Oplus_131072 
ಜಿಲ್ಲೆ

ದೇಶದ ಏಕತೆ ಮತ್ತು ಸಮಗ್ರತೆಗಾಗಿ ಪ್ರತಿಯೊಬ್ಬ ಪ್ರಜೆ ಭ್ರಾತೃತ್ವ ಭಾವನೆ ಬೆಳೆಸಿಕೊಳ್ಳಬೇಕು: ಬಿ.ಪಿ ಜೈನರ

Gadag - Shivanand Hiremath
Gadag: ನಗರದ ಆದರ್ಶ ಶಿಕ್ಷಣ ಸಮಿತಿಯ ಶ್ರೀ ವಿ ಆರ್ ಕುಷ್ಟಗಿ ಮೆಮೋರಿಯಲ್ ಕಾಲೇಜ್ ಆಫ್ ಕಾಮರ್ಸ್ ನ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ಉಕ್ಕಿನ ಮನುಷ್ಯ ಸರದಾರ ಒಳ್ಳೆ ಪಟೇಲ್ ಅವರ ಜಯಂತ್ಯೋತ್ಸವ ನಿಮಿತ್ಯ  ಚರ್ಚಾ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
 ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಪ್ರೊ. ಬಿ.ಪಿ ಜೈನರ ಮಾತನಾಡಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಭಾರತದ ಉಕ್ಕಿನ ಮನುಷ್ಯರೆಂದೇ ಪ್ರಸಿದ್ಧರಾಗಿದ್ದಾರೆ. ದೇಶದ ಏಕತೆ ಮತ್ತು ಸಮಗ್ರತೆಗಾಗಿ ಪ್ರತಿಯೊಬ್ಬ ಭಾರತೀಯ ಪ್ರಜೆಯು ಭ್ರಾತೃತ್ವ ಭಾವನೆಯನ್ನು ಬೆಳೆಸಿಕೊಳ್ಳಬೇಕು.
  ಸಂವಿಧಾನದ ಪೀಠಿಕೆಯಲ್ಲಿ ತಿಳಿಸಿರುವಂತೆ ಭಾರತದ ಪ್ರಜೆಗಳಾದ ನಾವು ಭಾರತವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ರೂಪಿಸುವುದಕ್ಕಾಗಿ ಭಾರತದ ಎಲ್ಲಾ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು, ವಿಚಾರ, ಅಭಿವ್ಯಕ್ತಿ ನಂಬಿಕೆ, ಶ್ರದ್ಧೆ ಮತ್ತು ಉಪಾಸನೆಯ ಸ್ವಾತಂತ್ರ್ಯವನ್ನು ದೊರೆಯುವಂತೆ ಮಾಡುವುದಕ್ಕಾಗಿ ವ್ಯಕ್ತಿಗೌರವ, ದೇಶದ ಏಕತೆ ಮತ್ತು ಸಮಗ್ರತೆಗಾಗಿ ಎಲ್ಲರಲ್ಲಿ ಭ್ರಾತೃತ್ವ ಭಾವನೆಯನ್ನು ಮೂಡಿಸುವುದಕ್ಕೆ ದೃಢಸಂಕಲ್ಪ ಮಾಡಬೇಕು ಅದರೊಂದಿಗೆ ವಿಭಿನ್ನ ಧರ್ಮಗಳು, ಸಂಸ್ಕೃತಿಗಳು ಮತ್ತು ನಂಬಿಕೆಗಳನ್ನು ಹೊಂದಿದ್ದರೂ ಪರಸ್ಪರ ಗೌರವ ಮತ್ತು ಶಾಂತಿಯುತ ಸಹಬಾಳ್ವೆ ನಡೆಸಲು ಪ್ರೋತ್ಸಾಹಿಸಬೇಕು. ಜನರ ನಡುವಿನ ಭಿನ್ನಾಭಿಪ್ರಾಯಗಳನ್ನು ವಿವಾದದ ಮೂಲವೆಂದು ಪರಿಗಣಿಸದೆ, ಎಲ್ಲರೂ ಒಟ್ಟಾಗಿ ಸಾಮಾನ್ಯ ಗುರಿಗಳಿಗಾಗಿ ಕೆಲಸ ಮಾಡಬೇಕೆಂದು ಸ್ವಯಂ ಸೇವಕರನ್ನು ಉದ್ದೇಶಿಸಿ ಮಾತನಾಡಿದರು.
  ಈ ಒಂದು ಚರ್ಚಾ ಸ್ಪರ್ಧೆಯಲ್ಲಿ ಅಂತಿಮವಾಗಿ ಆರು ವಿದ್ಯಾರ್ಥಿಗಳು ಪರವಾಗಿ  ಕು. ವರ್ಷ ಕು. ಭರತ ಸ್ವಾಮಿ ಕು. ಅಕ್ಷಯ್. ವಿರೋಧವಾಗಿ ಕು.ಶಾಂಭವಿ. ಕು ರಮೇಶ್ ಹಂಸನೂರ್. ಕು ಅಭಿಷೇಕ್   ಆಯ್ಕೆ ಮಾಡಿ ಪರ ಮತ್ತು ವಿರೋಧ ಎರಡು ತಂಡಗಳಾಗಿ ಮಾಡಲಾಗಿತ್ತು.
ಅಂತಿಮವಾಗಿ ಪರ ಹಾಗೂ ವಿರೋಧ ಎರಡು ತಂಡಗಳಲ್ಲಿ ಒಬ್ಬೊಬ್ಬರನ್ನ ಆಯ್ಕೆ ಮಾಡಿ ಆ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮುಂದಿನ ಹಂತದ ಸ್ಪರ್ಧೆಗೆ ಆಯ್ಕೆ ಮಾಡಲಾಯಿತು. ಈ ಒಂದು ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಶಿಕ್ಷಕ ಹಾಗೂ ಸಿಬ್ಬಂದಿ ವರ್ಗ ಹಾಗೂ ಸ್ಪರ್ಧೆಯ ಸಂಘಟಿಕರಾದ ನಮೃತಾ ಪಾಟೀಲ್, ಶ್ರೀ ನಾಗನಗೌಡ ಪಾಟೀಲ್, ಬಸವರಾಜ್ ಹತ್ತಿ, ಹೇಮ ಮುಂಡರಿಗಿ ಉಪಸ್ಥಿತರಿದ್ದರು.