ಜಿಲ್ಲೆ

ಚಳಿಯಿಂದ ಬಳಲುತ್ತಿರುವ ಅಸಹಾಯಕರಿಗೆ ಹೊದಿಕೆ ನೀಡಿದ ಕಾಮರ್ಸ್ ಕಾಲೇಜ್ ಎನ್ ಎಸ್ ಎಸ್ ಸ್ವಯಂಸೇವಕರು.

Gadag - Shivanand Hiremath
Gadag:  ಕಳೆದೊಂದು ವಾರದಿಂದ ಜಿಲ್ಲೆಯ ವಾತಾವರಣದಲ್ಲಿ ಬಹಳಷ್ಟು ಬದಲಾವಣೆ ಉಂಟಾಗಿದೆ. ಚಳಿಯ  ವಾತಾವರಣ ಮಂಜಿನ ಜೊತೆಗೆ ಸೀತ ಗಾಳಿ ಹೆಚ್ಚುತ್ತಿದೆ ಉಷ್ಣಾಂಶದಲ್ಲಿ ಭಾರಿ ಏರುಪೇರು ಉಂಟಾಗಿದೆ. ಮೈ ಕೊರೆಯುವ ಚಳಿಗೆ ಅವಳಿ ನಗರದ ಜನರು ಸೇರಿದಂತೆ ಜಿಲ್ಲೆಯಾದ್ಯಂತ ಜನರು ಪರಿತಪಿಸುತ್ತಿದ್ದಾರೆ. ಉಳ್ಳವರು ಚಳಿಯಿಂದ ರಕ್ಷಿಸಿಕೊಳ್ಳಲು ಸ್ವೀಟರ್ ಟೋಪಿ ಹಾಕಿಕೊಂಡಿದ್ದಾರೆ. ಆದರೆ ರಸ್ತೆ ಬದಿಯಲ್ಲಿ ಆಸರೆ ಇಲ್ಲದೆ ಮಲಗಿರುವ ನಿರ್ಗತಿಕರು,ಅಸಹಾಯಕರು ಭಿಕ್ಷಕರು ಚಳಿಯಿಂದ ಬಳಲುತ್ತಿದ್ದಾರೆ ಇದನ್ನ ಗಮನಿಸಿದ ಗದುಗಿನ ಆದರ್ಶ ಶಿಕ್ಷಣ ಸಂಸ್ಥೆಯ ಶ್ರೀ ವಿ.ಆರ್ ಕುಷ್ಟಗಿ ಮೆಮೋರಿಯಲ್ ಕಾಲೇಜ್ ಆಫ್ ಕಾಮರ್ಸ್ ನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸ್ವಯಂಸೇವಕ ಸೇವಕರು
ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಜಿಲ್ಲಾ ಆಸ್ಪತ್ರೆ, ಪ್ರಮುಖ ಬೀದಿಗಳಲ್ಲಿ ಹಾಗೆ ಪುಟ್ಟ ಪುಟ್ಟ ಗುಡಿಸಿಲಿನಲ್ಲಿ ವಾಸವಾಗಿರುವ ಅಲೆಮಾರಿಗಳ ಜನರು ಚಳಿಯಿಂದ ಬಳಲಬಾರದು ಎಂಬ ಉದ್ದೇಶದಿಂದ ಅವರಿರುವ ಜಾಗಗಳಿಗೆ ಹೋಗಿ ಚಾದರಗಳನ್ನ ನೀಡಿ ಮಾನವೀಯತೆಯನ್ನು ಮೆರೆದಿದ್ದಾರೆ.
  ಜಿಲ್ಲೆಯ ಜನರಿಗೆ ಮಳೆ ರಿಲೀಫ್ ಕೊಟ್ಟಿರುವ ಬೆನ್ನಲ್ಲೇ ಚಳಿ ಟೆನ್ಶನ್ ಕೊಡಲು ಶುರುವಾಗಿದೆ ನಿರಂತರವಾಗಿ ಚಳಿಯ ಪ್ರಮಾಣ ಹೆಚ್ಚುತ್ತಾ ಇದೆ ಮೈ ಕೊರೆಯುವ ಚಳಿ ಹೆಚ್ಚುತ್ತಿದೆ. ಇದನ್ನ ಅರಿತುಕೊಂಡ ಎನ್ ಎಸ್ ಎಸ್ ವಿದ್ಯಾರ್ಥಿಗಳು ಸಂಸ್ಥೆಯ ಪದಾಧಿಕಾರಿಗಳು ಹಾಗೂ ಪ್ರಾಚಾರ್ಯರೊಂದಿಗೆ ಚರ್ಚಿಸಿ ಆಸರೆ ಇಲ್ಲದೆ ರಸ್ತೆಯ ಪಕ್ಕದಲ್ಲಿ ನಿಲ್ದಾಣಗಳಲ್ಲಿ ಮಲಗಿರುವ ಅಸಹಾಯಕರಿಗೆ ಹೊದಿಕೆ ನೀಡುವ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳಲಾಗಿದ್ದು ಈ ಒಂದು ಕಾರ್ಯವನ್ನ ಹಮ್ಮಿಕೊಳ್ಳಲು ಒಪ್ಪಿಗೆಯನ್ನು ಸೂಚಿಸಿದರು.
