Gadag: ನಗರದ ಆದರ್ಶ ಶಿಕ್ಷಣ ಸಂಸ್ಥೆಗೆ ಆವರಣದಲ್ಲಿ ಭಾರತ ಸರ್ಕಾರ ಮಿನಿಸ್ಟರ್ ಆಫ್ ಯೂತ್ ಅಫೇರ್ಸ್ ಅಂಡ್ ಸ್ಪೋರ್ಟ್ಸ್, ಮೇರಾ ಯುವ ಭಾರತ್ ಗದಗ್ ಆದರ್ಶ ಶಿಕ್ಷಣ ಸಂಸ್ಥೆಯ ಶ್ರೀ ವಿ.ಆರ್ ಕುಷ್ಟಗಿ ಮೆಮೋರಿಯಲ್ ಕಾಲೇಜ್ ಆಫ್ ಕಾಮರ್ಸ್ ನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಶ್ರೀ ಮಹಾವೀರ್ ಮಣಿಕಂಠ ಯುವಕ ಸಂಘ ಸಹಯೋಗದಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರವರ ಜನ್ಮದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶ್ರೀ ದೀನ್ ದಯಾಳ್ ಅವರ ಭಾವಚಿತ್ರಕ್ಕೆ ಮಹಾವಿದ್ಯಾಲಯದ ಉಪ ಪ್ರಾಚಾರ್ಯರು ಹಾಗೂ ಐ ಕ್ಯೂ ಏ ಸಿ ಕೋ ಆರ್ಡಿನೇಟರ್ ಡಾ ವಿ ಟಿ ನಾಯಕರವರು ಪುಷ್ಪನ್ನ ಅರ್ಪಿಸಿ ಮಾತನಾಡಿ. ಪಂಡಿತ್ ದೀನ್ ದಯಾಳ್ ಅವರು ಒಬ್ಬ ಶ್ರೇಷ್ಠ ಅರ್ಥಶಾಸ್ತ್ರಜ್ಞರು ಅಷ್ಟೇ ಅಲ್ಲದೆ ರಾಷ್ಟ್ರಧರ್ಮ ಪಂಚ್ಯಾಜನ್ಯ ಸ್ವದೇಶಿ ಪತ್ರಿಕೆಗಳನ್ನ ಹುಟ್ಟುಹಾಕಿದವರು. ಇವರ ಪ್ರಮುಖ ನಾಟಕಗಳು ಎಂದರೆ ಸಾಮ್ರಾಟ ಚಂದ್ರಗುಪ್ತ ಜಗದ್ಗುರು ಶಂಕರಾಚಾರ್ಯ. ಭಾರತೀಯ ಅರ್ಥ ನೀತಿ ವಿಕಾಸ್ ಕೀ ಏಕ್ ದಿಶಾ ಪೊಲಿಟಿಕಲ್ ಡೈರಿ ರಾಷ್ಟ್ರ ಚಿಂತನೆ ಏಕತಾ ಮಾನವತವಾದ ರಾಷ್ಟ್ರ ಜೀವನ್ಕಿ ದಿಶಾ ಅನೇಕ ಪ್ರಬಂಧಗಳನ್ನು ಈ ಜಗತ್ತಿಗೆ ನೀಡಿದ್ದಾರೆ ಅಂಥ ಒಬ್ಬ ಶ್ರೇಷ್ಠ ಮಹಾತ್ಮರ ಜೀವನ ವಿಚಾರಗಳನ್ನ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಮ್ಮ ಉದ್ಘಾಟನಾ ನುಡಿಗಳಲ್ಲಿ ಹಂಚಿಕೊಂಡರು.
ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಡಿವಿಜನಲ್ ಕೋ ಆರ್ಡಿನೇಟರ್ ಶ್ರೀ ವೀರೇಂದ್ರ ಪಾಟೀಲ ರವರು ಮಾತನಾಡಿ ದೀನ್ ದಯಾಳರು 1918 ರಲ್ಲಿ ಉತ್ತರಪ್ರದೇಶದ ಮಥುರಾ ಜಿಲ್ಲೆಯ ನಗ್ಲಾ ಚಂದ್ರಬಾನ್ ಎನ್ನುವ ಹಳ್ಳಿಯಲ್ಲಿ ಹುಟ್ಟಿದರು. ಇವರ ತಂದೆ ಭಗವತೀಪ್ರಸಾದ್ ಉಪಾಧ್ಯಾಯರು, ವಿದ್ವಾಂಸರು ಹಾಗೂ ಜ್ಯೋತಿಷರಾಗಿದ್ದರು. ತಾಯಿ ರಾಮ್ ಪ್ಯಾರಿ ಇವರು ಗೃಹಿಣಿಯಾಗಿದ್ದರು. ಎಂಟು ವರ್ಷದ ಪ್ರಾಯದಲ್ಲಿ ತಂದೆ ತಾಯಿಯರನ್ನು ಕಳೆದುಕೊಂಡು ಅನಾಥರಾದ ಉಪಾಧ್ಯಾಯರು, ಸೋದರ ಮಾವನ ಸಹಾಯದಿಂದ ವಿದ್ಯಾಭ್ಯಾಸವನ್ನು ಮುಂದುವರಿಸಿದರು. ರಾಜಸ್ಥಾನದ ಪಿಲಾನಿ ಯಲ್ಲಿ ತಮ್ಮ ಪ್ರೌಢಶಿಕ್ಷಣವನ್ನು ಪೂರೈಸಿ, ಕಾನ್ಪುರದ ಸನಾತನ ಧರ್ಮ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಸ್ನಾತಕ ಪದವಿಯನ್ನು ಪಡೆದರು.ಆಗ್ರಾದ ಸೈಂಟ್ ಜೋನ್ಸ್ ಕಾಲೇಜಿನಲ್ಲಿ ಸ್ನಾತಕೋತ್ತರ ಶಿಕ್ಷಣಕ್ಕಾಗಿ ಸೇರಿಕೊಂಡರು ಹೀಗೆ ಅನೇಕ ವಿಚಾರಗಳನ್ನು ತಮ್ಮ ಉಪನ್ಯಾಸದಲ್ಲಿ ವಿವರಿಸಿದ್ದರು.
ಮೇರಾ ಯುವ ಭಾರತ್ ಮುಖ್ಯಸ್ಥರಾದ ಶ್ರೀ ರವಿ ಹೊಂಬಾಳಿ ಮಾತನಾಡಿ ತಾವು ಬೆಳೆಯುವ ಜೊತೆಗೆ ಇತರರನ್ನು ಬೆಳಸುವ ನಾಯಕತ್ವ ಗುಣ ಮೈಗೂಡಿಸಿಕೊಂಡಿದ್ದ ಉಪಾಧ್ಯಾಯರು ಸರಳ ಜೀವಿಯಾಗಿದ್ದರು. ದೀನರ ಬಗ್ಗೆ ದಯೆ, ಕಾಳಜಿ ಹೊಂದಿ ಅವರ ಏಳಿಗೆಗಾಗಿ ತನ್ನ ಸರ್ವಸ್ವವನ್ನು ಮುಡಿಪಾಗಿಟ್ಟರು. ಭಾರತೀಯ ಪರಂಪರೆಯ ಮೂಲತತ್ವವನ್ನು ಜನರಿಗೆ ತಿಳಿಸಲು ರಾಷ್ಟ್ರಧರ್ಮ, ಪಾಂಚಜನ್ಯ, ಸ್ವದೇಶಿ ಪತ್ರಿಕೆಗಳನ್ನು ಹುಟ್ಟುಹಾಕಿದರು. ಪಂಡಿತ್ ದೀನದಯಾಳರ ಆದರ್ಶ ಜೀವನ, ತಾತ್ವಿಕ ಚಿಂತನೆ, ಉದಾರ ವಿಚಾರಧಾರೆಗಳನ್ನು ಇಂದಿನ ಯುವಪೀಳೆಗೆ ಅಳವಡಿಸಿಕೊಳ್ಳಬೇಕು’ ಎಂದು ತಮ್ಮ ನುಡಿಗಳಲ್ಲಿ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಎನ್ ಎಸ್ ಎಸ್ ವಿಭಾಗದ ಮುಖ್ಯಸ್ಥರಾದ ಪ್ರೊ. ಬಿ.ಪಿ ಜೈನರ. ಕುಮಾರ್ ಹನುಮಂತ್ ಹುಲ್ಲೂರು. ಮಹಾವಿದ್ಯಾಲಯದ ವಿದ್ಯಾರ್ಥಿ ಪ್ರತಿನಿಧಿಗಳು ಸ್ವಯಂಸೇವಕರು ಸೇವಕರು ಈ ಒಂದು ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.