ಡಿನೇಟರ್ ಡಾ. ವಿ. ಟಿ ನಾಯ್ಕರ್, ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಪ್ರೊ. ಬಿ.ಪಿ ಜೈನರ್. ಪ್ರೊ. ಬಸವರಾಜ್ ಟಿ.ಪಿ. ಪ್ರೊ. ಶ್ರೀಮತಿ ಅಕ್ಷತಾ ಎಳ್ಳೂರು, ಸಂಸ್ಥೆಯ ಆಫೀಸ್ ಸುಪ್ರಡೆಂಟ್ ಶ್ರೀ ಪ್ರಾಣೇಶ್ ಬೆಳ್ಳಟ್ಟಿ ವಿದ್ಯಾರ್ಥಿ ಮುಖಂಡರಾದ ಜನಕ ರೆಡ್ಡಿ, ಎಚ್. ಆದರ್ಶ್ ಅಕ್ಕಿ, ಅಭಿಷೇಕ್ ಮಾಗಡಿ ಹಾಗೂ ಮಹಾವಿದ್ಯಾಲಯದ ಶಿಕ್ಷಕ ಹಾಗೂ ಸಿಬ್ಬಂದಿ ವರ್ಗ ಎನ್ ಎಸ್ ಎಸ್ ಸ್ವಯಂಸೇವಕ ಸೇವಕಿಯರು ಈ ಒಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.