       ಸಂಸ್ಥೆಯ ಚೇರ್ಮನ್ ಶ್ರೀ ಆನಂದ್ ಪೋತ್ನಿಸ್ ಅವರು ಎನ್ ಎಸ್ ಎಸ್ ವಿಭಾಗದ ಈ  ಕಾರ್ಯಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಸ್ವಯಂಸೇವಕ ಸೇವಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಕಾರಣ ಇವತ್ತಿನ ವಿದ್ಯಾರ್ಥಿಗಳು ಮೊಬೈಲ್ ಅನೇಕ ಮಾಧ್ಯಮಗಳಿಂದ ತಮ್ಮ ವೈಯಕ್ತಿಕ ಜೀವನವನ್ನು ದುರುಪಯೋಗಪಡಿಸಿಕೊಳ್ಳುತ್ತಾ ಹಾಳು ಮಾಡಿಕೊಳ್ಳುತ್ತಾ ಇದ್ದಾರೆ ಇವತ್ತು ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳನ್ನು ಅದರೊಂದಿಗೆ ಸಂಸ್ಕಾರ ನೀಡುವುದು ಬಹಳಷ್ಟು ಅವಶ್ಯಕವಾಗಿದೆ. ನಮ್ಮ ಮಹಾವಿದ್ಯಾಲಯದ ಎನ್ ಎಸ್ ಎಸ್ ಸ್ವಯಂಸೇವಕರು ಬಹಳಷ್ಟು ಅತ್ಯುತ್ತಮ ಕಾರ್ಯಗಳನ್ನು ಕೈಗೆತ್ತಿಕೊಳ್ಳುತ್ತಾ ಇರುವುದು ನಮ್ಮ ಸಂಸ್ಥೆಗೆ ಬಹಳಷ್ಟು ತೃಪ್ತಿ ತಂದಿದೆ. ಈ ಒಂದು ಕಾರ್ಯವನ್ನ ಕೈಗೆತ್ತಿಕೊಂಡ ಪ್ರಾಚಾರ್ಯರಾದ ಪ್ರೊ. ಕೆ.  ಗಿರಿರಾಜ ಕುಮಾರ್, ಉಪ ಪ್ರಾಚಾರ್ಯರಾದ ಡಾ. ವಿ.ಟಿ ನಾಯ್ಕರ್, ಸದಾ ಒಂದಿಲ್ಲ ಒಂದು ಕಾರ್ಯಗಳ ಮೂಲಕ ಕ್ರಿಯಾಶೀಲರಾಗಿ ಕಾರ್ಯವನ್ನು ನಿರ್ವಹಿಸುತ್ತಾ ಇರುವ ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಪ್ರೊ. ಬಿ.ಪಿ ಜೈನರ್ ಹಾಗೂ ಸ್ವಯಂಸೇವಕ ಸೇವಕೀಯರನ್ನ ಅಭಿನಂದಿಸಿದ್ದಾರೆ.
        ಮಹಾವಿದ್ಯಾಲಯದ ಉಪ ಪ್ರಾಚಾರ್ಯರಾದ ಡಾ. ವಿ ಟಿ ನಾಯಕರವರು ಮಾತನಾಡಿ ಎರಡು ದಿನದ ಈ ವಿನೂತನ ಕಾರ್ಯಕ್ರಮದಲ್ಲಿ ಒಟ್ಟು 200 ಹೊದಿಕೆ ವಿತರಣಾ ಕಾರ್ಯಕ್ರಮ ಹಮ್ಮಿಕೊಂಡಿದ್ದು. ಒಟ್ಟು 30 ಸ್ವಯಂಸೇವಕ ಸೇವಕರು ಎನ್  ಎಸ್ ಎಸ್ ಕಾರ್ಯಕ್ರಮ ಅಧಿಕಾರಿಗಳೊಂದಿಗೆ ವಿದ್ಯಾರ್ಥಿ ಮುಖಂಡರುಗಳಾದ ಆದರ್ಶ್ ಅಕ್ಕಿ, ಅಭಿಷೇಕ ಮಾಗಡಿ, ಜನಕ ರೆಡ್ಡಿ ಎಚ್ ಉಳಿದೆಲ್ಲ ಸ್ವಯಂ ಸೇವಕರು ಸೇರಿ ಈ ಕಾರ್ಯವನ್ನು ಮಧ್ಯರಾತ್ರಿ ಹಾಗೂ ನಸುಕಿನ ವೇಳೆ ಹಮ್ಮಿಕೊಳ್ಳಲು ತೀರ್ಮಾನಿಸಿದ್ದು ಇವಂದು ಮಾನವೀಯ ಮೌಲ್ಯವುಳ್ಳ ಕಾರ್ಯಕ್ರಮ ಹಮ್ಮಿಕೊಂಡಿದ್ದಕ್ಕಾಗಿ ವಿಭಾಗಕ್ಕೆ ಅಭಿನಂದನೆ ಸಲ್ಲಿಸಿದರು.