Oplus_131072 
ಜಿಲ್ಲೆ

ಕನ್ನಡಿಗರು ಇಂದಿಗೂ ಗುನುಗುವ ಕರ್ನಾಟಕ  ನಾಡಗೀತೆ  ಖ್ಯಾತಿ ಪಡೆದಿದ್ದ " ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು

Gadag - Shivanand Hiremath
Gadag: ನಗರದ ಆದರ್ಶ ಶಿಕ್ಷಣ ಸಮಿತಿಯ ಶ್ರೀ.ವಿ.ಆರ್. ಕುಷ್ಟಗಿ ಮೆಮೋರಿಯಲ್ ಕಾಲೇಜ್ ಆಫ್ ಕಾಮರ್ಸ್ ನ ಆವರಣದಲ್ಲಿ ಸ್ವಾತಂತ್ರ್ಯ ಸಂಗ್ರಾಮ, ಕನ್ನಡಾಭಿಮಾನ, ದೇಶಾಭಿಮಾನ ಹೆಚ್ಚಿಸುವ ಕೆಲಸಕ್ಕಾಗಿ ಸಾಹಿತ್ಯ ಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ನಾರಾಯಣ ರಾಯರು ಜಯಂತೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು
ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ಕೆ ಗಿರಿರಾಜ್ ಕುಮಾರ್ ರವರು ನಾರಾಯಣರಾವರ ಭಾವಚಿತ್ರಕ್ಕೆ ಪುಷ್ಪನರ್ಪಿಸಿ ಮಾತನಾಡಿ ಸರಳ, ನಿರಾಡಂಬರ ವ್ಯಕ್ತಿ ನಾರಾಯಣರಾಯರು ಶುಭ್ರ ಖಾದಿ ಧೋತರ, ಖಾದಿ ಶರ್ಟು, ಕೊರಳನ್ನು ಬಿಗಿಯಾಗಿ ಸುತ್ತಿಕೊಂಡಂತಿದ್ದ ತುಂಬು ತೋಳಿನ ಖಾದಿ ಜೋಧಪುರಿ ಕೋಟು, ಇನ್ನು ತಲೆ ಮೇಲೆ ಅಂದವಾಗಿ ಸುತ್ತಿದ ಖಾದಿ ರುಮಾಲು, ಹೆಗಲ ಮೇಲೊಂದು ಬಿಳಿ ಶಲ್ಯ. ಶ್ರೀಯುತರ ನಿತ್ಯ ಉಡುಪಾಗಿತ್ತು.  1884 ಅಕ್ಟೋಬರ್ 4 ರಂದು ಗದಗದಲ್ಲಿ ಜನಿಸಿದ ಇವರ ತಂದೆ ಕೃಷ್ಣರಾಯರು, ತಾಯಿ ರಾಧಾಬಾಯಿ ಬಾಲ್ಯದ ಶಿಕ್ಷಣವನ್ನು ಗದಗ, ಗೋಕಾಕ ಹಾಗೂ ಧಾರವಾಡಗಳಲ್ಲಿ ಪೂರೈಸಿ ಮುಂದೆ 1902ರಲ್ಲಿ ಧಾರವಾಡದಲ್ಲಿ ಮೆಟ್ರಿಕ್ ಪರೀಕ್ಷೆಯನ್ನು ಮುಗಿಸಿ ಉಚ್ಚ ಶಿಕ್ಷಣಕ್ಕಾಗಿ ಪುಣೆಯ ಫರ್ಗ್ಯೂಸನ್ ಕಾಲೇಜನ್ನು  ಸೇರಿದರು. 1907 ರಲ್ಲಿ ಬಿ.ಎ. ಪದವಿಯನ್ನು ಪಡೆದ ಮುಂದೆ ಧಾರವಾಡದ ವಿಕ್ಟೋರಿಯಾ ಪ್ರೌಢಶಾಲೆಯಲ್ಲಿ ಶಿಕ್ಷಕರಾದರು. ಕೆಲಕಾಲದ ನಂತರ ಶಿಕ್ಷಕ ವೃತ್ತಿಯನ್ನು ರಾಜೀನಾಮೆ ನೀಡಿ ಮುಂಬೈಗೆ ತೆರಳಿ,ಕಾನೂನು ಪದವಿಯನ್ನು ಪಡೆದರು ತದನಂತರ 1911ರಲ್ಲಿ ವಕೀಲಿ ವೃತ್ತಿಯನ್ನು ಗದಗದಲ್ಲಿ ಆರಂಭಿಸಿದರು.
    ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಹುಯಿಲಗೋಳ ನಾರಾಯಣರು ರಚಿಸಿದ ಗೀತೆ ಕರ್ನಾಟಕ ರಾಜ್ಯದ ನಾಡಗೀತೆಯೆಂದು ಖ್ಯಾತಿ ಪಡೆದಿತ್ತು. ಈ ಗೀತೆಯನ್ನು ಬೆಳಗಾವಿಯಲ್ಲಿ ಜರುಗಿದ, 1924 ರ ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಲಾಗಿತ್ತುಮಹಾತ್ಮ ಗಾಂಧಿಯವರುಈ ಅಧಿವೇಶನದ ಅಧ್ಯಕ್ಷರಾಗಿದ್ದರು. ಈ ಗೀತೆಯನ್ನು 1924ರಲ್ಲಿ ಬೆಳಗಾವಿಯಲ್ಲಿ ಜರುಗಿದ ಕಾಂಗ್ರೆಸ್ ಅಧಿವೇಶನದಲ್ಲಿ ಸ್ವಾಗತಗೀತೆಯಾಗಿ ಹಾಡಲಾಗಿತ್ತು. ಈ ಗೀತೆಯನ್ನು ಪದ್ಮಭೂಷಣ ಪ್ರಶಸ್ತಿ ಗಳಿಸಿದ್ದ ಗಂಗೂಬಾಯಿ ಹಾನಗಲ ಅಂದು ಹಾಡಿದ್ದರು.  1970 ರಲ್ಲಿ ಅಧಿಕೃತ ನಾಡಗೀತೆ ಪಟ್ಟಿಯಿಂದ ಇದನ್ನು ತೆಗೆದು ಹಾಕಲಾಯಿತು. ನಾರಾಯಣರಾಯರು ಮೂಲತಃ ನಾಟಕಕಾರರು. ಕನ್ನಡ ರಂಗಭೂಮಿಗಾಗಿ ಕಾಲ್ಪನಿಕ, ಐತಿಹಾಸಿಕ,ಪೌರಾಣಿಕ, ಸಾಮಾಜಿಕ ಹೀಗೆ ವಿವಿಧ ಬಗೆಯ ನಾಟಕಗಳನ್ನು ರಚಿಸಿ ಪ್ರದರ್ಶಿಸಿದರು. ಇವರ ಅನೇಕ ಕವನಗಳು ಅಂದಿನ ಪತ್ರಿಕೆಗಳಾದ ಜೈ ಕರ್ನಾಟಕ ವೃತ್ತ, ಪ್ರಭಾತ, ಧನಂಜಯ ಮೊದಲಾದವುಗಳಲ್ಲಿ ಪ್ರಕಟವಾಗಿವೆ.ನಾರಾಯಣರಾಯರು ತಮ್ಮ ನಾಟಕಗಳಿಗಾಗಿ ಗೀತೆಗಳನ್ನು ರಚಿಸಿದ್ದರು.  ರಾಯರು ಮೂಡಲು ಹರಿಯಿತು ಎಂಬ ಕಾದಂಬರಿಯನ್ನೂ ಬರೆದಿದ್ದರೆಂದು ತಿಳಿದು ಬಂದಿದೆ ಆದರೆ ಈ ಕಾದಂಬರಿಯ ಹಸ್ತಪ್ರತಿ ಈಗ ಲಭ್ಯವಿಲ್ಲ ಇಂತಹ ಅಪ್ಪಟ ಕನ್ನಡ ಮಹಾತ್ಮರನ್ನ ನೆನೆಯುವುದು ನಮ್ಮೆಲ್ಲರ ಸೌಭಾಗ್ಯ ಎಂದು ತಮ್ಮ ಉದ್ಘಾಟನೆ ನುಡಿಗಳಲ್ಲಿ ಹಂಚಿಕೊಂಡರು.
  ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಉಪ ಪ್ರಾಚಾರ್ಯರ ಡಾ. ವಿ ಟಿ ನಾಯ್ಕರ್ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಬಿ.ಪಿ ಜೈನರ, ಡಾ. ಎಸ್ ಡಿ ಬಂಡಾರ್ಕರ, ಪ್ರೊ ಈಶ್ವರ ಯಾವಗಲ್,  ಪ್ರೊ.ಸವಿತಾ ತಿರ್ಲಾಪುರ್, ಪ್ರೊ. ಶಿಲ್ಪ ಕಲಘಟಗಿ ಶ್ರೀ ರವೀಶ್ ಬಿ ಎಸ್ಸಿ, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.